SSC GD Constable Recruitment 2024
Important Notice: Constable (GD) in Central Armed Police Forces (CAPFs) and SSF, Rifleman (GD) in Assam Rifles, and Sepoy in Narcotics Control Bureau Examination, 2025
ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಮತ್ತು ಅರೆಸೈನಿಕ ಸಂಸ್ಥೆಗಳಲ್ಲಿ ಒಟ್ಟು 39,481 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ತುಂಬಲು ಅರ್ಜಿ ಆಹ್ವಾನ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ (SSLC) ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗದಿಂದ (SSC) ಜಿಡಿ ಕಾನ್ಸ್ಟೇಬಲ್ 2025 ನೇಮಕಾತಿ ಅಭಿಯಾನದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಈಗ ಮುಕ್ತವಾಗಿದೆ. ಸೆಪ್ಟೆಂಬರ್ 5 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 14, 2024 ರವರೆಗೆ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ನೋಂದಣಿ ಪ್ರಕ್ರಿಯೆಗಾಗಿ SSC ಯ ಅಧಿಕೃತ ವೆಬ್ಸೈಟ್ಗೆ ಅಂದರೆ ssc.gov.in ಭೇಟಿ ನೀಡಬಹುದು.
ಖಾಲಿ ಹುದ್ದೆಗಳ ಪ್ರಮಾಣ ಈ ಕೆಳಗಿನಂತಿದೆ:
ಬಿಎಸ್‌ಎಫ್ 15,654
ಸಿಐಎಸ್‌ಎಫ್ 7,145
ಸಿಆರ್‌ಪಿಎಫ್ 11,541
ಎಸ್‌ಎಸ್‌ಬಿ 819
ಐಟಿಬಿಪಿ 3,017
ಅಸ್ಸಾಂ ರೈಫಲ್ಸ್ 1,248
ಎಸ್‌ಎಸ್‌ಎಫ್ 35
ಎನ್‌ಸಿಬಿ 22
ಒಟ್ಟು 39,481
ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು
ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಸೆಪ್ಟೆಂಬರ್ 5, 2024
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 14, 2024
ಆನ್ ಲೈನ್ ಅರ್ಜಿ ನಮೂನೆಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ ಅಕ್ಟೋಬರ್ 14, 2024 (23:00)
ಆನ್ ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಮತ್ತು ಸಮಯ ಅಕ್ಟೋಬರ್ 15, 2024 (23:00)
ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ ಪ್ರಾರಂಭ ದಿನಾಂಕ ನವೆಂಬರ್ 5, 2024
ಅರ್ಜಿ ನಮೂನೆ ತಿದ್ದುಪಡಿಗೆ ಕೊನೆಯ ದಿನಾಂಕ ನವೆಂಬರ್ 7, 2024 (23:00)
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಪ್ರಾರಂಭ ದಿನಾಂಕ ಜನವರಿ 2025
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಅಂತಿಮ ದಿನಾಂಕ ಫೆಬ್ರವರಿ 2025
ಆಯ್ಕೆ ಪ್ರಕ್ರಿಯೆ
ಎಸ್‌ಎಸ್ಸಿ ಜಿಡಿ ಕಾನ್ಸ್ಟೇಬಲ್ 2025 ನೇಮಕಾತಿ ಪ್ರಕ್ರಿಯೆಯು ನಾಲ್ಕು ಹಂತಗಳನ್ನು ಒಳಗೊಂಡಿದೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ): ಸಿಬಿಟಿ ನಾಲ್ಕು ವಿಷಯಗಳನ್ನು ಒಳಗೊಂಡಿರುತ್ತದೆ: ಬುದ್ಧಿಮತ್ತೆ ಮತ್ತು ತಾರ್ಕಿಕತೆ, ಸಾಮಾನ್ಯ ಜ್ಞಾನ (ಜಿಕೆ), ಗಣಿತ ಮತ್ತು ಭಾಷೆ (ಇಂಗ್ಲಿಷ್ / ಹಿಂದಿ). ಪ್ರತಿ ವಿಷಯಕ್ಕೆ ತಲಾ 2 ಅಂಕಗಳ 20 ಪ್ರಶ್ನೆಗಳಿದ್ದು, ಒಟ್ಟು 160 ಅಂಕಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕಗಳ ನೆಗೆಟಿವ್ ಮಾರ್ಕ್ ಇರುತ್ತದೆ.
ದೈಹಿಕ ಪರೀಕ್ಷೆಗಳು (ಪಿಇಟಿ / ಪಿಎಂಟಿ): ಸಿಬಿಟಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ಮತ್ತು ದೈಹಿಕ ಮಾಪನ ಪರೀಕ್ಷೆ (ಪಿಎಂಟಿ) ಗೆ ಕರೆಯಲಾಗುತ್ತದೆ.
ಡಾಕ್ಯುಮೆಂಟ್ ಪರಿಶೀಲನೆ: ಪಿಇಟಿ ಮತ್ತು ಪಿಎಂಟಿ ತೇರ್ಗಡೆಯಾದ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.
ವೈದ್ಯಕೀಯ ಪರೀಕ್ಷೆ: ದಾಖಲೆ ಪರಿಶೀಲನೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
Important Notice: Constable (GD) in Central Armed Police Forces (CAPFs) and SSF, Rifleman (GD) in Assam Rifles, and Sepoy in Narcotics Control Bureau Examination, 2025
No comments:
Post a Comment
If You Have any Doubts, let me Comment Here