August 2024 Computer Education Examination result
ಆಗಸ್ಟ್-2024 ರ ಮಾಹೆಯಲ್ಲಿ ನಡೆದ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಫಲಿತಾಂಶವನ್ನು ಮಂಡಲಿಯ ವೆಬ್‌ಸೈಟ್ http://kseab.karnataka.gov.in ನಲ್ಲಿ ದಿನಾಂಕ:06/09/2024 ರಂದು ಪೂರ್ವಾಹ್ನ ಪ್ರಕಟಿಸಲಾಗಿದ್ದು, ಸಂಬಂಧಿಸಿದ ಸಂಸ್ಥೆಗಳ ಲಾಗಿನ್‌ಗಳಲ್ಲಿ ಫಲಿತಾಂಶವನ್ನು ಅದೇ ದಿನ ಲಭ್ಯ ಮಾಡಲಾಗುವುದು. ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ದಿನಾಂಕ:06/09/2024 ರಂದು ಅಪರಾಹ್ನ ಪ್ರಕಟಿಸುವುದು. ಫಲಿತಾಂಶದಲ್ಲಿ ತಿದ್ದುಪಡಿ ಇದ್ದಲ್ಲಿ ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗಾಗಿ ಸಂಸ್ಥೆಯ ಮೂಲಕ ಪ್ರಸ್ತಾವನೆ ಸಲ್ಲಿಸುವುದು. ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಫಲಿತಾಂಶವನ್ನು ತಿದ್ದುಪಡಿ ಮಾಡಲು ಕ್ರಮವಹಿಸಲಾಗುವುದು.
ಪರೀಕ್ಷೆಯಲ್ಲಿ ದುರಾಚರಣೆ, ವಂಚನೆ, ಅನುಚಿತ ವರ್ತನೆ, ನಕಲು ಮಾಡಿರುವುದು ಮೊದಲಾದವುಗಳಿಂದ ಪ್ರಭಾವಿತವಾಗಿದೆ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಫಲಿತಾಂಶವನ್ನು ಫಲಿತಾಂಶ ಪ್ರಕಟವಾದ ನಂತರವೂ ನಿಯಮಾನುಸಾರ ತಡೆಹಿಡಿಯುವ, ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಲಿ ಹೊಂದಿರುತ್ತದೆ.
ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆಗಳು
ಆಗಸ್ಟ್-2024 ರ ಮಾಹೆಯ ಪರೀಕ್ಷೆಯ ಫಲಿತಾಂಶ ಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಸಂಸ್ಥೆಯ ಲಾಗಿನ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಕೆಳಕಂಡ ಅಂಶಗಳ ಆಧಾರದ ಮೇಲೆ ಎಲ್ಲಾ ಅಭ್ಯರ್ಥಿಗಳ ಫಲಿತಾಂಶವನ್ನು ಕಡ್ಡಾಯವಾಗಿ ಆಯಾ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಲು ತಿಳಿಸಿದೆ. ಹಾಗೂ ಯಾವುದೇ ಕಾರಣಕ್ಕೂ ಮಂಡಲಿಯಿಂದ ಫಲಿತಾಂಶ ಪಟ್ಟಿಯನ್ನು ಭೌತಿಕವಾಗಿ ಸಂಸ್ಥೆಗಳಿಗೆ ಕಳುಹಿಸಲಾಗುವುದಿಲ್ಲ.
> ಗಣಕಯಂತ್ರ ಶಿಕ್ಷಣ ಸಂಸ್ಥೆಗಳಿಂದ ಪರೀಕ್ಷಾ ಮಂಡಲಿಗೆ ಪತ್ರ ವ್ಯವಹರಿಸುವ ಪ್ರತಿಯೊಂದು ಪತ್ರದ ಮುಖ ಪುಟದಲ್ಲಿ ತಮ್ಮ ಸಂಸ್ಥೆಗೆ ನೀಡಿರುವ ಶಾಲೆಯ ಸಂಕೇತ ಸಂಖ್ಯೆ ದೂರವಾಣಿ ಸಂಖ್ಯೆ ಮತ್ತು E-Mail ವಿಳಾಸ ವನ್ನು ತಪ್ಪದೇ ನಮೂದಿಸುವುದು
> ಆಗಸ್ಟ್-2024 ರ ಮಾಹೆಯಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು.
> ಒಂದು ವೇಳೆ ಯಾವುದಾದರೂ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗದಿದ್ದಲ್ಲಿ, ಫಲಿತಾಂಶ ತಡೆಹಿಡಿದಿದ್ದಲ್ಲಿ ಫಲಿತಾಂಶ ಪ್ರಕಟಿಸಿದ 15 ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಳಿಗೆ ಪತ್ರ ಬರೆದು ಫಲಿತಾಂಶ ಪಡೆದುಕೊಳ್ಳಲು ತಿಳಿಸಿದೆ.
> ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ ಸಣ್ಣಪುಟ್ಟ ತಿದ್ದುಪಡಿಗಳಿದ್ದಲ್ಲಿ ಫಲಿತಾಂಶ ನೀಡಿದ 15 ದಿನಗಳೊಳಗಾಗಿ ಪ್ರಸ್ತಾವನೆಯನ್ನು ಪೂರಕ ದೃಢೀಕೃತ ದಾಖಲೆಗಳೊಂದಿಗೆ (ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ದೃಢೀಕೃತ ಅಂಕಪಟ್ಟಿ) ಸಲ್ಲಿಸತಕ್ಕದ್ದು.
> ಫಲಿತಾಂಶ ನೀಡಿದ 15 ದಿನಗಳ ನಂತರ ಹಾಗೂ ಸಂಸ್ಥೆಗೆ ಮೂಲ ಅಂಕಪಟ್ಟಿಗಳು ತಲುಪುವವರೆಗೆ ತಿದ್ದುಪಡಿಗೆ ಸಲ್ಲಿಸಿದಲ್ಲಿ ರೂ.200/- ದಂಡ ಶುಲ್ಕವನ್ನು ಮಂಡಲಿಗೆ ಪಾವತಿಸಲಾಗಿರುವ NEFT Challan ಮೂಲ ಪ್ರತಿಯೊಂದಿಗೆ ಸಲ್ಲಿಸತಕ್ಕದ್ದು.
ಆಗಸ್ಟ್-2024 ರ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾ ಪ್ರತಿಗಾಗಿ ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್ ಮೂಲಕ ನಿಗದಿತ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಈ ಕೆಳಗಿನಂತಿದೆ.
No comments:
Post a Comment
If You Have any Doubts, let me Comment Here