Guidelines for distribution of nutritious food including eggs to students of class 1-10 6 days a week
1-10 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದ 6 ದಿನವೂ ಮೊಟ್ಟೆ ಸೇರಿ ಪೌಷ್ಠಿಕ ಆಹಾರ ವಿತರಣೆ ಮಾರ್ಗಸೂಚಿ.
2024-25ನೇ ಸಾಲಿನಲ್ಲಿ ರಾಜ್ಯ ಸರಕಾರವು ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜಿಂ ಪ್ರೇಮ್‌ಜಿ ಫೌಂಡೇಶನ್, ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಈಗಾಗಲೇ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಹೊರತಾಗಿ) ವಾರದ ಎಲ್ಲಾ ಆರು ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗಿದೆ.
ರಾಜ್ಯ ಸರ್ಕಾರದ ಶೇಕಡಾ 100ರ ಆರ್ಥಿಕ ಅನುದಾನದ ನೆರವಿನಿಂದ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರಕ್ಕೆ 2 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ, ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉಲ್ಲೇಖ-1 ಮತ್ತು 2 ರ ಆದೇಶಗಳಂತೆ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ.
ಇದಕ್ಕೆ ಬೆಂಬಲವಾಗಿ ಹಾಗೂ ಪೂರಕವಾಗಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸದರಿ ಕಾರ್ಯಕ್ರಮವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ರಾಜ್ಯದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ವಲಯದಿಂದ ಅಜೀಂ ಪೇಮಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆ, ಇವರು ತಮ್ಮ ಅನುದಾನದ ನೆರವಿನೊಂದಿಗೆ ಸಹಭಾಗಿತ್ವ ನೀಡಲು ಮುಂದ ಬಂದಿರುತ್ತಾರೆ.
2024-25ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ 02 ದಿನಗಳಿಗೆ ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಜೊತೆಗೆ ವಾರಕ್ಕೆ ಪ್ರತಿ ವಿದ್ಯಾರ್ಥಿಗೆ ಒಟ್ಟು 06 ದಿನಗಳ ಅವಧಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು, ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಇತರೆ ಪೂರಕ ಪೌಷ್ಠಿಕ ಆಹಾರವಾಗಿ ಬಾಳಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವ ಕುರಿತಂತೆ ಅಜೀಂ ಪೇಮಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಉಲ್ಲೇಖ-3 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಇವರ ಸಮ್ಮುಖದಲ್ಲಿ ದಿನಾಂಕ 20.07.2024 ರಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಉಲ್ಲೇಖ-4 ರಲ್ಲಿ ರಾಜ್ಯದ ಅಂದಾಜು 55,64,394 ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್-2024 ರ ಮಾಹೆಯಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಗುವ ಒಟ್ಟು ಅಂದಾಜು ವೆಚ್ಚ ರೂ.1591,60,14,000/- ಆರ್ಥಿಕ ಅನುದಾನವನ್ನು ಭರಿಸಲು ಒಪ್ಪಿಗೆ ಸೂಚಿಸಿ Grant Agreement ನ್ನು ದಿನಾಂಕ 27.08.2024 ರಂದು ಅನುಷ್ಠಾನಕ್ಕಾಗಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
2. ಕಾರ್ಯಕ್ರಮದ ಉದ್ದೇಶಗಳು:
* ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿ ಶಾಲಾ ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಮತ್ತು ಬೌದ್ಧಿಕ ವಿಕಾಸವನ್ನು ಪ್ರೋತ್ಸಾಹಿಸುವುದು.
ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ದೈನಂದಿನ ತರಗತಿ ಹಾಜರಾತಿಯನ್ನು ವೃದ್ಧಿಸುವುದು.
ವಿದ್ಯಾರ್ಥಿಗಳ ಸಮಗ್ರ ದೈಹಿಕ ಆರೋಗ್ಯ ಮತ್ತು ಬೆಳವಣಿಗೆಯನ್ನು ಉತ್ತಮಗೊಳಿಸಿ ಅಭಿವೃದ್ಧಿಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here