Circular Regarding GFGC Principal Document Submission
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಲ್ಲಿಸಿರುವ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ.
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಲ್ಲಿಸಿರುವ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ದಿನಾಂಕ:28.08.2024 ರೊಳಗಾಗಿ ಸಲ್ಲಿಸಲು ಉಲ್ಲೇಖ-(1) ರ ಈ ಕಛೇರಿಯ ಅಧಿಕೃತ ಜ್ಞಾಪನದಲ್ಲಿ ತಿಳಿಸಲಾಗಿತ್ತು. ತದನಂತರ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಉಲ್ಲೇಖ-(2) ರಂತೆ ದಿನಾಂಕ:03.09.2024 ರವರೆಗೆ ವಿಸ್ತರಿಸಿ, ದಾಖಲೆಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು. ಆದಾಗ್ಯೂ ಈ ಅಧಿಕೃತ ಜ್ಞಾಪನದೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿನ ಅಭ್ಯರ್ಥಿಗಳು ಇದುವರೆವಿಗೂ ಅಪೇಕ್ಷಿತ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ.
ಆದ್ದರಿಂದ, ಈ ಅಧಿಕೃತ ಜ್ಞಾಪನದೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿನ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು (ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಪಡೆದಿಟ್ಟುಕೊಂಡಿರುವ ದೃಢೀಕೃತ ದಾಖಲೆಗಳು) ದಿನಾಂಕ:15.11.2024 ರೊಳಗಾಗಿ ಈ ಕಛೇರಿಗೆ ಖುದ್ದು ಹಾಜರಾಗಿ ಸಲ್ಲಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ. ದಿನಾಂಕ:15.11.2024 ರ ನಂತರ ಸಲ್ಲಿಸುವ/ಸ್ವೀಕೃತವಾಗುವ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ದಾಖಲೆಗಳನ್ನು ಸಲ್ಲಿಸಬೇಕಿರುವ ವಿಧಾನ:
1. ಕಾಲೇಜು ಶಿಕ್ಷಣ ಇಲಾಖೆಯ ವೆಬ್ ಸೈಟ್ ನ "Selection of Principals" ಪೇಜ್ ನಲ್ಲಿ ಲಭ್ಯವಿರುವ "Basic and Qualification Details for Selection for the Post of Principal" ໖ ថ ថ្នថ ಅರ್ಹತೆಯ ಹಾಗೂ ಮೀಸಲಾತಿ ವಿವರಗಳನ್ನು ಆನ್-ಲೈನ್ ನಮೂನೆಯಲ್ಲಿ ಆಪ್ ಲೋಡ್ ಮಾಡುವುದು.
2. ಆಪ್ ಲೋಡ್ ಮಾಡಿದ ಆನ್-ಲೈನ್ ನಮೂನೆಯಲ್ಲಿನ ವಿವರಗಳನ್ನು ಪ್ರಿಂಟ್ ಮಾಡಿ, ಸಹಿ ಮಾಡಿದ ಪ್ರತಿಯನ್ನು ದಿನಾಂಕ:15.11.2024 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸುವುದು. ದಿನಾಂಕ:15.11.2024 ರ ನಂತರ ಸಲ್ಲಿಸಲಾಗುವ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ
ಅಭ್ಯರ್ಥಿಗಳ ಪಟ್ಟಿ ಮತ್ತು ಹೆಚ್ಚಿನ ಮಾಹಿತಿಗಾಗಿ.
No comments:
Post a Comment
If You Have any Doubts, let me Comment Here