General Knowledge Question and Answers
🐥ರಾಷ್ಟ್ರೀಯ ಯೋಜನಾ ಆಯೋಗ ಬಡತನವನ್ನು ಯಾವುದರಲ್ಲಿ ಅಳತೆ ಮಾಡಿತು ?
ಉತ್ತರ:- ಕ್ಯಾಲೋರಿ ಆಧಾರಿತ ಬೇಡಿಕೆಗಳಲ್ಲಿ
🐥ಭಾರತದ ಯಾವ ರಾಜ್ಯವು ಅಪೌಷ್ಟಿಕತೆಯಿಂದ ಬಳಲುತ್ತಿರುವ ಹೆಚ್ಚಿನ ಶೇಕಡಾವಾರು ಮಕ್ಕಳನ್ನು ಹೊಂದಿದೆ ?
ಉತ್ತರ:- ಬಿಹಾರ
🐥MPCE ಈ ಕೆಳಗಿನವುಗಳ ಸಂಕ್ಷಿಪ್ತ ರೂಪವಾಗಿದೆ?
ಉತ್ತರ:- ಮಾಸಿಕ ಪ್ರತಿ ಬಂಡವಾಳ ವೆಚ್ಚ
(Monthly Per Capital Expenditure)
🐥ಲೈಸೆನ್ಸ್ ಪದ್ಧತಿ ರದ್ದತಿ ಇದು ಯಾವ ಕೈಗಾರಿಕಾ ನೀತಿಯ ಲಕ್ಷಣಗಳಾಗಿವೆ?
ಉತ್ತರ:- 1991
🐥ಆರ್‌ಬಿಐ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ದೀರ್ಘಾವಧಿಯ ಸಾಲದ ಮೇಲೆ ವಿಧಿಸುವ ಬಡ್ಡಿಯ ದರವನ್ನು ಏನೆಂದು ಕರೆಯುವರು?
ಉತ್ತರ:- ಬ್ಯಾಂಕ್ ದರ
🐥ಎಲ್ಲಾ ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಯ ಒಂದು ಭಾಗವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನಗದು ರೂಪದಲ್ಲಿ ಕಾಯ್ದಿರಿಸುವುದನ್ನು ಏನೆಂದು ಕರೆಯುವರು??
ಉತ್ತರ:- CRR
🐥ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಯ ಒಂದು ಭಾಗವನ್ನು ತಮ್ಮ ಬಳಿಯೇ ದ್ರತ್ಯತ್ವದ ರೂಪದಲ್ಲಿ ಹೊಂದುವುದನ್ನು ಏನೆಂದು ಕರೆಯುವರು?
ಉತ್ತರ:- SLR
🐥ರಿಸರ್ವ್ ಬ್ಯಾಂಕು ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಅಲ್ಪಾವಧಿಯ ಸಾಲದ ಮೇಲೆ ವಿಧಿಸುವ ಬಡ್ಡಿ ದರವನ್ನು ಏನೆಂದು ಕರೆಯುವರು?
ಉತ್ತರ:- REPO RATE
🎓ಯಾವ ಕಾಯ್ದೆಯು ಭಾರತದ ಶಾಸಕಾಂಗದಲ್ಲಿ ದ್ವಿಸದನ ಪದ್ದತಿಗೆ ಅವಕಾಶ ಮಾಡಿಕೊಟ್ಟಿತು?
ಉತ್ತರ:- 1919ರ ಮಾಂಟೆಗೋ ಚೆಲ್ಮಸ್ಪರ್ಡ ಕಾಯ್ದೆ
🎓ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದಿದ್ದು___
ಉತ್ತರ:- 1946 ಡಿಸೆಂಬರ್ 9ರಂದು
(ದೆಹಲಿಯ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್ ನಲ್ಲಿ)
🎓ಸಂವಿಧಾನ ರಚನಾ ಸಭೆಯ ಎರಡನೇ ಸಭೆ ನಡೆದದ್ದು
ಉತ್ತರ:- 1946 ಡಿಸೆಂಬರ್ 11ರಂದು
🎓ಭಾರತಕ್ಕೆ ಒಬ್ಬ ಹೈಕಮಿಷನರ್ ನ್ನು ಯಾವ ಕಾಯ್ದೆಯ ಮೇರೆಗೆ ನೇಮಕ ಮಾಡಲಾಯಿತು?
ಉತ್ತರ:- 1919ರ ಮಾಂಟೆಗೋ ಚೆಲ್ಮಸ್ಪರ್ಡ ಕಾಯ್ದೆ
🎓ಪಂಡಿತ್ ಜವಾಹರ್ ಲಾಲ್ ನೆಹರುರವರು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಮಂಡಿಸಿದ್ದು__
ಉತ್ತರ:- 1946 ಡಿಸೆಂಬರ್ 13ರಂದು
🎓1935 ರ ಭಾರತ ಸರ್ಕಾರ ಕಾಯ್ದೆ ಸ್ಥಾಪಿಸಿದ ಒಕ್ಕೂಟದಲ್ಲಿ ಉಳಿಕೆ ಅಧಿಕಾರ (Residuary Powers) ಗಳನ್ನು ಇವರಿಗೆ ನೀಡಲಾಗಿತ್ತು
ಉತ್ತರ:- ಗವರ್ನರ್ ಜನರಲ್
🎓ಸಂವಿಧಾನದ 'ಪೂರ್ವಪೀಠಿಕೆ'ಗೆ ಇಲ್ಲಿಯವರೆಗೆ ಮಾಡಲಾದ ತಿದ್ದುಪಡಿಯ ಸಂಖ್ಯೆ ಎಷ್ಟು?
ಉತ್ತರ: ಒಂದು
🎓ಸಂವಿಧಾನ ಪ್ರಸ್ತಾವನೆಗೆ ಎಷ್ಟನೇ ತಿದ್ದುಪಡಿಯ ಮೂಲಕ ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ಸೇರ್ಪಡೆಗೊಳಿಸಲಾಯಿತು?
ಉತ್ತರ:- 1976ರ 42ನೇ ತಿದ್ದುಪಡಿ
🌸ಪರಮಾಣುವಿನ ಕಲ್ಪನೆಯನ್ನು ನೀಡಿದ ಮೊದಲ ವಿಜ್ಞಾನಿ
ಉತ್ತರ:- ರಾನಡೆ
🌸ಆಟಮ್ ಬಾಂಬನ್ನು ಕಂಡುಹಿಡಿದವನು
ಉತ್ತರ:- ಒಟ್ಟೋಹಾನ್
🌸ಭೂಮಿಯ ಗಾತ್ರವನ್ನು ಮೊಟ್ಟಮೊದಲು ನಿರ್ಧರಿಸಿದ ವ್ಯಕ್ತಿ
ಉತ್ತರ:- ಎರಟೋಸ್ಥನೀಸ್
🌸 ಗುರುತ್ವಾಕರ್ಷಣೆಯನ್ನು ಪ್ರತಿಪಾದಿಸಿದ ವಿಜ್ಞಾನಿ
- ನ್ಯೂಟನ್
🌸ಭೂಮಿ ಗೋಳಾಕಾರವಾಗಿದ್ದು ತನ್ನ ಅಕ್ಷದ ಮೇಲೆ ಸುತ್ತುತ್ತದೆ ಎಂದು ಮೊದಲಿಗೆ ತಿಳಿಸಿದವರು
ಉತ್ತರ:- ಆರ್ಯಭಟ.
🌸ಗೋಬರ್ ಗ್ಯಾಸ್‌ನಲ್ಲಿ ಅಧಿಕವಿರುವ ಘಟಕ
ಉತ್ತರ:- ಮಿಥೇನ್
🌸 ಭಾರತದಲ್ಲಿ ಮೊದಲ ಆಧುನಿಕ ಖಗೋಳ ಪರಿವೀಕ್ಷಣಾಲಯ ಸ್ಥಾಪನೆಯಾದದ್ದು
- ಮದ್ರಾಸ್‌ನಲ್ಲಿ
🌸ಹುಣಸೇ ಹಣ್ಣಿನಲ್ಲಿರುವ ಆಮ್ಲ
ಉತ್ತರ:- ಟಾರ್ಟಾರಿಕ್ ಆಮ್ಲ
🌸 ಜಲಜನಕ ಬಾಂಬಿನ ಜನಕ
ಉತ್ತರ:- ಎಡ್ವರ್ಡ್ ಟೆಲ್ಲರ್
🌸ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಛೇರಿ ಇರುವುದು
ಉತ್ತರ:- ನವದೆಹಲಿಯಲ್ಲಿ
🌸ಭಾರತಮಾಲಾ ಯೋಜನೆಯು
ಜಾರಿಗೊಂಡಿದ್ದು
ಉತ್ತರ:- 2015 ಜುಲೈ 31ರಂದು
🌸ಪ್ರಪಂಚದ ರೈಲು ಸಾರಿಗೆ ಪಿತಾಮಹನೆಂದು _ರನ್ನು ಕರೆಯಲಾಗುತ್ತದೆ
ಉತ್ತರ:- ಜಾರ್ಜ್ ಸ್ಟೀಪನ್‌ಸನ್ ( George Stephenson)
🌸 ಭಾರತದಲ್ಲಿ ಅತಿ ಹೆಚ್ಚು
ಒಳನಾಡು ಜಲಸಾರಿಗೆ ಹೊಂದಿರುವ ನದಿ
ಉತ್ತರ:- ಹೂಗ್ಲಿ ನದಿ.
🌸ಕರ್ನಾಟಕದಲ್ಲಿ ಅತಿ
ಹೆಚ್ಚು ಒಳನಾಡು ಜಲಸಾರಿಗೆ ಹೊಂದಿರುವ ನದಿ
ಉತ್ತರ- ತುಂಗಭದ್ರಾ ನದಿ
🌸ಇದು ಭಾರತದ ಅತಿ ದೊಡ್ಡ ಹಾಗೂ ಅತಿ ಮುಖ್ಯವಾದ ಬಂದರು
ಉತ್ತರ:- ಮುಂಬೈ ಬಂದರು (Mumbai Port
1869)
🌸 ____ನ್ನು ಭಾರತದ ಹೆಬ್ಬಾಗಿಲು (Gateway of India) ಮತ್ತು ಭಾರತದ ಒಡವೆ ಎನ್ನುವರು.
ಉತ್ತರ:- ಮುಂಬೈ ಬಂದರು
🌸ಹಸಿರು ಬಂದರು ಯೋಜನೆಯನ್ನು ಜನವರಿ 19, 2016ರಂದು ಜಾರಿಗೆ ತರಲಾಗಿದ್ದು, ಇದನ್ನು ಜಾರಿಗೊಳಿಸಿದ ಸಚಿವಾಲಯ
ಉತ್ತರ:- ಶಿಪ್ಪಿಂಗ್ ಸಚಿವಾಲಯ (Ministry of Shipping)
🌸ಭಾರತದಲ್ಲಿ ವಿಮಾನ ಸಾರಿಗೆ ಅಭಿವೃದ್ಧಿಗೆ ____ರಲ್ಲಿ ನಾಗರೀಕ ವಿಮಾನಯಾನ ಇಲಾಖೆ ತೆರೆಯಲಾಯಿತು
ಉತ್ತರ:- 1927ರಲ್ಲಿ
🌲ಜಗತ್ತಿನ ಸುತ್ತ ಸಂಚರಿಸುವಾಗ ಉಂಟಾಗುವ ದಿನಗಳ ವ್ಯತ್ಯಾಸದ ಸಮಸ್ಯೆಯನ್ನು ಪರಿಹರಿಸಲು ಸಹಾಯಕವಾಗುವ 180° ರೇಖಾಂಶವೇ
ಉತ್ತರ;- ಅಂತರಾಷ್ಟ್ರೀಯ ದಿನ ರೇಖೆ
🌲ಗ್ರೀನ್ ವಿಚ್ ರೇಖೆಯಿಂದ ಪೂರ್ವಕ್ಕೆ (clockwise) ಅಂದರೆ ಏಷ್ಯಾದಿಂದ ಅಮೆರಿಕಕ್ಕೆ ಚಲಿಸಿ 180° ರೇಖಾಂಶವನ್ನು ದಾಟಿದರೆ
ಉತ್ತರ:- ಒಂದು ದಿನವನ್ನು ಗಳಿಸುತ್ತೇವೆ
🌲ಗ್ರೀನ್ ವಿಚ್ ರೇಖೆಯಿಂದ ಪಶ್ಚಿಮಕ್ಕೆ (anti clockwise) ಅಂದರೆ ಅಮೇರಿಕಾದಿಂದ ಏಷ್ಯಾಕ್ಕೆ ಚಲಿಸಿ 180° ರೇಖಾಂಶವನ್ನು ದಾಟಿದರೆ
ಉತ್ತರ- ಒಂದು ದಿನವನ್ನು ಕಳೆದುಕೊಳ್ಳುತ್ತೇವೆ
🌲ಭೂಕೇಂದ್ರದಿಂದ ಭೂಮಧ್ಯ ರೇಖೆಯ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಎಳೆದಿರುವ ಕಾಲ್ಪನಿಕ ದೂರವೇ
ಉತ್ತರ:- ಅಕ್ಷಾಂಶಗಳು
🌲ಧ್ರುವಗಳ ಕಡೆಗೆ ಹೋದಂತೆ ಅಕ್ಷಾಂಶಗಳು
ಉತ್ತರ:- ಚಿಕ್ಕದಾಗುತ್ತವೆ
🌲ಒಂದು ಡಿಗ್ರಿ ಯನ್ನು 60 ನಿಮಿಷವಾಗಿಯೂ ಮತ್ತು ಒಂದು ನಿಮಿಷವನ್ನು 60 ಸೆಕೆಂಡುಗಳಾಗಿ ವಿಭಜಿಸಿರುವುದು
ಉತ್ತರ:- ಅಕ್ಷಾಂಶಗಳು
🌲ನಾಲ್ಕನೇ ಬೌದ್ಧ ಸಮ್ಮೇಳನ ಪ್ರಮುಖ ನಿರ್ಣಯ
ಉತ್ತರ:- ಮಧ್ಯಏಷ್ಯಾ, ಚೀನಾಗಳಲ್ಲಿ ಧರ್ಮ ವಿಸ್ತರಣೆ
🌲ತ್ರಿಪಿಟಕಗಳಿಗೆ ಭಾಷ್ಯವನ್ನು ಬರೆಯಲಾದ ಬೌದ್ಧ ಸಮ್ಮೇಳನ
ಉತ್ತರ:- ನಾಲ್ಕನೇ ಬೌದ್ಧ ಸಮ್ಮೇಳನ
🌲ಕುಶಾನರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಕಲೆ
ಉತ್ತರ:- ಗಾಂಧಾರ ಕಲೆ
No comments:
Post a Comment
If You Have any Doubts, let me Comment Here