👆🏻👆🏻👆🏻👆🏻👆🏻👆🏻👆🏻👆🏻
BMTC Pro. Select List:
✍🏻📃✍🏻📃✍🏻📃✍🏻📃
⚫ 2024 ಜುಲೈ-14 ರಂದು ನಡೆದಿದ್ದ HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
⚫ ಆಕ್ಷೇಪಣೆಗಳಿದ್ದರೆ 14-10-2024 ರೊಳಗಾಗಿ ಬೆಂಗಳೂರಿನ BMTC ಕಚೇರಿಗೆ ಖುದ್ದಾಗಿ ಬಂದು ಸಲ್ಲಿಸುವುದು.!!
⚫ 2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Provisional Select List ನಂತರದಲ್ಲಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
ಇಂದು ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಲ್ಯಾಣ-ಕರ್ನಾಟಕ (371-ಜೆ) ಮೀಸಲಾತಿಯಡಿ ನಿರ್ವಾಹಕ ಹುದ್ದೆಗೆ ಅಭ್ಯರ್ಥಿಗಳಿಗೆ ದಿನಾಂಕ:14/07/2024 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಅವರುಗಳು ಗಳಿಸಿದ ಒಟ್ಟು ಅಂಕಗಳ ಶೇಕಡ 75ರಷ್ಟು ಮತ್ತು ಹುದ್ದೆಗೆ ನಿಗಧಿಪಡಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 25ರಷ್ಟು ಅಂಕಗಳನ್ನು ಸೇರಿಸಿ ಬಂದ ಒಟ್ಟು ಶೇಕಡ ಅಂಕಗಳ ಆಧಾರದ ಮೇಲೆ ಮತ್ತು ನೇರನೇಮಕಾತಿ ಸಂಬಂಧ ಜಾರಿಯಲ್ಲಿರುವ ಸರ್ಕಾರದ ಮೀಸಲಾತಿ ನಿಯಮಾನುಸಾರ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ 1:5 ರ ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು ಎಂದಿದೆ.
ಅದರಂತೆ ಮೂಲ ದಾಖಲೆ / ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪೈಕಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಹುದ್ದೆಗಳಿಗೆ ಅನುಗುಣವಾಗಿ ನಿರ್ವಾಹಕ, ದರ್ಜೆ-3 (ಮೇಲ್ವಿಚಾರಕೇತರ) ಹುದ್ದೆಯ ಸಂಭವನೀಯ ಆಯ್ಕೆ ಪಟ್ಟಿಯನ್ನು ಸಂಸ್ಥೆಯ ವೆಬ್‌ಸೈಟ್ www.mybmtc.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ.
No comments:
Post a Comment
If You Have any Doubts, let me Comment Here