ಕಲಬುರಗಿ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೇತನ ತಡೆಹಿಡಿಯುವ ಕುರಿತು ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಈ ಮೇಲ್ಕಂಡ ವಿಷಯ ಹಾಗೂ ಉಲ್ಲೇಖದಂತೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ರವರ ಧನಸಹಾಯದಲ್ಲಿ ಕಲಬುರಗಿ ವಿಭಾಗದ 07 ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ 1008 ECCE ಹಾಗೂ 872 ದ್ವಿ-ಭಾಷಾ ಶಾಲೆಗಳಿಗೆ ನೇಮಕಗೊಂಡ ಆತಿಥಿ ಶಿಕ್ಷಕರ ಹಾಗೂ ಆಯಾಗಳ ಗೌರವ ಧನವನ್ನು ಜೂನ್-2024 ರಿಂದ ಇಲ್ಲಿಯವರೆಗೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾವತಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದೆ.
ಪ್ರಯುಕ್ತ ಅತಿಥಿ ಶಿಕ್ಷಕರ ಹಾಗೂ ಆಯಾಗಳ ಗೌರವ ಧನ ಪಾವತಿ ಆಗುವವರೆಗೆ ತಮ್ಮ ತಾಲ್ಲೂಕಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೇತನವನ್ನು ಈ ಕಛೇರಿಯಿಂದ ಅನುಮತಿ ಆದೇಶ ನೀಡುವವರೆಗೂ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಖಜಾನೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
No comments:
Post a Comment
If You Have any Doubts, let me Comment Here