ಇಂದು ರಾಷ್ಟ್ರೀಯ ಸಂವಿಧಾನ ದಿನಾಚರಣೆ.
ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ದೇಶ ನಮ್ಮದು. ಈ ಪ್ರಜಾಪ್ರಭುತ್ವದ ಮೂಲಾಧಾರವೇ ನಮ್ಮ ದೇಶದ ಸಂವಿಧಾನ. ಭಾರತದ ಸಂವಿಧಾನ ಇತಿಹಾಸದಲ್ಲಿ ೧೯೪೯ರ ನವೆಂಬರ್ ೨೬ ಅತ್ಯಂತ ಪ್ರಮುಖವಾದ ದಿನ. ಈ ದಿನದಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ, ನಮ್ಮ ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ಪ್ರಮುಖವಾದ ದಿನ. ಆದ್ದರಿಂದ ನವೆಂಬರ್ ೨೬ನ್ನು "ರಾಷ್ಟ್ರೀಯ ಸಂವಿಧಾನ ದಿನ" ವಾಗಿ ಆಚರಿಸಲಾಗುತ್ತಿದೆ.
ಸುಮಾರು ೨ ವರ್ಷ ೧೧ ತಿಂಗಳು ೧೭ ದಿನಗಳ ಕಾಲ ಡಾ.ಬಿ.ಆರ್.ಅಂಬೇಡ್ಕರ್ ಅವರು ನೂರಾರು ತಜ್ಞರೊಂದಿಗೆ ಶ್ರಮವಹಿಸಿದ ಫಲವಾಗಿ, ವಿಶ್ವದಲ್ಲಿಯೇ ನಮ್ಮ ದೇಶದ ಅತಿ ದೊಡ್ಡ ಲಿಖಿತ ಸಂವಿಧಾನ ಸಿದ್ಧವಾಗಿತ್ತು. ಇಡೀ ದೇಶಕ್ಕೆ ಅನ್ವಯವಾಗುವ ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥವೂ ಬಂದಿತ್ತು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತಹ ಮರೆಯಲಾಗದ ದಿನವಿದು.
೨೦೧೫ರ ಅಕ್ಟೋಬರ್ ೧೨ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸುವಾಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು, ನವೆಂಬರ್ ೨೬ನ್ನು ದೇಶದ ಸಂವಿಧಾನ ದಿನವಾಗಿ ಆಚರಿಸುವಂತೆ ಮೊದಲ ಬಾರಿಗೆ ಘೋಷಿಸಿದ್ದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೫ನೇ ಜಯಂತಿ ಹಿನ್ನೆಲೆಯಲ್ಲಿ ಸಂವಿಧಾನ ದಿನವನ್ನು ಆಚರಣೆಗೆ ತರಲಾಯಿತು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವುದು, ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವುದು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಪ್ರತಿ ವರ್ಷವೂ ನವೆಂಬರ್ ೨೬ನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಈ ಸಂವಿಧಾನ ರಚನೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ, ತ್ಯಾಗ, ಅವರ ಹೋರಾಟವನ್ನು ಹಾಗೂ ಅವರ ಕೊಡುಗೆಯನ್ನು ನೆನೆಯುವ ಮೂಲಕ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇಂತಹ ಪವಿತ್ರವಾದ ದಿನದಂದು ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಕಟ್ಟಿಕೊಟ್ಟ ಮಹಾನ್ ನಾಯಕರಾದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ನಾನು ಮನಃಪೂರ್ವಕವಾಗಿ ಸ್ಮರಿಸುತ್ತೇನೆ....
ನಮ್ಮ ಸಂವಿಧಾನದ ಬಗ್ಗೆ ನಮಗೆ ಎಷ್ಟು ಗೊತ್ತು
☘ ಭಾರತದ ಸಂವಿಧಾನ ಸಂಪೂರ್ಣ ಪರಿಚಯ ☘
👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946
👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ
👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211
👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ
👉 ದ್ವಿತೀಯ ಅಧಿವೇಶನ 11 ಡಿಸೆಂಬರ್ 1946
👉ಬಾಗಿಯಾದ ಸದಸ್ಯರ ಸಂಖ್ಯೆ : 211
👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್
👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್
👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ
🔘 ಕರಡು ಸಮಿತಿ
👉ರಚನೆಯಾದ ದಿನಾಂಕ :; 1947 ಅಗಸ್ಟ್ 29
👉ಅಧ್ಯಕ್ಷ :- ಡಾ ಬಿ ಆರ್ ಅಂಬೇಡ್ಕರ್
👉ಒಟ್ಟು ಸದಸ್ಯರ ಸಂಖ್ಯೆ :- 06
🔘 ಸದಸ್ಯರುಗಳು
* ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್
*ಕೆ ಎಮ್ ಮುನ್ಷಿ
*ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ
*ಗೋಪಾಲ ಸ್ವಾಮಿ ಅಯ್ಯಂಗಾರ್
*ಎನ್ ಮಾದವ್ ರಾವ್ (ಇವರು ನಿಧನರಾದಾಗ :- ಡಿ ಪಿ ಕೈಥಾನ್
*ಸಂವಿಧಾನ ಕರಡು ಸಮಿತಿಯ ಎಲ್ಲಾ ಸದಸ್ಯರು ವಿವಿಧ ಕಾರಣಗಳಿಂದ ಗೈರಾದ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಬ್ಬರೇ ಸಂವಿಧಾನ ಬರೆದರು ಹಾಗಾಗಿ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ*
ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು
ಸಯ್ಯದ್ ಮಹ್ಮದ್ ಸಾದುಲ್ಲ
👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949
👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :- 24 ಜನೆವರಿ 1950
👉 ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950
👉 ರಾಷ್ಟ್ ಧ್ವಜ್ ಅಳವಡಿಸಿಕೊಂಡ ದಿನಾಂಕ :- 22 ಜುಲೈ 1947
👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950
👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22 ಭಾಗಗಳು
👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು
👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08
👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :- 12
👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :- 395
👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ ಹೆಚ್ಚು
👉 ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ :- ಯುಗೊಸ್ಲಾವಿಯ
👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :- ಭಾರತ ಸಂವಿಧಾನ
👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600)
👉 ಪ್ರಪಂಚದಲ್ಲಿ ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್
👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ.
👉 ಸಂವಿಧಾನದ ಮೊದಲ ತಿದ್ದುಪಡಿ :& ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951)
👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :- ಅಮೆರಿಕಾ (7 ಕಲಂಗಳನ್ನು ಹೊಂದಿದೆ)
👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :- ಆಲ್ಬಮಾ ಸಂವಿಧಾನ
👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್
👉 ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :- 1947 ಅಗಸ್ಟ್ 15
👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ.
👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :- ಆರು ಕೋಟಿ ನಲ್ವತ್ತು ಲಕ್ಷ ರೂ
👉 ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :- ಕೆ ಎಮ್ ಮುನ್ಷಿ
👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :- ಭಾರ್ಗವದಾಸ್ ಠಾಕೂರ್
👉 1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು
ಆದರೆ ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು.
(ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು)
👉 1995 ರ ಎಲ್ ಐ ಸಿ ಪ್ರಕರಣದಲ್ಲಿ ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ.
👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.
👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು
ಕಾರಣ :- ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ
👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :- 1949 ಅಕ್ಟೋಬರ್ 17
👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ.
👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ.
👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :- ಪ್ರೇಮ್ ಬಿಹಾರಿ ನಾರಾಯಣ ಜಾ
👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :- ನಂದನ್ ಲಾಲ್ ಬೋಸ್
No comments:
Post a Comment
If You Have any Doubts, let me Comment Here