JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, October 21, 2024

General knowledge Question and Answers

  Jnyanabhandar       Monday, October 21, 2024
General knowledge Question and Answers 

🌸 ಕೆಳಗಿನವರಲ್ಲಿ ಯಾರು "ಕ್ರಿಕೆಟ್ ಮೈ ಸ್ಟೈಲ್" ಪುಸ್ತಕವನ್ನು ಬರೆದಿದ್ದಾರೆ?
ಉತ್ತರ:- ಕಪಿಲ್ ದೇವ್ 
🌸ಒಂದು ವರ್ಷದಲ್ಲಿ ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದ ಮೊದಲ ಆಟಗಾರ ಯಾರು? 
ಉತ್ತರ:- ಡಾನ್ ಬಡ್ಜ್
🌸ಮೊದಲ ಮಹಿಳಾ ಹಾಕಿ ವಿಶ್ವಕಪ್ ಯಾವಾಗ ನಡೆಯಿತು?
ಉತ್ತರ:-1974
🌸 ಕ್ರಿಕೆಟ್ ಕಾಶಿ ಎಂದು ಇದನ್ನು ಕರೆಯಲಾಗುತ್ತದೆ
ಉತ್ತರ:- ಲಂಡನ್‌ ಲಾರ್ಡ್ಸ್
🌸 ಕ್ರಾಸ್ ಬಾ‌ರ್ ಅನ್ನು ಉಪಯೋಗಿಸುವ ಕ್ರೀಡೆ
ಉತ್ತರ:- ಎತ್ತರ ಜಿಗಿತ
🌸ಹರಪ್ಪ ಮತ್ತು ಮೊಹೆಂಜದಾರೊವಿನಲ್ಲಿನ ಮೊದಲ ಉತ್ಖನನದಲ್ಲಿ ಇವರು ಭಾಗವಹಿಸಿದ್ದರು?
ಉತ್ತರ:- ಜಾನ್ ಮಾರ್ಷಲ್, ಆರ್. ಡಿ. ಬ್ಯಾನರ್ಜಿ ಮತ್ತು ದಯಾರಾಮ್ ಸಹಾನಿ
🌸ಪ್ರಾಚೀನ ಮನುಷ್ಯ ಕೆಳಗಿನ ಯಾವ ಧಾನ್ಯವನ್ನು ಮೊದಲು ಬೆಳೆಯಲು ಪ್ರಾರಂಭಿಸಿದನು?
ಉತ್ತರ: - ಬತ್ತ
🌸 ಮನುಷ್ಯ ಮೊದಲು ಬಳಸಿದ ಲೋಹ ಯಾವುದು? 
ಉತ್ತರ:- ತಾಮ್ರ
🌸ಭಗವದ್ಗೀತಾ-------------- ದ ಭಾಗವಾಗಿತ್ತು.
ಉತ್ತರ:- ಮಹಾಭಾರತ
🌸ದಕ್ಷಿಣ ಭಾರತವನ್ನು ಆರ್ಯೀಕರಣಗೊಳಿಸಿದ ಮುನಿಯನ್ನು ಹೆಸರಿಸಿ
ಉತ್ತರ: - ಅಗಸ್ತ್ಯ್

🌸ಪ್ರಾಚೀನ ಭಾರತದಲ್ಲಿ ಕೆಳಗಿನ ಯಾವ ರಾಜ್ಯ ಗಣರಾಜ್ಯವಾಗಿರಲಿಲ್ಲ?
ಉತ್ತರ:- ಗಾಂಧಾರ
🌸ಮೆಗಾಸ್ತಾನೀಸ್‌ನ ಪ್ರಕಾರ ಪಾಟಲೀಪುತ್ರದ ಪೌರಾಡಳಿತವನ್ನು ಯಾರು ನಡೆಸುತ್ತಿದ್ದರು?
ಉತ್ತರ: - ಆರು ಸಮಿತಿಗಳು
🌸ಪೂರ್ವ ಚಾಲುಕ್ಯರ (ಈಸ್ಟನ್ ಚಾಲುಕ್ಯಸ್) ರಾಜಧಾನಿ
 ಉತ್ತರ:-ವೆಂಗಿ
🌸ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಭಕ್ತಿ ಸಂತರು
ಉತ್ತರ: - ಆಳ್ವಾರರು
🌸ವಿದೇಶಿ ಪ್ರವಾಸಿ ಸುಲೈಮಾನನು ಯಾರ ಆಳ್ವಿಕೆಯ ಕಾಲದಲ್ಲಿ ಪಾಲರ ರಾಜ್ಯವನ್ನು ಸಂದರ್ಶಿಸಿದ್ದನು. 
ಉತ್ತರ:- ದೇವಪಾಲ
🌸 ಚೌಘನ್ ಅಥವಾ ಪೋಲೋ ಆಡುತ್ತಿದ್ದ ಸಂದರ್ಭದಲ್ಲಿ ಅಸು ನೀಗಿದ ಸುಲ್ತಾನನಾರು?
ಉತ್ತರ:- ಕುತುಬ್ ಉದ್ದೀನ ಐಬಕ್
🌸ಯಾವ ಮೋಡಗಳಿಂದ ಧಾರಾಕಾರ ಮಳೆ ಸುರಿಯುವುದೆಂದರೆ
ಉತ್ತರ:- ಪದರು ವೃಷ್ಠಿ ಮೋಡ
🌸ಮೌನಾ ಲಾವೋ ಜ್ವಾಲಾಮುಖಿ (Shied Volcano) ಪರ್ವತಕ್ಕೆ ಉದಾಹರಣೆ ಇದು ಇರುವುದು
ಉತ್ತರ:- ಹವಾಯಿ
🌸 ಸಾಗರದ ಅತ್ಯಂತ ಆಳವಾದ ಭಾಗವೆಂದರೆ
ಉತ್ತರ:- ಚಾಲೆಂಜರ್ ಡೀಪ್ ( ಮರಿಯಾನಾ ಕಂದಕ)


🌸ಭೂಮಿಯ ಆಳದಲ್ಲಿ ಉಷ್ಣಾಂಶದ ಹೆಚ್ಚಳದ ಪ್ರಮಾಣ
ಉತ್ತರ:- 25 ಡಿಗ್ರಿ ಸೆಲ್ಸಿಯಸ್/ಕಿ.ಮೀ
🌸ಡೊಲೊಮೈಟ್ ಎನ್ನುವುದು
ಉತ್ತರ:- ಜಲಜ ಶಿಲೆ (ಪದರು ಶಿಲೆ)
🌸ಪ್ಲಾನಿಮೀಟರ್ ಉಪಕರಣವನ್ನು ಏನನ್ನು ಅಳೆಯಲು ಬಳಸುವರೆಂದರೆ
ಉತ್ತರ- ನಕ್ಷೆಯ ಮೇಲಿನ ಒಂದು ಪ್ರದೇಶದ ವಿಸ್ತೀರ್ಣ
🌸ಋತ್ವಂತರ ವಲಸೆ ಯಾವುದರೊಡನೆ ಸಂಬಂಧಿಸಿದೆಯೆಂದರೆ 
ಉತ್ತರ:- ವ್ಯವಸಾಯ
🌸ಜನಸಂಖ್ಯೆಯ ವಯೋ ಮತ್ತು ಲಿಂಗ ರಚನೆಯನ್ನು ಯಾವುದರಿಂದ ಸೂಕ್ತವಾಗಿ ಪ್ರತಿನಿಧಿಸಬಹುದೆಂದರೆ
ಉತ್ತರ:- ಕ್ಲೋರೋಪ್ಲೆತ್
🌸ನುಂಗುಬಿಲಗಳು ಯಾವ ಪ್ರದೇಶದಲ್ಲಿ ಕಂಡು ಬರುತ್ತವೆ?
ಉತ್ತರ:- ಸುಣ್ಣಕಲ್ಲು
🌸ಅಗ್ನಿಶಿಲೆಗಳು ಯಾವುದರ ತಂಪಾಗುವಿಕೆ ಹಾಗೂ ಘನೀಭವಿಸುವಿಕೆಯಿಂದ ನಿರ್ಮಿತವಾಗುತ್ತವೆಯೆಂದರೆ
ಉತ್ತರ:- ಮ್ಯಾಗ್ಮ
🌸'ಎಲ್‌ನಿನೋ' ಅದ್ಭುತ (Phenomenon) ಈ ಕೆಳಗಿನ ಯಾವ ಸಾಗರ ಪ್ರವಾಹದೊಂದಿಗೆ ಸಂಬಂಧಿಸಿದೆಯೆಂದರೆ
ಉತ್ತರ:- ಉಷ್ಣ ಸಾಗರ ಪ್ರವಾಹ
🌸ಹಾರ್ಟ್ ಲ್ಯಾಂಡ್ ಸಿದ್ಧಾಂತವನ್ನು ಪ್ರಸಿದ್ದಿ ಪಡಿಸಿದವರು
ಉತ್ತರ:- ಮೆಕಿಂದರ್ (Halford Mackinder)

🌸ನಮ್ಮ ದೇಶದ ಸಂವಿಧಾನದ ಪ್ರಕಾರ ನಮ್ಮ ದೇಶದ ಹೆಸರು
ಉತ್ತರ:- ಇಂಡಿಯಾ ಎಂದರೆ ಭಾರತ
🌸ಭಾರತದ ಪ್ರಜಾಪ್ರಭುತ್ವ  ವ್ಯವಸ್ಥೆಯಲ್ಲಿ 'ರಾಜಕೀಯ ಅಧಿಕಾರದ' ಮೂಲನೆಲೆಯಿರುವುದು
ಉತ್ತರ:- ಪ್ರಜೆಗಳಲ್ಲಿ
🌸ನಮ್ಮ ಸಂವಿಧಾನದ ಅರವತ್ತೊಂದನೇ ತಿದ್ದುಪಡಿಯನ್ನು ಈ ಕೆಳಕಂಡ ಯಾವ ಕಲಂಗೆ ತರಲಾಯಿತು?
 ಉತ್ತರ:- 326ನೇ ಕಲಂ
🌸ಭಾರತದ ಸಂವಿಧಾನದ ಪ್ರಕಾರ 'ಜಾತ್ಯತೀತ ವಾದ' ಎಂದರೆ
ಉತ್ತರ: - ನಿರೀಶ್ವರವಾದ
🌸ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸಂವಿಧಾನದ '243-ಇ' ಕಲಂ ವಿವರಣೆ ನೀಡಿದೆ?
ಉತ್ತರ:- ಚುನಾಯಿತ ಗ್ರಾಮಸಭೆಗಳ ಅಧಿಕಾರದ ಅವಧಿ
🌸 ಭಾರತದ ಸಂವಿಧಾನದ 123 ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ?
ಉತ್ತರ:- ಸಂಸತ್ತು ಅಧಿವೇಶನದಲ್ಲಿರದ ಅವಧಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ.
🌸 ಸಂಸದೀಯ ಪರಿಭಾಷೆಯಲ್ಲಿ "ವ್ಹಿಪ್' ನೀಡುವುದು ಎಂದರೆ
ಉತ್ತರ:- ಮಸೂದೆಗಳ ಮೇಲೆ ಚರ್ಚೆ ಅಥವಾ ಮತ ನೀಡುವ ಸಂದರ್ಭ ಉಂಟಾದಾಗ ವಿವಿಧ ಪಕ್ಷಗಳು ತಮ್ಮ ಸದಸ್ಯರಿಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಲು ನೀಡುವ ಆದೇಶ.
🌸ವಿಶ್ವ ಸಂಸ್ಥೆಯು ಈ ಕೆಳಕಂಡ ಯಾವ ದಿನಾಂಕದಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು? 
ಉತ್ತರ:- 24-10-1945
🌸"ವರದಕ್ಷಿಣೆ ಸಾವನ್ನು" ಉಂಟುಮಾಡುವುದು ಭಾರತದ ದಂಡಸಂಹಿತೆಯ ಯಾವ ಪರಿಚ್ಛೇದದ ಪ್ರಕಾರ ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧವಾಗುತ್ತವೆ?
ಉತ್ತರ:- ಪರಿಚ್ಛೇದ-304 B

🌸ವಿಪೊ (WIPO) ದ ಕೇಂದ್ರ ಕಛೇರಿಯಿರುವ ಸ್ಥಳ
ಉತ್ತರ:-  ಜಿನೇವಾ
🌸ಸ್ಥಳೀಯ ಸ್ವಯಂ ಸರ್ಕಾರದ ಪಿತಾಮಹನು 
ಉತ್ತರ:- ಲಾರ್ಡ್ ರಿಪ್ಪನ್
🌸ಮೊದಲ ಬಾರಿಗೆ ಪಂಚಾಯತ್ ರಾಜ್ ಸಂಸ್ಥೆಗಳನ್ನು ರಚಿಸಲು ಶಿಫಾರಸ್ಸು ಮಾಡಿದ ಆಯೋಗ
 ಉತ್ತರ:- ಬಲವಂತ ರಾಯ್ ಮೆಹತಾ ಆಯೋಗ
🌸ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕಾವ್ಯ
ಉತ್ತರ:- ಭರತೇಶ ವೈಭವ
🌸ಕನ್ನಡದ ಮೊದಲ ಸ್ವತಂತ್ರ ಐತಿಹಾಸಿಕ ಕಾದಂಬರಿ
ಉತ್ತರ:-- ಯದುಮಹಾರಾಜ
🌸'ಹುತ್ತರಿಯ ಹಾಡು' ಕವನದ ಕವಿ
ಉತ್ತರ:- ಪಂಜೆ ಮಂಗೇಶರಾಯ
 🌸 'ಸಂಜೆಗಣ್ಣಿನ ಹಿನ್ನೋಟದ' ಆತ್ಮಚರಿತ್ರೆಕಾರ
ಉತ್ತರ:- ಎ.ಎನ್.ಮೂರ್ತಿರಾವ್
🌸ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು' ಎಂದು ಹೆಸರು ಪಡೆದಿರುವ ಕೃತಿ
ಉತ್ತರ:- ರಾಮಾಶ್ವಮೇಧ
🌸'ಆನಂದಕಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು
ಉತ್ತರ:- ಬೆಟಗೇರಿ ಕೃಷ್ಣಶರ್ಮ
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here