ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್-ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕಾತಿ ಸಂಬಂಧ ಮೂಲ ದಾಖಲಾತಿಗಳ ಪರಿಶೀಲನೆ ಮಾಡುವ ಬಗ್ಗೆ.
ಉಲ್ಲೇಖ: 1
. ಈ ಕಛೇರಿ ಅಧಿಸೂಚನೆ ಸಂಖ್ಯೆ: ಜಸಅ/205/ಇಎಸ್ ಎಂ/ದ್ವಿದಸ/ ಬ್ಯಾಕ್'ಲಾಗ್/2021. 2: 23-09-2022 2 21-10-2022.
2. ಈ ಇಲಾಖೆಯ ಅಧಿಕೃತ ಪಜಾಲತಾಣದಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ: ಜಸಅ/205/ಇಎಸ್‌ಎಂ/ದ್ವಿದಸ/ಬ್ಯಾಕ್ ಲಾಗ್/ 2021, 05: 27-06-2024.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ನಾಗರಿಕ ಸೇವಾ (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಭರ್ತಿಯಾಗದೆ ಖಾಲಿ ಉಳಿದಿರುವ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಾವಳಿಗಳು 2001 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 13 ಎಸ್‌ಬಿಸಿ 2001 ದಿನಾಂಕ: 21-11-2001ರ ನಿಯಮಗಳ ಅಡಿಯಲ್ಲಿ ಉಲ್ಲೇಖಿತ ಅಧಿಸೂಚನೆಯನ್ವಯ ಜಲಸಂಪನ್ಮೂಲ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗಿರುತ್ತದೆ. ಅದರನ್ವಯ 29 ವರ್ಷದಿಂದ 40 ವರ್ಷಗಳ ವಯೋಮಿತಿಯುಳ್ಳ ಅಭ್ಯರ್ಥಿಗಳ, ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡವಾರು ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ದಾಖಲಾತಿಗಳ ಪರಿಶೀಲನೆ ಮತ್ತು ನೈಜತೆ ಪರಿಶೀಲನೆಗೆ ಒಳಪಡಿಸುವ ಷರತ್ತಿಗೊಳಪಟ್ಟು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಅದರಂತೆ, ಮೂಲ ದಾಖಲಾತಿಗಳ ಪರಿಶೀಲನೆಗೆ ಒಳಪಡುವ ಅಭ್ಯರ್ಥಿಗಳ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿದೆ. ಸದರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳು, ಅವರ ಅರ್ಜಿಯಲ್ಲಿ ಉಲ್ಲೇಖಿಸಿರುವ ದಾಖಲೆಗಳ ಪರಿಶೀಲನೆಗಾಗಿ, ದಿನಾಂಕ: 10-09-2024ರಂದು ಬೆಳಿಗ್ಗೆ ಸಮಯ: 11.00 ಕ್ಕೆ ಈ ಕೆಳಕಂಡ ಮೂಲ ದಾಖಲಾತಿಗಳು ಮತ್ತು ಅದರ ಎರಡು ಸೆಟ್ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ, ತಪ್ಪದೇ ಈ ಕಛೇರಿಗೆ ಹಾಜರಾಗತಕ್ಕದೆಂದು ತಿಳಿಸಲಾಗಿದೆ. ಸದರಿ ದಾಖಲಾತಿ ಪರಿಶೀಲನಾ ಪ್ರಕ್ರಿಯೆಗೆ ಗೈರು ಹಾಜರಾದಲ್ಲಿ ಅಂತಹ ಅಭ್ಯರ್ಥಿಗಳನ್ನು ಪುನ: ವಿಶ್ಲೇಶಿಸದೆ ನಿಯಮಾನುಸಾರ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ/ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
1. ಇತ್ತೀಚಿನ ಭಾವಚಿತ್ರ (ಪಾಸ್‌ಪೋರ್ಟ್ ಅಳತೆ) 2 ಸಂಖ್ಯೆ.
3. ಭಾವಚಿತ್ರ ಮತ್ತು ವಿಳಾಸ ಸಮರ್ಥಿಸುವ ದಾಖಲೆ ಪ್ರತಿ (ಆಧಾರ್ ಕಾರ್ಡ್/ಚಾಲನಾ ಪರವಾನಗಿ/ ಮತ ಗುರುತಿನ ಚೀಟಿ).
4. ಎಸ್.ಎಸ್.ಎಲ್.ಸಿ/ ತತ್ಸಮಾನ ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರ.
5. ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಪ್ರಮಾಣ ಪತ್ರ (ಎಲ್ಲಾ ವರ್ಷಗಳು/ಸೆಮಿಸ್ಟರ್ ಅಂಕಪಟ್ಟಿಗಳು).
6. ಪಿ.ಯು.ಸಿಗೆ ತತ್ಸಮಾನವೆಂದು ಪರಿಗಣಿಸಲು ಎನ್.ಐ.ಓ.ಎಸ್ / ಪಿ.ಯು ಮಂಡಳಿ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾಗಿರುವುದಕ್ಕೆ ಪ್ರಮಾಣ ಪತ್ರ.
7. ಸಕ್ಷಮ ಪ್ರಾಧಿಕಾರದಿಂದ ವಿತರಿಸಲಾದ ಜಾತಿ ಪ್ರಮಾಣ ಪತ್ರ.
8. ಸರ್ಕಾರಿ ನೌಕರರಾಗಿದ್ದಲ್ಲಿ, ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ ಪಡೆದಿರುವ ಪ್ರಮಾಣ ಪತ್ರ (No Objection Certificate).
9. ಸಕ್ಷಮ ಪ್ರಾಧಿಕಾರದಿಂದ ಅಂಗವಿಕಲತೆ ಪ್ರಮಾಣ ಪತ್ರ.
10. ಮಾಜಿ ಸೈನಿಕರಾಗಿದ್ದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರ.
11. ಗ್ರಾಮೀಣ ಅಭ್ಯರ್ಥಿ ಮೀಸಲಾತಿಯ ಪ್ರಮಾಣ ಪತ್ರ.
12. ಕನ್ನಡ ಮಾಧ್ಯಮ ಮೀಸಲಾತಿಯ ಪ್ರಮಾಣ ಪತ್ರ.
13. ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ.
14. ಸ್ಥಳೀಯ ಗಣ್ಯವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ-02 ಸಂಖ್ಯೆ.
15. ಶಾಲಾ/ಕಾಲೇಜಿನಿಂದ ಪಡೆದ ನಡತೆ ಪ್ರಮಾಣಪತ್ರ.
16. ವಯೋಮಿತಿ ಸಡಿಲಿಕೆ ಕೋರಿದ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಒದಗಿಸುವುದು.
17. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಸಲ್ಲಿಸಿದ ಇನ್ನಿತರೆ ದಾಖಲಾತಿಗಳು.
18. ಮೂಲ ಕರೆ ಪತ್ರವನ್ನು ಪರಿಶೀಲನಾ ಸಮಯದಲ್ಲಿ ಹಾಜರುಪಡಿಸಲು ಸೂಚಿಸಿದೆ.
ಸಂಬಂಧಿಸಿದ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು, ಅವರುಗಳ ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸಕ್ಕೆ, ನೋಂದಣಿ ಅಂಚೆ ಪಾವತಿ ಬಾಕಿ ಮೂಲಕ ಈಗಾಗಲೇ ಕಳುಹಿಸಲಾಗಿರುತ್ತದೆ.
No comments:
Post a Comment
If You Have any Doubts, let me Comment Here