CORRIGENDUM NOTIFICATION-4 REGARDING PRELIMINARY EXAMINATION FOR 2023-24 GAZETTED PROBATIONERS NOTIFICATION DATED 26-02-2024 IS PUBLISHED
ಕೆಎಎಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿಯಾಗಿದೆ. ದಿನಾಂಕ 29-12-2024ರಂದು ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆಸುವುದಾಗಿ ಕೆಪಿಎಸ್ಸಿ ಘೋಷಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್.ಕೆ ಅವರು ಮಾಹಿತಿ ನೀಡಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಮತ್ತು ತಿದ್ದುಪಡಿ ಅಧಿಸೂಚನೆಗಳನ್ನು ಕ್ರಮವಾಗಿ 26-02-2024, 02-04-2024, 19-04-2024 ಮತ್ತು 06-07-2024ರಂದು ಹೊರಡಿಸಲಾಗಿರುತ್ತದೆ, ಸದರಿ ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ:29-12-2024ರಂದು ನಡೆಸಲು ನಿಗದಿಪಡಿಸಲಾಗಿರುತ್ತದೆ ಎಂದಿದ್ದಾರೆ.
ಮುಂದುವರೆಸುತ್ತಾ, ಸದರಿ ದಿನಾಂಕದಂದು ಯಾವುದೇ ಪರೀಕ್ಷೆಯು ನಿಗದಿಯಾಗದಿರುವ ಕುರಿತು ಪರಿಶೀಲಿಸಲಾಗಿರುತ್ತದೆ. ಆದರೆ ಸದರಿ ತಿದ್ದುಪಡಿ ಅಧಿಸೂಚನೆ ಜಾರಿಯಾದ ನಂತರ ಇನ್ನಿತರೆ ಯಾವುದೇ ಪರೀಕ್ಷೆ ನಿಗದಿಯಾದಲಿ, ಅದಕ್ಕೆ ಆಯೋಗವು ಹೊಣೆಯಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು
ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
No comments:
Post a Comment
If You Have any Doubts, let me Comment Here