General Knowledge Question and Answers
🌋2009ರಲ್ಲಿ ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿಯನ್ನು ಪಡೆದವರು ಯಾರು ?
ಉತ್ತರ: ಪಂಡಿತ್ ಭೀಮಸೇನ್ ಜೋಷಿ
🌋ವಿಶ್ವಪ್ರಸಿದ್ಧ ಹಂಪಿ ನಗರವು ಯಾವ ನದಿ ದಂಡೆಯಲ್ಲಿದೆ?
ಉತ್ತರ: ತುಂಗಭದ್ರಾ ನದಿ
🌋1894ರಲ್ಲಿ ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?
ಉತ್ತರ: ಫರ್ಡಿನಾಂಡ್ ಕಿಟೆಲ್
🌋ವಿಶ್ವಪ್ರಿಸಿದ್ಧ ಗೋಲ್ ಗುಂಬಜ್ ಎಲ್ಲಿದೆ?
ಉತ್ತರ: ಬಿಜಾಪುರ
🌋ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ಯಾವುದು?
ಉತ್ತರ: ಶ್ರೀನಿವಾಸ
🌋ಯಾವ ಪಟ್ಟಣವನ್ನು ಕರ್ನಾಟಕದ ಸಿಲ್ಕ್ ಟೌನ್ ಎಂದು ಕರೆಯಲಾಗುತ್ತದೆ?
ಉತ್ತರ: ರಾಮನಗರ
🌋ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮವನ್ನು ಹೆಸರಿಸಿ?
ಉತ್ತರ:ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು
🌋ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
ಉತ್ತರ: ಕೆ.ಎಸ್.ನಾಗರತ್ನಮ್ಮ
🌋ಕರ್ನಾಟಕದ ಕಬಡ್ಡಿ ರಾಣಿ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಮಮತಾ ಪೂಜಾರಿ
🌋ಕರ್ನಾಟಕದಲ್ಲಿ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?
ಉತ್ತರ: ಭದ್ರಾವತಿ
🌸'ಪೇಟಲ್ಪಡೆಗುಂ' ಎಂಬುದರಲ್ಲಿರುವ ಪ್ರಯೋಗ
ಉತ್ತರ:- ಕರ್ಮಣಿ
🌸ಮೂರು ಲಘುವಿದ್ದರೆ ಆಗುವ ಗಣ
ಉತ್ತರ:- ನಗಣ
🌸ರುದ್ರಗಣವು ಹೊಂದಿರುವ ಅಂಶಗಳು
ಉತ್ತರ:- ನಾಲ್ಕು
🌸ಜಲಾಲುದ್ದೀನ್ ಖಿಲ್ಜಿಯ ಕಾಲದಲ್ಲಿ ದೆಹಲಿಯ ಸುತ್ತಲು ಪ್ರದೇಶದಲ್ಲಿ ನೆಲೆಸಿದ್ದ ಜನರನ್ನು ಹೊಸ ಮುಸಲ್ಮಾನರೆಂದು ಕರೆದಿದ್ದರು. ಅವರು
ಉತ್ತರ:- ಮಂಗೋಲರು
🌸ಕೆಳಗಿನ ಯಾವ ಸುಲ್ತಾನನು ನೀರಾವರಿ ಕಾರ್ಯಗಳನ್ನು ಪ್ರಾರಂಭಿಸಿದನು?
ಉತ್ತರ:- ಘಿಯಾಸುದ್ದೀನ್ ತುಘಲಖ್
🌸'ಘಜ್-ಇ-ಸಿಕಂದರಿ' ಎನ್ನುವ ಹೊಸ ಮಾಪನದಂಡವನ್ನು ಜಾರಿಯಲ್ಲಿ ತಂದ ದೊರೆ
ಉತ್ತರ:- ಸಿಕಂದರ್ ಲೋಧಿ
🌸ಅಲ್ಲಾವುದ್ದೀನ ಹಸನ್ ಬಹಮನ್ ಷಾ ಇವನು ಬಹಮನಿ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿದ ಸ್ಥಳ
ಉತ್ತರ:- ಗುಲ್ಬರ್ಗಾ
🌸ಕೆಳಗಿನ ಯಾವ ಬಿರುದನ್ನು ಶ್ರೀಕೃಷ್ಣದೇವರಾಯ ಹೊಂದಿರಲಿಲ್ಲ?
ಉತ್ತರ:- ಗಜ ಬೇಂಟೆಕಾರ
🌸ಮೊಘಲರ "ಜಾಗೀರ್" ಎಂಬುದು ದೆಹಲಿ ಸುಲ್ತಾನರ ------- ಗೆ ಸಮಾನವಾಗಿತ್ತು.
ಉತ್ತರ:- ಇಕ್ತಾ
🏖ಯಾವ ವರ್ಷದಲ್ಲಿ ಕರ್ನಾಟಕ ಸರ್ಕಾರವು ಕುವೆಂಪು ಅವರಿಗೆ "ರಾಷ್ಟ್ರಕವಿ" ಎಂದು ಗೌರವಿಸಿತು?
ಉತ್ತರ:- 1958
🏖ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಪ್ರಸಿದ್ಧ ಭಾರತೀಯ ವ್ಯಕ್ತಿ ಯಾರು?
ಉತ್ತರ:- ಜಯಚಾಮರಾಜೇಂದ್ರ ಒಡೆಯರ್
🏖ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಯಾರು.?
ಉತ್ತರ:- ಕುವೆಂಪು
🏖ಯಾವುದನ್ನು ಕರ್ನಾಟಕದ ರೇಷ್ಮೆ ಪಟ್ಟಣ ಎಂದು ಕರೆಯಲಾಗುತ್ತದೆ.?
ಉತ್ತರ:- ರಾಮನಗರ
🏖ಭಾರತದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕರ್ನಾಟಕದ ಪಾಲು.?
ಉತ್ತರ:- ಶೇಕಡಾ 5.85
🏖ಯಾವ ವರ್ಷದಲ್ಲಿ ಕರ್ನಾಟಕ ಸರ್ಕಾರವು ಕುವೆಂಪು ಅವರಿಗೆ "ರಾಷ್ಟ್ರಕವಿ" ಎಂದು ಗೌರವಿಸಿತು?
ಉತ್ತರ:- 1958
🏖ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಪ್ರಸಿದ್ಧ ಭಾರತೀಯ ವ್ಯಕ್ತಿ ಯಾರು?
ಉತ್ತರ:- ಜಯಚಾಮರಾಜೇಂದ್ರ ಒಡೆಯರ್
🏖ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಯಾರು.?
ಉತ್ತರ:- ಕುವೆಂಪು
🏖ಕರ್ನಾಟಕದ ರಾಜ್ಯ ಗೀತೆ ಯಾವುದು?
ಉತ್ತರ:- ಜಯ ಭಾರತ ಜನನಿಯ ತನುಜಾತೆ
🌸---------ರ ಕಾಲದ ಆಳ್ವಿಕೆಯಲ್ಲಿ ಫ್ರೆಂಚ್ ಡಾಕ್ಟರ್ ಫ್ರೆಂಕೋಯಿಸ್ ಬೆರ್ನಿಯರ್ ಭಾರತವನ್ನು ಸಂದರ್ಶಿಸಿದನು.
ಉತ್ತರ:-- ಷಹಜಹನ್ ಮತ್ತು ಔರಂಗಜೇಬ್
🌸ಕೆಳಗಿನ ಯಾವ ಸ್ಥಳ ಮೊಘಲ್ ಸಾಮ್ರಾಜ್ಯದ ಅಕ್ಬರನ ಆಳ್ವಿಕೆಯ ಕಾಲದಲ್ಲಿ ವಾಯವ್ಯ ದಿಕ್ಕಿನ ಸರಹದ್ದು ಆಗಿರಲಿಲ್ಲ?
ಉತ್ತರ:- ಬದಕಷಾಹ
🌸ಷಹಜಹಾನ್ ನಿರ್ಮಿಸಿದ ಮೋತಿ ಮಸಜೀದ್ ಯಾವ ಸ್ಥಳದಲ್ಲಿದೆ.
ಉತ್ತರ:- ಆಗ್ರಾ
🌸ನೈಲ್ ನದಿಯ ಹುಟ್ಟಿಗೆ ------- ಕಾರಣ ಎಂದು ಈಜಿಪ್ಟಿಯನ್ನರು ನಂಬಿದ್ದಾರೆ.
ಉತ್ತರ:- ಡಿ ಓಸಿರೀಸ್
🌸ಪ್ರೊಟೆಸ್ಟಂಟ್ ಚಳವಳಿಯ ಮುಖ್ಯ ಉದ್ದೇಶ
ಉತ್ತರ:- ಲಂಚಖೋರ ನಡೆವಳಿಕೆಗಳಿಂದ ಚರ್ಚನ್ನು ಮುಕ್ತಗೊಳಿಸುವುದು.
🌸ರಷ್ಯಾದ ಸಮಾಜವಾದಿ ರಾಜ್ಯವನ್ನು ಸ್ಥಾಪಿಸಿದವರು ಯಾರು?
ಉತ್ತರ:- ಲೆನಿನ್
🌸ಅರ್ಥಶಾಸ್ತ್ರವು ಒಂದು
ಉತ್ತರ:- ನಾರ್ಮೆಟಿವ್ ಮತ್ತು ಧನಾತ್ಮಕ ವಿಜ್ಞಾನ
🌸'ವೆಲ್ತ್ ಆಫ್ ನೆಶನ್ಸ್' ಗ್ರಂಥ ಪ್ರಕಟವಾದ ವರ್ಷ
ಉತ್ತರ:-1776
🌸ಹಸಿರು ಕ್ರಂತಿಯು ಬಹಳ ಪರಿಣಾಮಕಾರಿಯಾದದ್ದು
ಉತ್ತರ:- ಪಂಜಾಬ್ ಮತ್ತು ಹರಿಯಾಣದಲ್ಲಿ
🌸ಯೋಜನಾ ಆಯೋಗವು ಒಂದು
ಉತ್ತರ:- ಖಾಯಂ ಸಂಸ್ಥೆ
🌸ಉದ್ದಿಮೆ ಘಟಕವು ಯಾವುದರ (Firm) ಒಂದು ಅಂಶವೆಂದರೆ
ಉತ್ತರ:- ಕೈಗಾರಿಕೆ
🌸ಭಾರತದ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು
ಉತ್ತರ:- ಕಡಿಮೆಯಾಗುತ್ತಿದೆ
🌸ಐ ಡಿ ಐ ಇದು
ಉತ್ತರ:- ಮೂಲ ಸೌಕರ್ಯ ಅಭಿವೃದ್ಧಿ ಸೂಚ್ಯಂಕ
🌸ಜೀವ ವಿಕಾಸ ಸಿದ್ಧಾಂತದ ಪಿತಾಮಹ
ಉತ್ತರ:- ಚಾರ್ಲ್ಸ್ ಡಾರ್ವಿನ್
🌸ಜೀವಕೋಶ ಎಂಬ ಪದವನ್ನು ಮೊದಲು ಬಳಸಿದವರು
ಉತ್ತರ:- ರಾಬರ್ಟ್ ಹುಕ್
🌸 ಸ್ನಾಯು ಶಾಸ್ತ್ರವು ಇದರ ಅಧ್ಯಯನ
ಉತ್ತರ:- ಮಾಸಖಂಡಗಳು
🌸ಮುಂಗಾಲಿನಲ್ಲಿರುಯವ ಒಟ್ಟು ಮೂಳೆಗಳು (Tarsal bones)
ಉತ್ತರ:- 7 ಮೂಳೆಗಳು
🌸ಪ್ರಾಥಮಿಕ ಆಹಾರ ಜೀರ್ಣಕ್ರಿಯೆಯು ಆಗುವುದು ಇಲ್ಲಿ
ಉತ್ತರ:- ಬಾಯಿ
🌸ನೀರಿನಲ್ಲಿ ಕರಗುವ ಜೀವಸತ್ವಗಳು
ಉತ್ತರ:- B ಮತ್ತು C ಜೀವಸತ್ವಗಳು
No comments:
Post a Comment
If You Have any Doubts, let me Comment Here