Karnataka Public Employment (Reservation in Recruitment for Hyderabad-Karnataka Region) Order 2013.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ದಿನಾಂಕ: 01.01.2013ರಂದು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತಂದು ಅನುಚ್ಛೇದ 371(ಜೆ)ನ್ನು ಸೇರ್ಪಡೆಗೊಳಿಸಿದೆ. ಈ ಹಿನ್ನಲೆಯಲ್ಲಿ ಉಲ್ಲೇಖಿತ 1ರ ಅಧಿಸೂಚನೆಯ ಮೂಲಕ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯಪಾಲರು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ನ್ನು ಹೊರಡಿಸಿರುತ್ತಾರೆ.
ಸದರಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ-3ರನ್ವಯ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಮಂಜೂರಾದ ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ವೃಂದಬಲದ ಶೇ.75ರಷ್ಟು ಹುದ್ದೆಗಳನ್ನು ಪ್ರಾದೇಶಿಕ ಮಟ್ಟದ ಸ್ಥಳೀಯ ವೃಂದವೆಂದು ಮತ್ತು ರಾಜ್ಯ ಮಟ್ಟದ ಕಛೇರಿಗಳೆಂದು ವರ್ಗೀಕರಿಸಲಾಗುವ ಕಛೇರಿಗಳಲ್ಲಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಛೇರಿಗಳಲ್ಲಿ ಮಂಜೂರಾಗಿರುವ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ಹುದ್ದೆಗಳ ಶೇ.8ರಷ್ಟು ಹುದ್ದೆಗಳನ್ನು ರಾಜ್ಯಮಟ್ಟದ ಸ್ಥಳೀಯ ವೃಂದವೆಂದು ಗುರುತಿಸಿ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿ ಉಲ್ಲೇಖಿತ-2 ರನ್ವಯ ಅಧಿಸೂಚನೆ ಹೊರಡಿಸಲಾಗಿದೆ.
No comments:
Post a Comment
If You Have any Doubts, let me Comment Here