JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, October 27, 2024

Karnataka Government Employees Life Insurance Rules 2024

  Jnyanabhandar       Sunday, October 27, 2024
Karnataka Government Employees (Compulsory Life Insurance) (Amendment) Rules, 2024

ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿ ಇದೆ. ಕೆಜಿಐಡಿ ನಿಯಮ ತಿದ್ದುಪಡಿ ಮಾಡಲಾಗಿದೆ. ಈಗಾಗಲೇ ಸರ್ಕಾರ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣವಾಗಿ ಗಣಕೀಕರಣ ಮಾಡಿದೆ. ವಿಮಾದಾರರಿಗೆ ಆನ್‌ಲೈನ್ ಮೂಲಕವೇ ಸೇವೆಯನ್ನು ನೀಡಲಾಗುತ್ತಿದೆ.

ಇದಕ್ಕಾಗಿ ಸರ್ಕಾರಿ ನೌಕರರು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿರುವ ಕೆಜಿಐಡಿ ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸಲು ಅವಕಾಶ ನೀಡಲಾಗಿತ್ತು.

ಕೆಜಿಐಡಿ ನಿಯಮ ತಿದ್ದುಪಡಿ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನೇತ್ರಪ್ರಭಾ ಎಂ. ಧಾಯಪುಲೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ & ಮುಂಗಡಗಳು) ಆದೇಶವನ್ನು ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಪರಂತುಕದೊಡನೆ ಓದಿಕೊಂಡು ಅದೇ 3ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ ಎಂದು ಹೇಳಿದೆ.

ಶೀರ್ಷಿಕೆ ಮತ್ತು ಪ್ರಾರಂಭ:- ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು. ಈ ನಿಯಮಗಳು 2024ರ ಆಗಸ್ಟ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

ನಿಯಮ 8 ರ ತಿದ್ದುಪಡಿ. ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು 1958ರ, ನಿಯಮ 8ರ 'ಕೋಷ್ಟಕ' ದಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಈ ಕೆಳಕಂಡಂತೆ ಪ್ರತಿಸ್ಥಾಪಿಸತಕ್ಕದ್ದು ಎಂದು ಹೇಳಿದೆ. ಕೋಷ್ಟಕದಲ್ಲಿ ವೇತನ ಶ್ರೇಣಿ ರೂ.ಗಳಲ್ಲಿ ಮತ್ತು ಕನಿಷ್ಟ ಮಾಸಿಕ ವಿಮಾ ಕಂತಿನ ಮೊಬಲಗು (ರೂ.ಗಳಲ್ಲಿ) ಎಂದು ವಿವರ ನೀಡಲಾಗಿದೆ.

1 ರಿಂದ 25ನೇ ವೇತನ ಶ್ರೇಣಿ ತನಕದ ಸರ್ಕಾರಿ ನೌಕರರು ಕನಿಷ್ಟ ಮಾಸಿಕ ವಿಮಾ ಕಂತು ಎಷ್ಟು ಪಾವತಿಸಬೇಕು? ಎಂದು ಮಾಹಿತಿ ನೀಡಲಾಗಿದೆ.

1. 27000-46675- 2300 ರೂ.ಗಳು.

2. 29600-52800 - 2580

3. 31775-61300 - 2910

4. 34100-67600 - 3180

5. 37500-76100 - 3550

6. 41300-81800 - 3850

7. 44425-83700 - 4000
8. . 49050-92500 - 4420

9. 54175-99400 - 4800

10. 58300-107500 - 5180

11. 61300-112900 - 5440

12. 65950-124900 - 5960

13. 69250-134200 - 6360 ರೂ.ಗಳು.

14. 72550-141200 - 6680 ರೂ.ಗಳು.

15. 78000-148200 - 7070

16. 83700-155200 - 7470
17. 90200-163200 - 7790

18. 97100-163200 - 8130

19. 107500-167200 - 8580

20. 112900-171200 - 8880

21. 118700-175200 - 9180

22. 131100-188200 - 9980

23. 144700-197200 - 10680

24. 155200-226200 - 11920

25. 167200-241200 - 12760 ರೂ.ಗಳು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
logoblog

Thanks for reading Karnataka Government Employees Life Insurance Rules 2024

Previous
« Prev Post

No comments:

Post a Comment

If You Have any Doubts, let me Comment Here