JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 30, 2024

2014-15 Government High School Hindi Teachers Recruitment Regards

  Jnyanabhandar       Wednesday, October 30, 2024
Regarding the implementation of decisions of Karnataka State Administrative Judicial Council Bangalore regarding the recruitment of Government High School Hindi Language Teachers for the year 2014-15.

2014-15 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಬೆಂಗಳೂರು ಇಲ್ಲಿನ ಅರ್ಜಿಗಳ ತೀರ್ಪುಗಳನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2014-15 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಬೆಂಗಳೂರು ಇಲ್ಲಿ ಕೆಲವು ಅಭ್ಯರ್ಥಿಗಳು ದಾವೆ ಹೂಡಿದ್ದು, ಸದರಿ ದಾವೆ ಅರ್ಜಿ:3675/2023 ಹಾಗೂ ಅರ್ಜಿ ಸಂಖ್ಯೆ: 3602-3603/2023 ರ ದಿನಾಂಕ:16.02.2024 ರಂದು ತೀರ್ಪು ನೀಡಿದ್ದು ಹಾಗೂ ಅರ್ಜಿ ಸಂಖ್ಯೆ: 3207-3214/2023, 4095/2023, 3195- 3198/2023, 3275/2023 ಪ್ರಕರಣಗಳಲ್ಲಿ ದಿನಾಂಕ:25.01.2024 ರಂದು ತೀರ್ಪು ನೀಡಿರುತ್ತದೆ. ಸದರಿ ತೀರ್ಪುಗಳನ್ನು ಪರಿಶೀಲಿಸಿ, ತೀರ್ಪಿನಲ್ಲಿರುವ ಒಟ್ಟು 17 ಅಭ್ಯರ್ಥಿಗಳು ನೇಮಕಾತಿಗೆ ಅರ್ಹತೆ ಹೊಂದಿರುವುದರಿಂದ ಸದರಿ ಅಭ್ಯರ್ಥಿಗಳನ್ನು ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಪರಿಗಣಿಸಲು 17 ಹೆಚ್ಚುವರಿ ಹುದ್ದೆಗಳ ಅವಶ್ಯಕತೆ ಇರುವುದರಿಂದ ಹೆಚ್ಚುವರಿ 17 ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖ 4 ಮತ್ತು 5 ರಲ್ಲಿ ಸರ್ಕಾರದ ಅನುಮತಿ ಕೋರಲಾಗಿತ್ತು.

L

2014-15 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ KAT ಅರ್ಜಿ ಸಂ: 3207-3214/2023, 4095/2023, 3195-3198/2023, 3275/2023 2 3602-3603/2023 ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರ ಖಾಲಿ ಇರುವ 1318 ಹುದ್ದೆಗಳಲ್ಲಿ 16 ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖ 2 ರ ಪತ್ರದಲ್ಲಿ ಸರ್ಕಾರದ ಸಹಮತಿ ನೀಡಲಾಗಿರುತ್ತದೆ ಹಾಗೂ ಉಲ್ಲೇಖ 3 ರ ಸರ್ಕಾರದ ಪತ್ರದಲ್ಲಿ ಕೆಎಸ್‌ಎಟಿ ಅರ್ಜಿ ಸಂಖ್ಯೆ:3675/2023ರ ಪ್ರಕರಣದಲ್ಲಿ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರ ಖಾಲಿ ಇರುವ ಹುದ್ದೆಗಳಲ್ಲಿ 1 ಹುದ್ದೆಯನ್ನು ಬಳಸಿಕೊಂಡು ಶ್ರೀ ಅಮರೇಶ್ ಇವರನ್ನು ನೇಮಕಾತಿ ಮಾಡಲು ಸಹ ಸರ್ಕಾರದ ಸಹಮತಿ ನೀಡಲಾಗಿರುತ್ತದೆ.

ಪಯುಕ್ತ ಒಟ್ಟಾರೆ 17 ಅಭ್ಯರ್ಥಿಗಳನ್ನು ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳನ್ವಯ 2014-15 ನೇ ಸಾಲಿನ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕಾಗಿರುವುದರಿಂದ ಸದರಿ ಅಭ್ಯರ್ಥಿಗಳ ವಿಭಾಗವಾರು ಪ್ರತ್ಯೇಕ ಆಯ್ಕೆ ಪಟ್ಟಿಗಳನ್ನು ದಿನಾಂಕ:28.10.2024 ರೊಳಗೆ ತಯಾರಿಸಿ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು. ಸದರಿ ಆಯ್ಕೆ ಪಟ್ಟಿಗಳನ್ನು ಆಯಾ ವಿಭಾಗೀಯ ಆಯ್ಕೆ ಪ್ರಾಧಿಕಾರಿಗಳು ಹಾಗೂ ಪದನಿಮಿತ್ತ ವಿಭಾಗೀಯ ಸಹ ನಿರ್ದೇಶಕರುಗಳಿಗೆ ಕಳುಹಿಸಿ ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸುವಂತೆ ತಿಳಿಸಿದೆ.

ಮುಂದುವರೆದು ಈ ಮೇಲಿನ ಅಂಶಗಳ ಹಿನ್ನಲೆಯಲ್ಲಿ ಈ ಕೆಳಗಿನಂತೆ ಉಳಿದ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ.

logoblog

Thanks for reading 2014-15 Government High School Hindi Teachers Recruitment Regards

Previous
« Prev Post

No comments:

Post a Comment

If You Have any Doubts, let me Comment Here