General knowledge Question and Answers
🌸 ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ
ಉತ್ತರ:- ಬಳ್ಳಾರಿ ಜಿಲ್ಲೆಯ ಹೊಸಪೇಟೆ
🌸 ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರು
ಉತ್ತರ:- ಪಂಪಸಾಗರ
🌸ಇವು ತುಂಗಭದ್ರಾ ಅಣೆಕಟ್ಟೆಯಿಂದ ಪ್ರಮುಖ ನೀರಾವರಿ ಲಾಭ ಪಡೆಯುವ ಪ್ರಮುಖ ಭಾಗಗಳು
ಉತ್ತರ:- ಆಂಧ್ರದ ಅನಂತಪುರ & ಕರ್ನೂಲ್, ಕರ್ನಾಟಕದ ಬಳ್ಳಾರಿ & ರಾಯಚೂರು
🌸ಭಾಕ್ರಾನಂಗಲ್ ಜಲವಿದ್ಯುತ್ ಯೋಜನೆ ಇರುವುದು ಇಲ್ಲಿ
ಉತ್ತರ:- ಹಿಮಾಚಲ ಪ್ರದೇಶ
🌸ತುಂಗಭದ್ರಾ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ
ಉತ್ತರ:- ಕರ್ನಾಟಕ ಮತ್ತು ಆಂಧ್ರಪ್ರದೇಶ
🌸ತುಂಗಭದ್ರಾ ಯೋಜನೆಯ ಪ್ರಮುಖ ಉದ್ದೇಶ
ಉತ್ತರ:- ನೀರಾವರಿ ಮತ್ತು ಜಲವಿದ್ಯುಚ್ಛಕ್ತಿಯ ಉತ್ಪಾದನೆ
🌸ನೀರಿನಲ್ಲಿರುವ ಗಾಳಿಯ ಗುಳ್ಳೆಯು ಹೊಳೆಯುವುದಕ್ಕೆ ಕಾರಣ
ಉತ್ತರ:- ಸಂಪೂರ್ಣ ಆಂತರಿಕ ಪ್ರತಿಫಲನ
🌸ನೀರಿಗಿಂತ ಪಾದರಸವನ್ನು ಉಷ್ಣತಾ ಮಾಪಕದಲ್ಲಿ ಉಪಯೋಗಿಸಲು ಕಾರಣ
ಉತ್ತರ:- ಪಾದರಸವು ನೀರಿಗಿಂತ ಹೆಚ್ಚು ಪಾರದರ್ಶಕ
🌸ಸ್ಪಟಿಕದ ರಾಸಾಯನಿಕ ಹೆಸರು
ಉತ್ತರ:- ಸೋಡಿಯಂ ಸಿಲಿಕೇಟ್
🌸ಎರಡನೇ ಚಂದ್ರಗುಪ್ತನಿಗಿದ್ದ ಬಿರುದು
ಉತ್ತರ: - ವಿಕ್ರಮಾದಿತ್ಯ
🌸ಎರಡನೇ ಚಂದ್ರಗುಪ್ತನು ಸಮುದ್ರಗುಪ್ತನ ರಾಣಿ 'ದತ್ತಾದೇವಿ' ಎಂಬುವವಳ ಪುತ್ರನಾಗಿದ್ದರಿಂದ ಇವನಿಗಿದ್ದ ಹೆಸರುಗಳು
ಉತ್ತರ:- 'ದೇವಗುಪ್ತ' ಮತ್ತು 'ದೇವ'
🌸ಎರಡನೇ ಚಂದ್ರಗುಪ್ತನು ತನ್ನ ಮಗಳಾದ ಪ್ರಭಾವತಿ ಗುಪ್ತಳನ್ನು ಇವರಿಗೆ ವಿವಾಹ ಮಾಡಿಕೊಟ್ಟನು
ಉತ್ತರ:- ಎರಡನೇ ರುದ್ರಸೇನನಿಗೆ
🌸ದಂಡಯಾತ್ರೆಯಲ್ಲಿ ವಿಕ್ರಮಾದಿತ್ಯನು ಶಕಕ್ಷತ್ರಪರನ್ನು ಸೋಲಿಸಿದುದಲ್ಲದೆ ಶಕ ರಾಜ ಮೂರನೇ ರುದ್ರಸಿಂಹನನ್ನು ಅವನ ರಾಜಧಾನಿಯಲ್ಲೇ ಕೊಂದಿದ್ದರಿಂದ ಇವನಿಗಿದ್ದ ಬಿರುದು
ಉತ್ತರ:- 'ಶಕಾರಿ'
🌸ಎರಡನೇ ಚಂದ್ರಗುಪ್ತನ ದಿಗ್ವಿಜಯ ಮುಂತಾದ ವಿಷಯಗಳನ್ನು ತಿಳಿಸುವ ಸ್ತಂಭ ಶಾಸನ
ಉತ್ತರ:- ದೆಹಲಿಯ 'ಮೆಹ್ರೌಲಿ ಕಬ್ಬಿಣ ಸ್ತಂಭ ಶಾಸನ'
🌸ಎರಡನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ್ದ ಚೀನಾ ದೇಶದ ಬೌದ್ಧ ಯಾತ್ರಿಕ
ಉತ್ತರ:- ಫಾಹಿಯಾನ
🌸ಫಾಹಿಯಾನನು ಭೇಟಿ ನೀಡಿದ ಪ್ರಮುಖ ಪ್ರದೇಶಗಳು
ಉತ್ತರ:- ಮಥುರ, ನಳಂದ, ಗಯಾ, ರಾಜಗೃಹ
🌸ಎರಡನೇ ಚಂದ್ರಗುಪ್ತನ ಉತ್ತರಾಧಿಕಾರಿಯಾಗಿ ಬಂದವರು
ಉತ್ತರ:- ಕುಮಾರಗುಪ್ತ ಮಹೇಂದ್ರಾದಿತ್ಯ
🌸ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತಗೊಂಡ ವಿಶ್ವವಿದ್ಯಾಲಯ
ಉತ್ತರ:- ನಳಂದಾ ವಿಶ್ವವಿದ್ಯಾಲಯ
🌸ರಾಜ್ಯಗಳ ಪುನರ್ ವಿಂಗಡನೆಗೆ ಶಿಫಾರಸ್ಸು ಮಾಡಿದ ಆಯೋಗ
ಉತ್ತರ:- ಫಜಲ್ ಅಲಿ ಆಯೋಗ
🌸ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸುವವರು
ಉತ್ತರ:- ಲೆಫ್ಟಿನೆಂಟ್ ಗವರ್ನರ್
🌸ಭಾರತದಲ್ಲಿ ಈಗ ಇರುವ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಉ- 8
🌸ಕೇಂದ್ರಾಡಳಿತ ಪ್ರದೇಶ ದೆಹಲಿಯ ತುರ್ತು ಪರಿಸ್ಥಿತಿ ಉಪಬಂಧಗಳು ಇರುವ ಅನುಚ್ಛೇದ
ಉತ್ತರ:- 239 A
🌸1953ಕ್ಕೆ ಮುಂಚೆ ಇಂದಿನ ಕೇಂದ್ರಾಡಳಿತ ಕರೆಯುತ್ತಿದ್ದರು ಪ್ರದೇಶಗಳನ್ನು ಹೀಗೆ
ಉತ್ತರ:- ಭಾಗ 'ಸಿ' ರಾಜ್ಯಗಳು
🌸ದೆಹಲಿಯು ಕೇಂದ್ರಾಡಳಿತ ಪ್ರದೇಶವಾದ ವರ್ಷ
ಉತ್ತರ:- 1956
🌸ಇದರ ಆಧಾರದ ಮೇಲೆ 1956ರಲ್ಲಿ ರಾಜ್ಯಗಳ ಅಂಗೀಕಾರವಾಯಿತು
ಉತ್ತರ:- ಭಾಷಾವಾರು ಆಧಾರದ ಮೇಲೆ
🌸ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯನ್ನು ನೇಮಕ ಮಾಡುವವರು
ಉತ್ತರ:- ರಾಷ್ಟ್ರಪತಿ
🌸ಅಂಡಮಾನ್ ಮತ್ತು ನಿಕೋಬಾರ್‌ದ ರಾಜಧಾನಿ
ಉತ್ತರ:- ಪೋರ್ಟ್‌ಬ್ಲೇರ್
🌸ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವೇ
ಉತ್ತರ:- ಜೈವಿಕ ತಂತ್ರಜ್ಞಾನ
🌸ಜೈವಿಕ ತಂತ್ರಜ್ಞಾನ ಎಂಬ ಪದ ಮೊಟ್ಟಮೊದಲು ಬಳಕೆಗೆ ಬಂದದ್ದು ಉತ್ತರ:-1920ರಲ್ಲಿ
🌸ಜೈವಿಕ ತಂತ್ರಜ್ಞಾನ ಎಂಬ ಪದ ಮೊಟ್ಟಮೊದಲು ಬಳಕೆಗೆ ಬಂದದ್ದು
ಉತ್ತರ:- ಬ್ರಿಟನ್ ದೇಶದ ಲೀಡ್ಸ್‌ನಲ್ಲಿ
🌸ಅಣಬೆಗಳನ್ನು ಕೃತಕವಾಗಿ ಬೆಳೆಸುವ ವಿಧಾನ ಬಳಕೆಗೆ ಬಂದಿದ್ದು
ಉತ್ತರ:- 1650, ಫ್ರಾನ್ಸ್
🌸ಭಾರತದಲ್ಲಿ ನ್ಯಾಶನಲ್ ಬಯೋಟೆಕ್ನಾಲಜಿ ಬೋರ್ಡ್ ಸ್ಥಾಪನೆಯಾಗಿದ್ದು (NBTB)
ಉತ್ತರ: - 1982
🌸ಭಾರತದಲ್ಲಿ ಡಿಪಾರ್ಟ್ ಮೆಂಟ್ ಆಫ್ ಬಯೋಟೆಕ್ನಾಲಜಿ ರಚನೆಯಾಗಿದ್ದು
ಉತ್ತರ:- 1986
🌸ಒಂದೇ ಮಾತೃ ಜೀವಕೋಶದಿಂದ ಅಲೈಂಗಿಕ ರೀತಿಯಲ್ಲಿ ಉತ್ಪತ್ತಿಯಾಗುವ ಅಣುಗಳ ಅಥವಾ ಜೀವಕೋಶಗಳ ಇಡೀ ಸಮೂಹಕ್ಕೆ ಹೀಗೆನ್ನುವರು
ಉತ್ತರ:- ತದ್ರೂಪಿ ಅಥವಾ ಕ್ಲೋನ್
🌸ತಂದೆ ಮತ್ತು ಮಗನ ನಡುವೆ ಇರುವ ತಳಿ ಸಂಬಂಧವನ್ನು ನಿರ್ಧರಿಸಲು ಬಳಸುವ ತಂತ್ರಜ್ಞಾನ
ಉತ್ತರ:- ಡಿ. ಎನ್.ಎ. ಬೆರಳಚ್ಚು ತಂತ್ರಜ್ಞಾನ
🌸ಪ್ರಪಂಚದ ಮೊಟ್ಟ ಮೊದಲ ತದ್ರೂಪಿ ಪ್ರಾಣಿ
ಉತ್ತರ:- ಕುರಿ
🌸ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿರುವ ನೀರಾವರಿಯ ವಿಧ
ಉತ್ತರ:- ಬಾವಿ ನೀರಾವರಿ
🌸 ದಕ್ಷಿಣ ಭಾರತದಲ್ಲಿ ಹೆಚ್ಚು ರೂಢಿಯಲ್ಲಿರುವ ನೀರಾವರಿ
ಉತ್ತರ:- ಕೆರೆ ನೀರಾವರಿ
🌸 ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಉತ್ತರ:- ದಾಮೋದರ ನದಿ ಕಣಿವೆ ಯೋಜನೆ
🌸ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಕರೆಯಲಾಗುತ್ತಿದ್ದ ನದಿ
ಉತ್ತರ: - ದಾಮೋದರ ನದಿ
🌸ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಉತ್ತರ:- ಭಾಕ್ರಾ ನಂಗಲ್ ಯೋಜನೆ
🌸ಭಾರತ ಮತ್ತು ನೇಪಾಳ ಗಡಿಯಲ್ಲಿ ಕೋಸಿ ನದಿಗೆ ಅಣೆಕಟ್ಟು ನಿರ್ಮಿಸಲಾದ ಸ್ಥಳ
ಉತ್ತರ:- ಹನುಮಾನ ನಗರ
🌸ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯಲಾಗುತ್ತಿದ್ದ ನದಿ
ಉತ್ತರ:- ಮಹಾನದಿ
🌸ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟು
ಉತ್ತರ:- ಹಿರಾಕುಡ್ ಅಣೆಕಟ್ಟು
🌸ಹೊಸಪೇಟೆಯ ಬಳಿ ಮಲ್ಲಾಪುರದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಜಲಾಶಯದ ಹೆಸರು
ಉತ್ತರ:- ಪಂಪಸಾಗರ
🌸ಭಾರತದ ವಿವಿಧೋದ್ದೇಶ ಯೋಜನೆಗಳಲ್ಲಿಯೇ ಅತ್ಯಂತ ದೊಡ್ಡದಾದ ಯೋಜನೆ
ಉತ್ತರ:- ನಾಗಾರ್ಜುನ ಸಾಗರ ಯೋಜನೆ
🌸ಭಾರತದಲ್ಲಿ ಅತ್ಯಂತ ಕಡಿಮೆ ಅರಣ್ಯ ಹೊಂದಿದ ರಾಜ್ಯ
ಉತ್ತರ:- ಹರಿಯಾಣ
🌸ನದಿಗಳು ಪರ್ವತ ವಲಯಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಹೀಗೆನ್ನುವರು
ಉತ್ತರ:- ಮೆಕ್ಕಲುಮಣ್ಣು
🌸ವಂಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುವ ತಂತ್ರಜ್ಞಾನವೇ
ಉತ್ತರ:- ತಳಿ ತಂತ್ರಜ್ಞಾನ (ಜೆನೆಟಿಕ್ ಇಂಜಿನಿಯರಿಂಗ್)
🌸ಪ್ರಯೋಗ ಶಾಲೆಯಲ್ಲಿ ವಂಶವಾಹಿಗಳನ್ನು ಬದಲಾಯಿಸಲು ಬಳಸಲಾಗುತ್ತಿರುವ ಕಾರ್ಯತಂತ್ರವೇ
ಉತ್ತರ:- ಪುನರ್ ಸಂಯೋಜಿತ ಡಿಎನ್ಎ ತಂತ್ರಜ್ಞಾನ
🌸ಜೈವಿಕ ತಂತ್ರಜ್ಞಾನದ ಮತ್ತೊಂದು ಪ್ರಮುಖ ಕಾರ್ಯತಂತ್ರ
ಉತ್ತರ:- ಡಿಎನ್ಎ ಬೆರಳಚ್ಚು ತಂತ್ರಜ್ಞಾನ
🌸ಮಾನವನ ಮೂತ್ರಪಿಂಡದ ಕಾರ್ಯಶೀಲ ಘಟಕಗಳಿಗೆ ಈ ಹೆಸರಿದೆ
ಉತ್ತರ:- ನೆಫ್ರಾನ್ಗಳು
🌸ಜೀವಕೋಶದಲ್ಲಿ ವಸ್ತುಗಳ ಸಾಗಾಣಿಕೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲದ ಕಣದಂಗ
ಉತ್ತರ:- ಸೆಂಟ್ರೊಸೋಮ
🌸ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ
ಉತ್ತರ:- ಸೂರ್ಯ
🌸ಪ್ರತ್ಯಾಮ್ಲಗಳು ಕೆಂಪು ಲಿಟ್ಮಸ್ ಹಾಳೆಯನ್ನು ಯಾವ ಬಣ್ಣಕ್ಕೆ ಬದಲಿಸುತ್ತದೆ
ಉತ್ತರ:- ನೀಲಿ
🌸ನೈಲಾನಿನಲ್ಲಿರುವ ಮಾನೋಮರ್ ಇದಾಗಿದೆ
ಉತ್ತರ:- ಕಾರ್ಬೊಲ್ಯಾಕ್ಟಮಂ
🌸ಹಸುಗಳಲ್ಲಿ ಕಾಲು ಜ್ವರ ಉಂಟಾಗುವುದು
ಉತ್ತರ:- ಕ್ಯಾಲ್ಸಿಯಂ ಕೊರತೆಯಿಂದ
🌸ಹತ್ತಿ ಕಾಳುಗಳನ್ನು ಹಾಲು ಕೊಡುವ ಪಶುಗಳಿಗೆ ತಿನ್ನಿಸುವುದರಿಂದ
ಉತ್ತರ:-- ತಾತ್ಕಾಲಿಕವಾಗಿ ಕೊಬ್ಬಿನ ಪ್ರಮಾಣ ಹೆಚ್ಚಿಸಬಹುದು
🌸ತೆರೆದ ಕೊಳವೊಂದರ ನೀರು ಬೇಸಿಗೆಯಲ್ಲಿ ತಂಪಾಗಿರಲು ಕಾರಣ
ಉತ್ತರ:- ವಾತಾವರಣಕ್ಕಿಂತ ನೀರು ಕಡಿಮೆ ವೇಗದಲ್ಲಿ ಉಷ್ಣವನ್ನು ಹೀರಿಕೊಳ್ಳುತ್ತದೆ
🌸ವಾತಾವರಣದ ಶಾಖ ಏರಿಕೆಗೆ ಕಾರಣ
ಉತ್ತರ- ಭೂಮಿಯ ಅವಗೆಂಪು ವಿಕಿರಣಗಳಿಂದ
🌸ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾಗುವ ಮಣ್ಣು
ಉತ್ತರ; - ಕಪ್ಪು ಅಥವಾ ರೆಗೂರ್ ಮಣ್ಣು
🌸 ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುವ ಮಣ್ಣು
ಉತ್ತರ:- - ಕೆಂಪುಮಣ್ಣು
🌸ಅತಿ ಹೆಚ್ಚು ಉಷ್ಣಾಂಶವಿರುವ ಮತ್ತು ಅತಿ ಹೆಚ್ಚು ಮಳೆಬೀಳುವ ಕಡೆಗಳಲ್ಲಿ ಕಂಡುಬರುವ ಮಣ್ಣು
ಉತ್ತರ:- ಲ್ಯಾಟರೈಟ್ ಅಥವಾ ಜಂಬಿಟ್ಟಿಗೆ ಮಣ್ಣು
5-10-2024
No comments:
Post a Comment
If You Have any Doubts, let me Comment Here