Service Joining Time Table For Government Employees
ಸರ್ಕಾರಿ ನೌಕರನು ಒಂದು ಹೊಸ ಹುದ್ದೆಗೆ ಹಾಜರಾಗಲು ಅಥವಾ ಅವನನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ಹೋಗಲು ಅನುಮತಿಸಲಾದ ಕಾಲವನ್ನು ನಾವು ಸೇರಿಕೆ ಕಾಲ ಎಂದು ಕರೆಯುತ್ತೆವೆ.
ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24) ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ?
ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ. 3.ಯಾವ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಸೇರಿಕೆ ಕಾಲ ಲಭಿಸುವದಿಲ್ಲ. ಯಾರೇ ಒಬ್ಬ ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುವುದಿಲ್ಲ. ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜನ್ನು ತೆಗೆದುಕೊಳ್ಳತಕ್ಕದ್ದು.
ಪೂರ್ವಾಹ್ನವೆಂದರೆ ಎಷ್ಟು ಗಂಟೆ?
12 ಗಂಟೆಯೊಳಗಿನ ಸಮಯವನ್ನು ಪೂರ್ವಾಹ್ನವೆಂದು ಕರೆಯುವರು.
6.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಸ್ಥಳ/ನಿವಾಸ ಬದಲಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.
7.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಯಾವಾಗಿನಿಂದ ಪ್ರಾರಂಭವಾಗುತ್ತದೆ ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಸೇರಿಕೆ ಕಾಲವು ಈ ಕೆಳಕಂಡಂತೆ ಪ್ರಾರಂಭವಾಗುತ್ತದೆ.
1.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಆತನು ತನ್ನ ಕರ್ತವ್ಯದ ಪ್ರಭಾರವನ್ನು ಅಪರಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಮುಂದಿನ ದಿನದಿಂದ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ.
8.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲವನ್ನು ತಿಳಿಸಿ.
ಆತನು ಪರಿಷ್ಕೃತ ಆದೇಶವನ್ನು ಪಡೆಯುವುದಕ್ಕಿಂತ ಮುಂಚೆ ಬಳಸಿಕೊಂಡಿದ್ದ ಸೇರಿಕೆ ಕಾಲವನ್ನು ಬಿಟ್ಟು ಆತನು ಹೊಸದಾಗಿ ಪರಿಷ್ಕೃತ ಆದೇಶವನ್ನು ಪಡೆದ ದಿನಾಂಕದಿಂದ ಹೊಸ ಸೇರಿಕೆ ಕಾಲವು ಬಳಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.
9.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ.ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ,ಆತನಿಗೆ ಲಭ್ಯವಾಗುವ ಸೇರಿಕೆ ಕಾಲ ಯಾವತ್ತಿನಿಂದ ಅಥವಾ ಎಲ್ಲಿಂದ ಪ್ರಾರಂಭವಾಗುತ್ತದೆ ತಿಳಿಸಿ.
ಯಾವನೇ ఒబ్బ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ,ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನು ಪರಿಷ್ಕೃತ ಆದೇಶವನ್ನು ಸ್ವೀಕರಿಸಿದ ಸ್ಥಳದಿಂದಲೇ ಆತನಿಗೆ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ
10.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಪುನರ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಯಾವುದೇ ಸೇರಿಕೆ ಕಾಲವು ಲಭ್ಯವಾಗುವುದಿಲ್ಲ.
11. ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಸೇರಿಕೆ ಕಾಲವು ಲಭ್ಯವಾಗುತ್ತದೆ. ಅಮಾನತ್ತಿನಿಂದ ಬಿಡುಗಡೆಗೊಳಿಸಿ ಪುನರ ನೇಮಕ ಮಾಡಿದ ಆದೇಶ ಸ್ವೀಕರಿಸಿದ ದಿನಾಂಕದ ನಂತರದ ದಿನದಿಂದ ಸೇರಿಕೆ ಕಾಲವು ಲಭ್ಯವಾಗುತ್ತದೆ.
12.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿನಲ್ಲಿದ್ದ ಅವಧಿಯಲ್ಲಿ ವಾಸಮಾಡಲು ಅನುಮತಿ ನೀಡಲಾಗಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆ
No comments:
Post a Comment
If You Have any Doubts, let me Comment Here