General knowledge Question and Answers
🌸ನಡುವೆ ಸ್ವರವಿಲ್ಲದೆ ಎರಡು ಅಥವಾ ಮೂರು ವ್ಯಂಜನಗಳಿದ್ದು, ಅವುಗಳ
ಮುಂದೆ ಸ್ವರವು ಸೇರಿದ ಅಕ್ಷರವು
ಉತ್ತರ:- -'ಸಂಯುಕ್ತಾಕ್ಷರ' ಅಥವಾ 'ಒತ್ತಕ್ಷರ'
🌸ಎರಡು ಅಕ್ಷರಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಚರಿಸುವುದೇ
ಉತ್ತರ:- ಸಂಧಿ
🌸ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸುವ ಶಬ್ದಗಳನ್ನು ಹೀಗೆ ಕರೆಯುವರು
ಉತ್ತರ:-'ತತ್ಸಮ'
🌸ಕನ್ನಡ ಮೂಲಾಕ್ಷರಗಳಲ್ಲಿರುವ ಮೂರು ಬಗೆಗಳು
ಉತ್ತರ:- ಸ್ವರ, ವ್ಯಂಜನ, ಯೋಗವಾಹ
🌸ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವ ಅಕ್ಷರಗಳನ್ನು ಹೀಗೆ ಕರೆಯುವರು
ಉತ್ತರ:- ಸ್ವರಗಳು
🌸ವ್ಯಂಜನಗಳಿಗೆ ಸ್ವರಗಳನ್ನು ಅಂದರೆ ಸ್ವರ ಚಿಹ್ನೆಗಳನ್ನು ಸೇರಿಸುವುದರಿಂದ ಉಂಟಾಗುವ ಮಿಶ್ರವರ್ಣಗಳೇ
ಉತ್ತರ: -'ಗುಣಿತಾಕ್ಷರ' ಅಥವಾ 'ಕಾಗುಣಿತ'
🌸1987ರಲ್ಲಿ ಕುವೆಂಪುರವರಿಗೆ ಪಂಪ ಪ್ರಶಸ್ತಿ ತಂದು ಕೊಟ್ಟ ಕೃತಿ
ಉತ್ತರ:-'ಶ್ರೀ ರಾಮಾಯಣ ದರ್ಶನಂ'
🌸ಎ. ಎನ್. ಮೂರ್ತಿರಾವ್ ಅವರಿಗೆ 1992ರಲ್ಲಿ ಈ ಕೃತಿಗೆ ಪಂಪ ಪ್ರಶಸ್ತಿ ಲà²ಿಸಿದೆ
ಉತ್ತರ:- ದೇವರು
🌸ಜೆ. ಎಸ್. ಆಮೂರ ಅವರಿಗೆ ಪಂಪ ಪ್ರಶಸ್ತಿ ಲà²ಿಸಿದ ವರ್ಷ
ಉತ್ತರ:- 2006
🌸 ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊದಲು ಇಂಗ್ಲಿಷಿನಲ್ಲಿ ರಚಿಸಿದವರು
ಉತ್ತರ:-ಇ. ಪಿ. ರೈಸ್
🌸 ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು -
ಉತ್ತರ:- ಹೆಚ್. ವಿ. ನಂಜುಂಡಯ್ಯ
🌸 ಕನ್ನಡದ ಮೊದಲ ಕಾನೂನು ಪತ್ರಿಕೆ
ಉತ್ತರ:- ನ್ಯಾಯ ಸಂಗ್ರಹ
🌸ಚಂದ್ರಗುಪ್ತನ ಆಳ್ವಿಕೆಯ ಕೊನೆಯ ವೇಳೆಗೆ ಗುಪ್ತ ಸಾಮ್ರಾಜ್ಯವು ಇಲ್ಲಿಯವರೆಗೆ ವ್ಯಾಪಿಸಿತ್ತು
ಉತ್ತರ:-ಅಲಹಾಬಾದ್, ಔದ್ ಮತ್ತು ದಕ್ಷಿಣ ಬಿಹಾರ್ ಪ್ರಾಂತ್ಯಗಳವರೆಗೆ
🌸ಮೊದಲನೇ ಚಂದ್ರಗುಪ್ತನಿಂದ ಆರಂà²à²µಾದದ್ದು
ಉತ್ತರ:- ಕ್ರಿ.ಶ. 320ರಿಂದ ಆರಂà²à²µಾಗುವ ಗುಪ್ತಯುಗ
🌸ಮೊದಲನೇ ಚಂದ್ರಗುಪ್ತನ ಉತ್ತರಾಧಿಕಾರಿಯಾಗಿದ್ದವನು
ಉತ್ತರ:--ಸಮುದ್ರಗುಪ್ತ
🌸 ಅಲಹಾಬಾದ್ ಸ್ತಂಠಶಾಸನವನ್ನು ರಚಿಸಿದವನು
ಉತ್ತರ: -ಹರಿಸೇನ
🌸 ಅಲಹಾಬಾದ್ ಸ್ತಂಠಶಾಸನವು ಇರುವ à²ಾಷೆ ಮತ್ತು ಶೈಲಿ
ಉತ್ತರ:-ಸಂಸ್ಕೃತ à²ಾಷೆ, ಗದ್ಯ ಮತ್ತು ಪದ್ಯಗಳಿಂದ ಕೂಡಿದ ಚಂಪೂ ಶೈಲಿ
🌸 ಡಾ. ವಿ. ಎ. ಸ್ಮಿತ್‌ರವರು ಸಮುದ್ರಗುಪ್ತನನ್ನು ಹೀಗೆ ಕರೆದಿದ್ದಾರೆ
ಉತ್ತರ:-à²ಾರತದ ನೆಪೋಲಿಯನ್
🌸ಸಮುದ್ರಗುಪ್ತನು ಅಶ್ವಮೇಧ ಯಾಗವನ್ನು ಆಚರಿಸಿದ್ದರಿಂದ ಅವನಿಗಿದ್ದ ಬಿರುದು
ಉತ್ತರ:- ಅಶ್ವಮೇಧ ಪರಾಕ್ರಮ
🌸ಅಲಹಾಬಾದ್ ಶಾಸನವು ಸಮುದ್ರಗುಪ್ತನನ್ನು ಹೀಗೆ ವರ್ಣಿಸಿದೆ
ಉತ್ತರ:-à²ೂಮಿಯ ಮೇಲಿನ ದೇವರೆಂದು
🌸ಸಮುದ್ರಗುಪ್ತನು ಈ ಧರ್ಮದವನಾಗಿದ್ದನು
ಉತ್ತರ: - ವೈದಿಕ ಮತದ ವೈಷ್ಣವ
🌸 ಸಮುದ್ರಗುಪ್ತನಿಗೆ ಇದ್ದ ಬಿರುದು
ಉತ್ತರ:-'ಕವಿರಾಜ'
🌸ಸಮುದ್ರಗುಪ್ತನು ಸಂಸ್ಕೃತ à²ಾಷೆಯಲ್ಲಿ ಬರೆದ ಗ್ರಂಥ
ಉತ್ತರ:-'ಕೃಷ್ಣಚರಿತೆ'
🌸ಸಮುದ್ರಗುಪ್ತನ ನಂತರ ಅವನ ಉತ್ತರಾಧಿಕಾರಿಯಾದವನು
ಉತ್ತರ:- ರಾಮಗುಪ್ತ
🌸ಕೋನಾರ್ ನದಿಗೆ ಕೋನಾರ್ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ
ಉತ್ತರ:- ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆ
🌸ದಾಮೋದರ ಯೋಜನೆಯ ಎರಡನೇ ಹಂತದ ದುರ್ಗಾಪುರದ ಒಡ್ಡು ಪೂರ್ಣಗೊಂಡ ವರ್ಷ
ಉತ್ತರ:-1955
🌸ಪಂಚೆಟ್ ಹಿಲ್‌ನ ಅಣೆಕಟ್ಟಿನ ಮುಖ್ಯ ಉದ್ದೇಶ
ಉತ್ತರ: - ಪ್ರವಾಹ ನಿಯಂತ್ರಣ
🌸ದುರ್ಗಾಪುರದ ಒಡ್ಡಿನ ಮುಖ್ಯ ಉದ್ದೇಶ
ಉತ್ತರ:- ನೀರಾವರಿ
🌸ದಾಮೋದರ ಯೋಜನೆಗೆ ಸೇರಿದ ಪ್ರಮುಖ ಶಾಖವಿದ್ಯುದಾಗಾರಗಳು
ಉತ್ತರ:- ಬೊಕಾರೋ, ಚಂದ್ರಾಪುರ ಮತ್ತು ದುರ್ಗಾಪುರ
🌸à²ಾಕ್ರಾನಂಗಲ್ ವಿವಿಧೋದ್ದೇಶ ನದಿ ಕಣಿವೆ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ
ಉತ್ತರ:- ಪಂಜಾಬ್, ಹರಿಯಾಣಾ ಮತ್ತು ರಾಜಸ್ಥಾನ
🌸à²ಾಕ್ರಾನಂಗಲ್ ಯೋಜನೆಯು ಪ್ರಾರಂà²à²—ೊಂಡ ವರ್ಷ
ಉತ್ತರ:- 1948
🌸à²ಾಕ್ರಾನಂಗಲ್ ಯೋಜನೆಯು ಪೂರ್ಣಗೊಂಡ ವರ್ಷ
ಉತ್ತರ: - 1968
🌸à²ಾಕ್ರಾ ಮತ್ತು ನಂಗಲ್ ಎಂಬ ಅಣೆಕಟ್ಟೆಗಳನ್ನು ಈ ನದಿಗೆ ಕಟ್ಟಲಾಗಿದೆ
ಉತ್ತರ:- ಸಟ್ಲೇಜ್
🌸 à²ಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯದ ಹೆಸರು
ಉತ್ತರ:- 'ಗೋವಿಂದ ಸಾಗರ'
🌸ಈ ನದಿಗೆ ಹಿಮಾಚಲ ಪ್ರದೇಶದ ಪೂಂಗ್ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ
ಉತ್ತರ:- ಬಿಯಾಸ್
🌸à²ಾಕ್ರಾನಂಗಲ್ನ ಈ ಮುಖ್ಯ ಕಾಲುವೆಯು ರಾಜಸ್ಥಾನದ ಥಾರ್ ಮರುà²ೂಮಿಯ ವರೆಗೆ ನೀರಾವರಿಯನ್ನು ಒದಗಿಸುತ್ತದೆ
ಉತ್ತರ:- ಇಂದಿರಾಗಾಂಧಿ ಕಾಲುವೆ
🌸ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತನೆ ಮಾಡುವ ಸಾಧನಗಳಿಗೆ ಹೀಗೆ ಹೇಳುತ್ತಾರೆ
ಉತ್ತರ:- ವಿದ್ಯುತ್ ಕೋಶಗಳು
🌸ಧನ ವಿದ್ಯುದ್ವಾರ, ಋಣ ವಿದ್ಯುದ್ವಾರ ಹಾಗೂ ವಿದ್ಯುತ್ ವಿಪ್ರೀಶ (ಆಮ್ಲ, ಪ್ರತ್ಯಾಮ್ಲ ಅಥವಾ ಲವಣಗಳನ್ನು ನೀರಿನಂಥ ದ್ರವದಲ್ಲಿ ಬೆರೆಸಿ ಮಾಡಿದ ದ್ರಾವಣ
ಉತ್ತರ:- ಇಲೆಕ್ಟ್ರೋಲೈಟ್
🌸ಘನ ರೂಪದ ರಾಸಾಯನಿಕಗಳನ್ನು ಪ್ರಯೋಗಿಸಿ ವಿವಿಧ ಆಕಾರ, ಗಾತ್ರಗಳಲ್ಲಿ ತಯಾರಿಸಿದ ಕೋಶಗಳಿಗೆ ಹೀಗೆ ಹೇಳುತ್ತಾರೆ
ಉತ್ತರ: - ಶುಷ್ಕ ಕೋಶಗಳು
🌸ತರಂಗ ದೂರಗಳಿಗೆ ಅನುಗುಣವಾಗಿ ಜೋಡಿಸಿದ ಪಟ್ಟಿಯನ್ನು ಹೀಗೆ ಕರೆಯುವರು
ಉತ್ತರ: - ವಿದ್ಯುತ್ಕಾಂತೀಯ ರೋಹಿತ
🌸ಕಡಿಮೆ ತರಂಗ ದೂರವುಳ್ಳ ಗಾಮಾ ತರಂಗಗಳನ್ನು ಉಪಯೋಗಿಸುವುದು
ಉತ್ತರ:- ಕ್ಯಾನ್ಸರ್ ಚಿಕಿತ್ಸೆಯಲ್ಲಿ
🌸ವೈಜ್ಞಾನಿಕ ಸಂಶೋಧನೆಯಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಉಪಯೋಗಿಸುವ ಕಿರಣ
ಉತ್ತರ:- ಎಕ್ಸ್ ಕಿರಣ(X-rays)
🌸ಧ್ವನಿಸಾಗಣೆ, ಟೆಲಿವಿಷನ್, ದೂರದರ್ಶಕ ಮತ್ತು ರೇಡಾರ್‌ಗಳನ್ನು ಉಪಯೋಗಿಸುವ ತರಂಗ
ಉತ್ತರ:- ರೇಡಿಯೋ ತರಂಗ
🌸à²ಾರವಾದ ಧಾತುಗಳು ತಾವಾಗಿ, ವಿಕಿರಣವನ್ನು ಉತ್ಸರ್ಜಿಸುತ್ತವೆ. ಇಂಥ ವಿದ್ಯುನ್ಮಾನಕ್ಕೆ ಹೀಗೆನ್ನುವರು
ಉತ್ತರ: - ನೈಸರ್ಗಿಕ ವಿಕಿರಣ ಪಟುತ್ವ
🌸ಪೋಲೋನಿಯಂ ಮತ್ತು ರೇಡಿಯಂ ಎಂಬ ಎರಡು ಹೊಸ ವಿಕಿರಣಪಟು ಧಾತುಗಳನ್ನು ಆವಿಷ್ಕರಿಸಿದವರು
ಉತ್ತರ:- ಕ್ಯೂರಿ ದಂಪತಿಗಳು (1896 ಮತ್ತು 1898ರಲ್ಲಿ)
28-09-2024
No comments:
Post a Comment
If You Have any Doubts, let me Comment Here