ಸಾಮಾಜಿಕ ನಾಟಕಗಳ ಪಿತಾಮಹರೆಂಬ ಅಗ್ಗಳಿಕೆಗೆ ಪಾತ್ರರಾಗಿದ್ದ- ಬೆಂಗಳೂರಿನಲ್ಲಿ ಜನಿಸಿದ ತ್ಯಾಗರಾಜ ಪರಮಶಿವ ಕೈಲಾಸಂ-ಟಿ.ಪಿ. ಕೈಲಾಸಂ ರವರ ವಿದ್ಯಾಭ್ಯಾಸ ಬೆಂಗಳೂರು, ಹಾಸನ, ಮೈಸೂರು ಮತ್ತು ಮದರಾಸಿನಲ್ಲಿ ನಡೆಯಿತು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರು ಅಧ್ಯಯನಕ್ಕಾಗಿ ಐಚ್ಛಿಕವಾಗಿ ಆರಿಸಿಕೊಂಡಿದ್ದು ಭೂಗರ್ಭಶಾಸ್ತ್ರವನ್ನು, ಆ ವಿಷಯದಲ್ಲಿ ಅವರು ಬಿ.ಎ. ಪದವಿಯನ್ನು ಪಡೆದರು. ಉಚ್ಚ ಶಿಕ್ಷಣಕ್ಕಾಗಿ ಲಂಡನ್‌ಗೆ 1909ರಲ್ಲಿ ತೆರಳಿದರು. ಲಂಡನ್‌ನಲ್ಲಿ ಅವರು ವಾಸವಿದ್ದುದು ಆರು ವರ್ಷಗಳ ಕಾಲ.
ಅಲ್ಲಿಯ ರಾಯಲ್ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಭೂಗರ್ಭ ಶಾಸ್ತ್ರವನ್ನು ವ್ಯಾಸಂಗ ಮಾಡಿದರು. ಏಳು ಫಸ್ಟ್ ಕ್ಲಾಸ್‌ಗಳನ್ನು ಪಡೆದ ಹೆಗ್ಗಳಿಕೆ ಅವರದು. ಅವರು ಲಂಡನ್‌ನಲ್ಲಿದ್ದಾಗ ಅಧ್ಯಯನದ ಜೊತೆ ಜೊತೆಗೇ ಅಲ್ಲಿಯ ಜನ ಜೀವನ. ಹಾಡುಕುಣಿತಗಳನ್ನು ಕಲಿತರು. ಲಂಡನ್ನಿನ ನಾಟಕರಂಗಕ್ಕೆ ಆಕರ್ಷಿತನಾಗಿದ್ದ ಅವರು ಅವರ ವಾಸ್ತವ್ಯದ ಅವಧಿಯಲ್ಲಿ ಅಲ್ಲಿ ಪ್ರದರ್ಶಿತವಾದ ಸರಿ ಸುಮಾರು ಎಲ್ಲ ನಾಟಕಗಳನ್ನು ವೀಕ್ಷಿಸಿದರು.
ಲಂಡನ್‌ನಿಂದ ಹಿಂತಿರುಗಿದ ನಂತರ ಸರ್ಕಾರದ ಉದ್ಯೋಗಕ್ಕೆ ಅವರು ಸೇರಿದರು. ಬಹು ಕಾಲ ಅದಕ್ಕೆ ಅಂಟಿಕೊಳ್ಳದೆ ನಾಟಕದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದರು. ನಾಟಕ ರಂಗಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ನಾಟಕ ರಂಗಕ್ಕೆ ಆಧುನಿಕ ರೂಪವನ್ನು ನೀಡುವುದರಲ್ಲಿ ನಾಟಕ ರಂಗದ ಬೆಳವಣಿಗೆಗೆ ಕಾರಣವಾದರು.
1918ರಿಂದ ನಾಟಕ. ರಚನೆಗೆ ತೊಡಗಿದ ಇವರು ರಚಿಸಿದ ಪ್ರಥಮ ನಾಟಕ 'ಟೊಳ್ಳುಗಟ್ಟಿ', ಅಲ್ಲಿಂದ ಆರಂಭವಾದ ಇವರ ನಾಟಕ ರಚನೆ ಅವ್ಯಾಹತವಾಗಿ ನಡೆದು ಹಲವಾರು ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಕೆಲವನ್ನು ಹೆಸರಿಸಬಹುದಾದರೆ ತಾಳ ಕಟ್ಟೋಕೂಲಿನೇ ಸಾತೂತೌರ್ಮನೆ ಪೋಲಿ ಕಿಟ್ಟಿ ಹೋಂರೂಲು, ಅಮಾವಗಂಡ, ಬಂಟ್ವಾಳವಿಲ್ಲದ ಬಡಾಯಿ, ಮುಂತಾದವು. ಇಂಗ್ಲೀಷಿನಲ್ಲಿ ಕರ್ಣ, ಕೀಚಕ ನಾಟಕಗಳನ್ನು ರಚಿಸಿದ್ದಾರೆ.
ಅವರ ಕಾವ್ಯನಾಮ ಗುಂಡೂ.
1945ರ ಡಿಸೆಂಬರ್‌ನಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.
No comments:
Post a Comment
If You Have any Doubts, let me Comment Here