Dakshina Kannada District Civil PC 2nd Provisional Selection List 2022
ಸಿಪಿಸಿ/ಮಪಿಸಿ/ಸೇವಾನಿರತ ನೇಮಕಾತಿ 2022-23 ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿ
ವಿಷಯ:
ಪೊಲೀಸು ಕಾನ್ಸ್‌ಟೇಬಲ್ (ಸಿವಿಲ್)(ಪುರುಷ & ಮಹಿಳಾ)(ತೃತೀಯ ಅಂಗ ಪುರುಷ ಮಹಿಳಾ) ಹಾಗೂ ಸೇವಾ ನಿರತ & ಬ್ಯಾಕ್‌ಲಾಗ್, ಮಿಕ್ಕುಳಿದ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎರಡನೇ ತಾತ್ಕಾಲಿಕ ಆಯ್ಕೆಪಟ್ಟಿ.
ಉಲ್ಲೇಖ:
1. ಕರ್ನಾಟಕ ರಾಜ್ಯ ಪೊಲೀಸು ಲಿಪಿಕ ಸೇವೆಗಳನ್ನು ಒಳಗೊಂಡ (ನೇಮಕಾತಿ)(ತಿದ್ದುಪಡಿ) ನಿಯಮಗಳು 2014, 2016, 2020 ಮತ್ತು 2021
2. ಅಧಿಸೂಚನೆ ಸಂಖ್ಯೆ: 06/ನೇಮಕಾತಿ-4/2022-23 ದಿನಾಂಕ: 12-10-2022 & ತಿದ್ದುಪಡಿ ಅಧಿಸೂಚನೆ (ವಯೋಮಿತಿಗೆ) ದಿನಾಂಕ: 09-11-2022
3. ಈ ಕಚೇರಿಯಿಂದ ಹೊರಡಿಸಲಾದ ಪ್ರಥಮ ತಾತ್ಕಾಲಿಕ ಆಯ್ಕೆ ಪಟ್ಟಿ ໖: 03-09-2024
ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ ಉಲ್ಲೇಖ(1)ರ ಕರ್ನಾಟಕ ರಾಜ್ಯ ಪೊಲೀಸು ಅಪಿಕ ಸೇವೆಗಳನ್ನು ಒಳಗೊಂಡ(ನೇಮಕಾತಿ)(ತಿದ್ದುಪಡಿ) ನಿಯಮಗಳ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸು ಘಟಕದಲ್ಲಿ ಖಾಲಿ ಇದ್ದ 30 ಸಂಖ್ಯೆಯ ನಾಗರೀಕ ಪೊಲೀಸು ಕಾನ್ಸ್ ಟೇಬಲ್(ಪುರುಷ) ಮತ್ತು 10 ಸಂಖ್ಯೆಯ ನಾಗರೀಕ ಪೊಲೀಸು ಕಾನ್ಸ್‌ಟೇಬಲ್ (ಮಹಿಳಾ) ಹುದ್ದೆಗಳ ನೇರ ನೇಮಕಾತಿಗಾಗಿ ಉಲ್ಲೇಖ(2)ರಂತೆ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಗೆಜೆಟ್ ನಲ್ಲಿ ಪ್ರಕಟಿಸಲಾದಂತೆ, ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನಾಗರೀಕ ಪೊಲೀಸು ಕಾನ್ಸ್‌ಟೇಬಲ್ ಹುದ್ದೆಗೆ ಅನ್ವಯವಾಗುವ ನೇಮಕಾತಿ ಪ್ರಕ್ರಿಯೆಗಳಾದ ಲಿಖಿತ ಪರೀಕ್ಷೆಯನ್ನು ದಿನಾಂಕ: 25-02-2024 ರಂದು ನಡೆಸಲಾಗಿದ್ದು, ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ 105 ಅಭ್ಯರ್ಥಿಗಳಿಗೆ ದೈಹಿಕ ಅರ್ಹತೆ ಮತ್ತು ಸಾಮರ್ಥ್ಯ ಪರೀಕ್ಷೆಗಳನ್ನು ದಿನಾಂಕ: 18-07-2024 ರಂದು ನಡೆಸಲಾಗಿರುತ್ತದೆ.
ದೈಹಿಕ ಅರ್ಹತೆ ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಉಲ್ಲೇಖಿತ ಅಧಿಸೂಚನೆ ಪ್ರಕಾರ ಮೇರಿಟ್ ಆಧಾರಿತ 1:1 ಪ್ರಥಮ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ತಯಾರಿಸಿ, ಈ ಕೆಳಕಂಡ ಷರತ್ತಿಗೊಳಪಟ್ಟು ಉಲ್ಲೇಖ(3)ರಂತೆ ಪ್ರಕಟಿಸಲಾಗಿದೆ.
> ಈ ಆಯ್ಕೆಯು ಅಭ್ಯರ್ಥಿಗಳ ಚಾರಿತ್ರ್ಯ ಹಿನ್ನೆಲೆ, ಮೀಸಲಾತಿ ಕೋರಿರುವ ಪ್ರಮಾಣ ಪತ್ರ/ ಮೂಲ ದಾಖಲಾತಿಗಳ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ. ವೈದ್ಯಕೀಯ ಪರೀಕ್ಷೆಗಳ ವರದಿಗೆ ಬದ್ಧವಾಗಿರುತ್ತದೆ.
> ಈ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿದ ಅಭ್ಯರ್ಥಿಗಳು ತಮ್ಮ ನೇಮಕಾತಿ ಕುರಿತು ಕಾನೂನಿನ ಪ್ರಕಾರ ಯಾವುದೇ ಹಕ್ಕುಳ್ಳವರಾಗಿರುವುದಿಲ್ಲ.
> ಈ ತಾತ್ಕಾಲಿಕ ಆಯ್ಕೆ ಪಟ್ಟಿಯು ಸರ್ಕಾರದ/ ಕರ್ನಾಟಕ ಆಡಳಿತ ನ್ಯಾಯ ಮಂಡಳಿ /ಮಾನ್ಯ ನ್ಯಾಯಾಲಯಗಳಿಂದ ಹೊರಡಿಸಲ್ಪಡುವ ಆದೇಶಗಳ/ತೀರ್ಪುಗಳಿಗೆ ಒಳಪಟ್ಟಿರುತ್ತದೆ.
ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here