JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 9, 2024

World Post Day 2024

  Jnyanabhandar       Wednesday, October 9, 2024

*ವಿಶ್ವ ಅಂಚೆ ದಿನ Oct - 9*

ಪ್ರಪಂಚದಾದ್ಯಂತ ಜನರ ದೈನಂದಿನ ಜೀವನದ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 09 ರಂದು ಜಾಗತಿಕ ಅಂಚೆ ಒಕ್ಕೂಟವು ವಿಶ್ವ ಅಂಚೆ ದಿನವನ್ನು ಆಚರಿಸುತ್ತದೆ.


ಇಂದಿನ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಯುಗದಲ್ಲಿ ಜನರು ಬಹುತೇಕ ಅಂಚೆ ಸೇವೆಯನ್ನು ಮರೆತಿದ್ದಾರೆ. ಆದರೆ ಇಂದಿಗೂ ಸಹ ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ತಲುಪಲು ಸಾಧ್ಯವಾಗದ ದೂರದ ಸೂಕ್ಷ್ಮ ಪ್ರದೇಶಗಳಿಗೆ ಅಂಚೆ ಸೇವೆಯು ತಲುಪುತ್ತಿದೆ. ಇಂಟರ್ನೆಟ್ ಮತ್ತು ದೂರಸಂಪರ್ಕದ ಆವಿಷ್ಕಾರದ ಮೊದಲು ಜನರು ಸಂವಹನಕ್ಕಾಗಿ ಕೇವಲ ಅಂಚೆ ಸೇವೆಯನ್ನು ಅವಲಂಬಿಸಿದ್ದರು. ಇದು ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮಾಹಿತಿಯನ್ನು ರವಾನಿಸುವ ಅತ್ಯಂತ ವಿಶ್ವಾಸಾರ್ಹ ಮತ್ತು ಅಗ್ಗದ ಸಾಧನವಾಗಿತ್ತು. ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ವಹಿಸಿವೆ ಮತ್ತು ಅಂಚೆ ವ್ಯವಸ್ಥೆಯು ಶತಮಾನಗಳಿಂದಲೂ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೈಯಕ್ತಿಕ ಪತ್ರಗಳು, ಪ್ರಮುಖ ದಾಖಲೆಗಳಿಂದ ಇ-ಕಾಮರ್ಸ್ ಮತ್ತು ಆನ್ಲೈನ್ ಶಾಪಿಂಗ್ ಪ್ಯಾಕೆಜ್ ವರೆಗೆ ಇಂದು ಅಂಚೆ ಸೇವೆ ಎಲ್ಲವನ್ನೂ ನಿಭಾಯಿಸುತ್ತಿದೆ. ಇದೇ ರೀತಿ ಅಂಚೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಇಂದು ಸಾಮಾನ್ಯ ಜನರಿಗೆ ಸಹಾಯಕವಾಗುವಂತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಜನರ ದೈನಂದಿನ ಜೀವನದ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 09 ರಂದು ಜಾಗತಿಕ ಮಟ್ಟದಲ್ಲಿ ಅಂಚೆ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ :::
1840 ರಲ್ಲಿ ಇಂಗ್ಲೇಂಡಿನ ಸರ್ ರೋಲ್ಯಾಂಡ್ ಹಿಲ್ ಎಂಬುವವರು ಪತ್ರಗಳನ್ನು ಸಿದ್ಧಪಡಿಸುವ ಹೊಸ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. ಹೀಗೆ 1800 ರ ದಶಕದ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಪತ್ರವಿನಿಮಯದ ನಿಧಾನಗತಿಯ ಬೆಳವಣಿಗೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಅಂಚೆ ವ್ಯವಸ್ಥೆಯು ಹೊರಹೊಮ್ಮಿತು. ಅದರ ನಂತರ ಮೊದಲ ಬಾರಿಗೆ ಅಕ್ಟೋಬರ್ 09, 1874 ರಲ್ಲಿ ಸ್ವಿಟ್ಜರ್ಲೆಂಡ್ ನ  ಬರ್ನ್ ನಲ್ಲಿ ಯೂನಿವರ್ಸಲ್ ಪೋಸ್ಟಲ್ ಯುನಿಯನ್ (UPU) ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ನೆನಪಿಗಾಗಿ 1969 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸಮ್ಮೇಳನದಲ್ಲಿ ಮೊದಲ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 09 ರಂದು ವಿಶ್ವ ಅಂಚೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಗ್ರಾಹಕರಿಗೆ ಅಂಚೆ ಇಲಾಖೆಯ ಬಗ್ಗೆ ಮಾಹಿತಿ ನೀಡುವುದು ಹಾಗೂ ಅಂಚೆ ಸೇವೆಗಳ ಬಗ್ಗೆ ಅರಿವು ಮೂಡಿಸುವುದು ವಿಶ್ವ ಅಂಚೆ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

  ಮಹತ್ವ  :::
       ಇಂದಿನ ಇಂಟರ್ನೆಟ್ ಜಗತ್ತಿನಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಒಬ್ಬರನ್ನೊಬ್ಬರು ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಪರ್ಕಿಸಬಹುದು. ಆದರೆ ಇಂಟರ್ನೆಟ್ ಮತ್ತು ದೂರಸಂಪರ್ಕದ ಆವಿಷ್ಕಾರದ ಮೊದಲು ಜನರು ಸಂವಹನಕ್ಕಾಗಿ ಕೇವಲ ಅಂಚೆ ಸೇವೆಯನ್ನು ಅವಲಂಬಿಸಿದ್ದರು. ಅಂದಿನಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಅಂಚೆ ವ್ಯವಸ್ಥೆಯು ದಕ್ಷ ರೀತಿಯಲ್ಲಿ ತನ್ನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಜನರ ದೈನಂದಿನ ಜೀವನದಲ್ಲಿನ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಂಚೆ ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಈ ವಿಶೇಷ ದಿನದಂದು ಇಂದಿನ ಡಿಜಿಟಲ್ ಲೋಕದಲ್ಲಿ ಮರೆಯಾದ ಪತ್ರಗಳು ಮತ್ತು ಅಂಚೆ ಇಲಾಖೆಯ ಅನುಪಮ ಕೊಡುಗೆಯನ್ನು ಸ್ಮರಿಸಲಾಗುತ್ತದೆ.

logoblog

Thanks for reading World Post Day 2024

Previous
« Prev Post

No comments:

Post a Comment

If You Have any Doubts, let me Comment Here