Regarding delegation of authority to BEOs to collect salaries of schools upgraded from government higher primary schools to government high schools.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿದ ಶಾಲೆಗಳ ವೇತನ ಸೆಳೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ 5 ರಲ್ಲಿ ಸರ್ಕಾರಿ ಪ್ರೌಢಶಾಲೆ, ಸೋಮಲಾಪುರ, ಕುರುಗೋಡು ತಾ. ಬಳ್ಳಾರಿ ಜಿಲ್ಲೆ ಶಾಲೆಯ ಶಿಕ್ಷಕರ ವೇತನ ಸೆಳೆಯಲು ಉಲ್ಲೇಖ 4 ರಂತೆ ಸದರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವೇತನ ಸೆಳೆಯುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.
ಪರಿಶೀಲಿಸಲಾಗಿ, ಉಲ್ಲೇಖ 3 ರ ಸರ್ಕಾರಿ ಆದೇಶದನ್ವಯ 2015-16, 2016-17 ಮತ್ತು 2018-19 ನೇ ಸಾಲಿನಲ್ಲಿ ಒಟ್ಟು 89 ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿ ಆದೇಶೀಸಿರುತ್ತಾರೆ.
ಉಲ್ಲೇಖ 2 ರ ಸರ್ಕಾರಿ ಆದೇಶದನ್ವಯ ಉಲ್ಲೇಖ 3 ರ ಸರ್ಕಾರಿ ಆದೇಶದಲ್ಲಿ ಉನ್ನತೀಕರಿಸಿದ ಈ 89 ಸರ್ಕಾರಿ ಪ್ರೌಢಶಾಲೆಗಳಲ್ಲಿ 42 ಶಾಲೆಗಳಿಗೆ ಮುಖ್ಯ ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದು, 47 ಶಾಲೆಗಳಿಗೆ ಮಂಜೂರಾತಿಯಾಗಿರುವುದಿಲ್ಲ. ಪ್ರಯುಕ್ತ ಈ 47 ಸರ್ಕಾರಿ ಪ್ರೌಢಶಾಲೆಗಳಲ್ಲಿ ಉಲ್ಲೇಖ 2 ರ ಸರ್ಕಾರಿ ಆದೇಶದಲ್ಲಿ ಈ ಶಾಲೆಗಳಲ್ಲಿ ಸೇವಾ ಜೇಷ್ಮತೆಯಲ್ಲಿ ಹಿರಿಯರಾದ ಸಹ ಶಿಕ್ಷಕರುಗಳನ್ನೇ ವೇತನ ಬಟವಾಡೆ ಅಧಿಕಾರಿಯನ್ನಾಗಿ ನೇಮಿಸಿ ಆದೇಶವು ಈಗಾಗಲೇ ಆಗಿರುತ್ತದೆ.
ಅದರಂತೆ ಉಲ್ಲೇಖ 1 ರ ಸರ್ಕಾರಿ ಆದೇಶದಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾತಿ ಇಲ್ಲದ ಶಾಲೆಗಳಿಗೆ ಉಲ್ಲೇಖ 2 ರ ಸರ್ಕಾರಿ ಆದೇಶದಂತೆ ಆಯಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೇವೆಯಲ್ಲಿ ಹಿರಿಯರಾದ ಸಹ ಶಿಕ್ಷಕರುಗಳನ್ನೇ ವೇತನ ಬಟವಾಡೆ ಅಧಿಕಾರಿಯನ್ನಾಗಿ ನೇಮಿಸಿ ವೇತನ ಸೆಳೆಯಲು ತಿಳಿಸಿದೆ. (ಮಾನ್ಯ ಆಯುಕ್ತರ ಆದೇಶದ ಮೇರೆಗೆ)
ಶಾಲೆಗಳ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here