Karnataka BEd Admission 2024
2024-25ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ. ಪದವಿಯ ವ್ಯಾಸಂಗಕ್ಕಾಗಿ ದಾಖಲಾತಿ ಸಂಬಂಧ ಉಲ್ಲೇಖ (11)ರ ಸರ್ಕಾರದ ಅನುಮತಿಯಂತೆ ಹಾಗೂ ಉಲ್ಲೇಖ (10)ರಲ್ಲಿ ವಿಶ್ವವಿದ್ಯಾಲಯಗಳಿಂದ ಸಲ್ಲಿಕೆಯಾದ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ www.schooleducation.karnataka.gov.in ಮೂಲಕ ಲಾಗಿನ್ ಆಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ONLINE APPLICATION FOR ADMISSION TO 2 YEAR B.Ed. COURSE FOR THE YEAR 2024-25 ಲಿಂಕ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬಹುದು.
, ಮಾಡುವ ಮುನ್ನ ವೆಬ್ ಸೈಟ್‌ನಲ್ಲಿರುವ "Instructions to the candidates" ಶೀರ್ಷಿಕೆಯಡಿಯಲ್ಲಿ ನೀಡಿರುವ ಮಾಹಿತಿಯಂತೆ ಅರ್ಜಿಗಳನ್ನು ಭರ್ತಿಮಾಡುವುದು. ಅಭ್ಯರ್ಥಿಗಳು "ONLINE" ಮೂಲಕ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು ದಿನಾಂಕ:15/10/2024 ರಿಂದ 14/11/2024 ರ ವರೆಗೆ ಆನ್‌ಲೈನ್‌ನಲ್ಲಿ ಅವಕಾಶ ಇರುತ್ತದೆ.
• ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ತಮ್ಮ User ID ಮತ್ತು Password ಅನ್ನು
ನಮೂದಿಸಿ ಲಾಗಿನ್ ಆಗಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ತನ್ನ User name ಮತ್ತು Password ಅನ್ನು
ಗೌಪ್ಯವಾಗಿಟ್ಟುಕೊಳ್ಳತಕ್ಕದ್ದು ಮತ್ತು ಆನ್‌ಲೈನ್ ಅರ್ಜಿಯ ಸಂಬಂಧ ಎಷ್ಟೇ ಬಾರಿ Login ಆದರೂ ಕಡ್ಡಾಯವಾಗಿ Logout
ಆಗಬೇಕಾಗಿರುತ್ತದೆ, ಅಭ್ಯರ್ಥಿಯು Logout ಆಗದೇ ಅರ್ಜಿಗಳ ಮಾಹಿತಿಯಲ್ಲಿ ವ್ಯತ್ಯಾಸಗಳುಂಟಾದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕ ಜವಾಬ್ದಾರಿಯಾಗಿರುವುದಿಲ್ಲ.
No comments:
Post a Comment
If You Have any Doubts, let me Comment Here