General Knowledge Question and Answers
🌸ಹೆಚ್ಚು ಕ್ಯಾಲೋರಿಫಿಕ್ ಮೌಲ್ಯ ಹೊಂದಿರುವ ಇಂಧನಗಳು
ಉತ್ತರ: - ಅನಿಲ ಇಂಧನಗಳು (Gaseous fuels)
🌸ಎಲ್‌ಪಿಜಿಯ ಮುಖ್ಯ ಘಟಕ
ಉತ್ತರ: - ಬ್ಯೂಟೇನ್
🌸ಎಲ್‌ಪಿಜಿಯ ಸೋರುವಿಕೆಯನ್ನು ಪತ್ತೆ ಹಚ್ಚಲು ಬಳಸುವ ರಾಸಾಯನಿಕ
ಉತ್ತರ: - ಈಥೈಲ್ ಮರ್‌ಕಾಪ್ಟನ್ (CH3CH2SH)
🌸ಪ್ರಾಥಮಿಕವಾಗಿ ವಾಯುಗುಣದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶ
ಉತ್ತರ:-ಅಕ್ಷಾಂಶ
🌸ದಖನ್ ಪಶ್ಚಿಮ ಘಟ್ಟದ ಪೂರ್ವಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ
ಉತ್ತರ: - ಮಳೆಯ ನೆರಳಿನ ಪ್ರದೇಶ
🌸 ಥಾರ್ ಮರುಭೂಮಿಯಲ್ಲಿ ಈ ರೀತಿಯ ಉಷ್ಣತೆ ಕಂಡು ಬರುತ್ತದೆ
ಉತ್ತರ:-ಖಂಡಾಂತರ ಉಷ್ಣತೆ
🌸 ವಾಯುಗುಣವನ್ನು ವಿವಿಧ ವಿಧಗಳಾಗಿ ವಿಂಗಡಿಸಲು ಪರಿಗಣಿಸುವ ಅತ್ಯಂತ ಮಹತ್ವದ ಮಾನದಂಡಗಳು
ಉತ್ತರ: -ಉಷ್ಣಾಂಶ ಮತ್ತು ಮಳೆ (ವೃಷ್ಟಿ)
🌸ಉಷ್ಣವಲಯದ ಮಾನ್ಸೂನ್ ವಾಯುಗುಣದಲ್ಲಿ ಕಂಡುಬರುವ ಮೂರು ಸ್ಪಷ್ಟ ಋತುಗಳು
ಉತ್ತರ:-ಶೀತ ಋತು (ಅಕ್ಟೋಬರ್-ಜನವರಿ), ಉಷ್ಣ ಋತು (ಫೆಬ್ರುವರಿ-ಮೇ), ಮಳೆಗಾಲ (ಜೂನ್-ಸೆಪ್ಟೆಂಬರ್)
🌸ರೋಮ್ ಸಾಮ್ರಾಜ್ಯ ಈ ನದಿ ದಂಡೆಯ ಮೇಲೆ ರೂಪುಗೊಂಡಿತು
ಉತ್ತರ: -ಟೈಬರ್ ನದಿ
🌸ರೋಮ್ ಸಂಸ್ಕೃತಿಯ ಸುವರ್ಣಯುಗ ಎಂದು ಇವರ ಕಾಲವನ್ನು ಕರೆಯಲಾಗುತ್ತದೆ
ಉತ್ತರ:- ಆಗಸ್ಟಸ್ ಸೀಜರ್
🌸ಆಗಸ್ಟಸ್ ಸೀಜರ್ ಚಕ್ರವರ್ತಿಯ ಕಾಲದಲ್ಲಿದ್ದ ಪ್ರಮುಖ ಇತಿಹಾಸ ತಜ್ಞ
ಉತ್ತರ: -ಲಿವಿ (Livy)
🌸ಬೈಜಾಂಟಿಯನ್ ನಗರವನ್ನು ಕಾನ್ಸ್ಟಾಂಟಿನೋಪಲ್ ಎಂದು ನಾಮಕರಣ ಮಾಡಿದ ಚಕ್ರವರ್ತಿ
ಉತ್ತರ:-ಕಾನ್ಸ್ಟಂಟೈನ್
🌸ಕಲ್ಯಾಣ ಚಾಲುಕ್ಯ ವಂಶದ ಸ್ಥಾಪಕ
ಉತ್ತರ:- ಇಮ್ಮಡಿ ತೈಲಪ
🌸ಸತ್ಯಾಶ್ರಯನ ಆಸ್ಥಾನದಲ್ಲಿದ್ದ ಕನ್ನಡ ಖ್ಯಾತ ಕವಿ
ಉತ್ತರ:- ರನ್ನ
🌸ಸತ್ಯಾಶ್ರಯನ ನಂತರ ಪಟ್ಟಕ್ಕೆ ಬಂದ ಅರಸ
ಉತ್ತರ:- ಐದನೇ ವಿಕ್ರಮಾದಿತ್ಯ (ಕ್ರಿ.ಶ. 1008-14)
🌸ಕಲ್ಯಾಣ ಚಾಲುಕ್ಯರ ರಾಜಧಾನಿ ಕಲ್ಯಾಣ ಇರುವ ಜಿಲ್ಲೆ
ಉತ್ತರ:- ಬೀದರ್ ಜಿಲ್ಲೆ
🌸ತಾನು ಸಿಂಹಾಸನಕ್ಕೆ ಬಂದ ಜ್ಞಾಪಕಾರ್ಥ ಕ್ರಿ.ಶ. 1076ರಲ್ಲಿ ಚಾಲುಕ್ಯ ವಿಕ್ರಮ ಶಕೆಯನ್ನು ಹೊರಡಿಸಿ ರೂಢಿಗೆ ತಂದ ಅರಸ
ಉತ್ತರ:-ಆರನೇ ವಿಕ್ರಮಾದಿತ್ಯ
🌸ಮಾನವ ಸೇವಿಸಿದ ಆಹಾರದ ಕಿಣ್ವಗಳ ಕ್ರಿಯೆಯಿಂದ ಜಲ ವಿಶ್ಲೇಷಣೆ ಹೊಂದಿ ಅತ್ಯಂತ ಸೂಕ್ಷ್ಮ ಕಣಗಳಾಗುವುದು
ಉತ್ತರ:- ರಾಸಾಯನಿಕ ಜೀರ್ಣಕ್ರಿಯೆ
🌸ಹಲ್ಲಿನಲ್ಲಿರುವ ಮೂರು ಮುಖ್ಯ ಭಾಗಗಳು
ಉತ್ತರ:- ಶೀರೋಭಾಗ (Grown),) ಕಂಠಭಾಗ (Neck), ಬೇರು (root)
🌸ಹಲ್ಲಿನ ಮಧ್ಯಭಾಗದಲ್ಲಿರುವುದು
ಉತ್ತರ:- ಮಜ್ಜಾ ಕುಹರ
🌸'ನಟಸಾರ್ವಭೌಮ' ಎಂಬ ಕೃತಿಯನ್ನು ಬರೆದವರು
ಉತ್ತರ:- ಅ.ನ.ಕೃಷ್ಣರಾಯ
🌸ಪಿ. ಲಂಕೇಶ್ ಅವರ ಕೃತಿ
ಉತ್ತರ:-'ಕಲ್ಲು ಕರಗುವ ಸಮಯ'
🌸'ಆ್ಯಸ್ ಯು ಲೈಕ್ ಇಟ್' ಗ್ರಂಥವನ್ನು ಬರೆದವರು
ಉತ್ತರ:- ವಿಲಿಯಮ್ ಶೇಕ್ಸ್‌ಪಿಯರ್
🌸ಮ್ಯಾಕ್ಸಿಂ ಗಾರ್ಕಿ ಅವರು ಬರೆದ ಗ್ರಂಥ
ಉತ್ತರ :-'ಚಿಲ್ಡ್ರನ್ ಆಫ್ ದಿ ಸನ್'
🌸'ಡೇಂಜರ್ ಇನ್ ಕಾಶ್ಮೀರ್' ಗ್ರಂಥವನ್ನು ಬರೆದವರು
ಉತ್ತರ:-ಜೋಸೆಫ್ ಕಾರ್ಬೆಲ್
🌸'ಜುಲ್ಫೀಕರ್ ಅಲಿ ಭುಟ್ಟೋ ಆ್ಯಂಡ್ ಪಾಕಿಸ್ತಾನ್' ಎಂಬ ಗ್ರಂಥವನ್ನು ಬರೆದವರು
ಉತ್ತರ: -ರಫಿರಾಜ್
🌸ಆರ್.ಕೆ. ನಾರಾಯಣ್ ಅವರು ಬರೆದ ಗ್ರಂಥ
ಉತ್ತರ: -'ವೇಟಿಂಗ್ ಫಾರ್ ದಿ ಮಹಾತ್ಮಾ'
🌸'ಟು ಫೇಸಸ್ ಆಫ್ ಇಂದಿರಾಗಾಂಧಿ' ಗ್ರಂಥವನ್ನು ಬರೆದವರು
ಉತ್ತರ:-ಉಮಾ ವಾಸುದೇವ
🌸'ಕುಸುಮ ಬಾಲೆ' ಕೃತಿಯನ್ನು ಬರೆದವರು
ಉತ್ತರ:- ದೇವನೂರು ಮಹಾದೇವ
🌸ಅಗಾಥಾ ಕ್ರಿಸ್ಟಿ ಅವರು ಬರೆದ ಗ್ರಂಥ
ಉತ್ತರ:-'ಡೆತ್ ಆನ್ ದಿ ನೈಲ್'
🌸 ಬಿ. ಎಂ. ಶ್ರೀಕಂಠಯ್ಯನವರ ಅಭಿನಂದನಾ ಗ್ರಂಥ
ಉತ್ತರ:- ಸಂಭಾವನೆ
🌸ಡಿ. ಎಲ್. ನರಸಿಂಹಾಚಾರ್ ಅವರ
ಅಭಿನಂದನಾ ಗ್ರಂಥ ಇದಾಗಿದೆ
ಉತ್ತರ:- ಜ್ಞಾನೋಪಾಸಕ, ಉಪಾಯನ
🌸"ಧೀಮಂತ" ಎಂಬುದು ಇವರ ಅಭಿನಂದನ ಗ್ರಂಥವಾಗಿದೆ
ಉತ್ತರ:- ಡಿ. ವಿ. ಗುಂಡಪ್ಪ
🌸ಟಿ. ಎಸ್. ವೆಂಕಣ್ಣಯ್ಯನವರ ಅಭಿನಂದನಾ ಗ್ರಂಥ
ಉತ್ತರ:- ಸವಿನೆನಪು
🌸ಜಿ. ಪಿ. ರಾಜರತ್ನಂ ಅವರ ಅಭಿನಂದನಾ ಗ್ರಂಥ ಇದಾಗಿದೆ
ಉತ್ತರ:- ರಾಜಮಾರ್ಗ
🌸ಮೆಹ್ರೌಲಿ ಸ್ತಂಭಶಾಸನವು ಇವರ ಸಾಹಸ ಕಾರ್ಯಗಳನ್ನು ವಿವರಿಸುತ್ತದೆ
ಉತ್ತರ:-ಎರಡನೇ ಚಂದ್ರಗುಪ್ತ
🌸ಸ್ಕಂದಗುಪ್ತನು ಪುಷ್ಯಮಿತ್ರರೊಂದಿಗೆ ಹಾಗೂ ಹೂಣರೊಂದಿಗೆ ಹೋರಾಡಿದುದನ್ನು ತಿಳಿಸುವ ಶಾಸನ
ಉತ್ತರ:-ಬಿಟಾರಿ ಸ್ತಂಭ ಶಾಸನ
🌸ಗುಪ್ತ ಸಂತತಿಯ ಸ್ಥಾಪಕ
ಉತ್ತರ: -ಶ್ರೀಗುಪ್ತ
🌸ಕೌಟಿಲ್ಯನ ಸಹಾಯದಿಂದ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದ ಬಗ್ಗೆ ತಿಳಿಸುವುದರ ಜೊತೆಗೆ ಗುಪ್ತ ಸಾಮ್ರಾಜ್ಯ ಸ್ಥಾಪನೆಯ ಕಾಲದಲ್ಲಿನ ರಾಜಕೀಯ ಸ್ಥಿತಿ ಹಾಗೂ ಘಟನೆಗಳನ್ನು ತಿಳಿಸುವ ವಿಶಾಖದತ್ತನ ಕೃತಿ
ಉತ್ತರ:- 'ಮುದ್ರಾರಾಕ್ಷಸ'
🌸ಗುಪ್ತರ ಕಾಲದ ಸಾಮಾಜಿಕ, ಧಾರ್ಮಿಕ ಸ್ಥಿತಿಗಳನ್ನು ತಿಳಿಸುವ ಫಾಹಿಯಾನನ ಕೃತಿ
ಉತ್ತರ: -ಘೋಕೋಕಿ
🌸ಸಮುದ್ರಗುಪ್ತನ ಈ ಶಾಸನವು ಅವನ ದಿಗ್ವಿಜಯ ಮುಂತಾದ ಸಾಧನೆಗಳನ್ನು ಕುರಿತು 33 ಸಾಲುಗಳ ಬೃಹತ್ ಒಂದೇ ವಾಕ್ಯದಲ್ಲಿ ವಿವರಿಸುತ್ತದೆ
ಉತ್ತರ: - ಸಮುದ್ರಗುಪ್ತನ ಅಲಹಾಬಾದ್ ಸ್ತಂಭ ಶಾಸನ
🌸'ದೇವಿಚಂದ್ರಗುಪ್ತಂ ' ಎಂಬ ರಾಜಕೀಯ ನಾಟಕವನ್ನು ರಚಿಸಿದವರು
ಉತ್ತರ: -ವಿಶಾಖದತ್ತ
🌸ಅಭಿನವ ಗುಪ್ತನು ಬರೆದ ಗ್ರಂಥ
ಉತ್ತರ:- 'ಅಭಿನವ ಭಾರತಿ'
🌸'ಶೃಂಗಾರ ಪ್ರಕಾಶ' ಕಾವ್ಯವನ್ನು ಬರೆದವರು
ಉತ್ತರ:-ಭೋಜ
🌸ಭಾರತ ಸರಕಾರದಿಂದ 'ದಾಮೋದರ ಕಣಿವೆ ಸಂಸ್ಥೆ' (DVC) ಸ್ಥಾಪಿಸಲಾದ ವರ್ಷ
ಉತ್ತರ: -1948
🌸ದಾಮೋದರ ನದಿಯು ಉಗಮ ಹೊಂದುವ ಸ್ಥಳ
ಉತ್ತರ:- ಜಾರ್ಖಂಡ್ ರಾಜ್ಯದ ಛೋಟಾನಾಗಪುರ ಬೆಟ್ಟ
🌸ದಾಮೋದರ ನದಿಯು ಪ್ರವಾಹದಿಂದ ಅಪಾರ ಹಾನಿಯನ್ನುಂಟು ಮಾಡುವುದರಿಂದ ಇದನ್ನು ಹೀಗೆ ಕರೆಯುವರು
ಉತ್ತರ:- 'ಬಂಗಾಳದ ಕಣ್ಣೀರು'
🌸ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳನ್ನು ಪಂಚವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿ ಇವುಗಳ ಸಹಯೋಗದಿಂದ ಕೈಗೊಳ್ಳಲಾಗುತ್ತದೆ
ಉತ್ತರ: -ಕೇಂದ್ರ ಮತ್ತು ರಾಜ್ಯ ಸರಕಾರಗಳು
🌸ಭಾರತದ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ”
ಉತ್ತರ:-ದಾಮೋದರ ಕಣಿವೆ ಯೋಜನೆ
🌸1943ರಲ್ಲಿ ದಾಮೋದರ ಕಣಿವೆ ಯೋಜನೆಯನ್ನು ಈ ಕಣಿವೆ ಯೋಜನೆಯ ಮಾದರಿಯಲ್ಲಿ ರಚಿಸಲು ಉದ್ದೇಶಿಸಲಾಗಿತ್ತು
ಉತ್ತರ:- ಅಮೆರಿಕ ಸಂಯುಕ್ತ ಸಂಸ್ಥಾನದ ಟೆನ್ನೆಸ್ಸಿ (TVC)
🌸ಶ್ರೀಗುಪ್ತನ ನಂತರ ಅಧಿಕಾರಕ್ಕೆ ಬಂದವರು
ಉತ್ತರ:- ಘಟೋತ್ಕಚ
🌸'ಮಹಾರಾಜಾಧಿರಾಜ' ಎಂಬ ಬಿರುದನ್ನು ಹೊಂದಿದ ಮೊದಲ ಗುಪ್ತ ರಾಜ
ಉತ್ತರ: -ಮೊದಲನೇ ಚಂದ್ರಗುಪ್ತ
🌸ಚಂದ್ರಗುಪ್ತನು ಬಿಹಾರಿನ ಭಾಗಗಳು ಮತ್ತು ನೇಪಾಳದ ಭಾಗಗಳಲ್ಲಿ ಸ್ವತಂತ್ರ ಗಣರಾಜ್ಯವಾಗಿದ್ದ ಲಿಚ್ಚವಿಯ ಇವರನ್ನು ವಿವಾಹವಾದನು
ಉತ್ತರ:- ರಾಜಕುಮಾರಿ ಕುಮಾರದೇವಿ
No comments:
Post a Comment
If You Have any Doubts, let me Comment Here