Regarding the completion of Adarsha Vidyalaya Class 6 Enrollment Through Counseling by Head Teachers.
ವಿಷಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ಆದರ್ಶ ವಿದ್ಯಾಲಯಗಳಿಗೆ ಈಗಾಗಲೇ ನಾಲ್ಕು ಹಂತದಲ್ಲಿ 6ನೇ ತರಗತಿ ದಾಖಲಾತಿಯನ್ನು ಮಾಡಿಕೊಳ್ಳಲಾಗಿದೆ. ದಿನಾಂಕ 29/08/2024 ರಂದು ವಿದ್ಯಾವಾಹಿನಿಯಲ್ಲಿದ್ದಂತೆ ಶಾಲಾವಾರು ಖಾಲಿ ಇರುವ ಸೀಟುಗಳ ವಿವರ ಅನುಬಂಧ-1ರಲ್ಲಿ ನೀಡಿದೆ.
ಕೆಳಕಂಡ ಸೂಚನೆಗಳನ್ನು ಅನುಸರಿಸಿ ಆದರ್ಶ ವಿದ್ಯಾಲಯಗಳ 6ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಸೂಚಿಸಿದೆ.
ಮೊದಲನೆಯ ಹಂತದಿಂದ ನಾಲ್ಕು ಹಂತದವರೆಗೂ ಆಯ್ಕೆಯಾದ ಮಕ್ಕಳನ್ನು ಹೊರತುಪಡಿಸಿ ಕರ್ನಾಟಕ ಮೀಸಲಾತಿ ಅನ್ವಯ ಅಂಕಗಳ ಜೇಷ್ಠತೆ/ಹುಟ್ಟಿದ ದಿನಾಂಕದ ಆಧಾರದ ಮೇರೆಗೆ ಆಯಾ ಶಾಲೆಗಳ ವಿದ್ಯಾವಾಹಿನಿಯ ತಂತ್ರಾಂಶದಲ್ಲಿ ಎಲ್ಲಾ ಮಕ್ಕಳ ಪಟ್ಟಿಯನ್ನು ಅಳವಡಿಸಲಾಗುವುದು.
* ಸದರಿ ಮಕ್ಕಳು ನೀಡಿರುವ ದೂರವಾಣಿಗೆ ದಾಖಲಾತಿ ಬಗ್ಗೆ ಸಂದೇಶವನ್ನು (SMS) ಸಹ ಕಳಿಸಲಾಗುವುದು. ಈ ಸೇವೆಯನ್ನು ಮಕ್ಕಳ ಹಿತದೃಷ್ಠಿಯಿಂದ ಕಳುಹಿಸಲಾಗುತ್ತಿದ್ದರೂ ಸಹ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವ ಜವಾಬ್ದಾರಿಯು ಪೋಷಕರು/ಮಕ್ಕಳದ್ದಾಗಿರುತ್ತದೆ. ತಾಂತ್ರಿಕ ದೋಷದಿಂದ SMS ರವಾನೆಯಾಗದಿದ್ದಲ್ಲಿ ಇಲಾಖೆಯು ಇದಕ್ಕೆ ಜವಾಬ್ದಾರಿಯಾಗಿರುವುದಿಲ್ಲ.
* ವಿದ್ಯಾವಾಹಿನಿಯಲ್ಲಿದ್ದಂತೆ 1:20 ಅನುಪಾತದಲ್ಲಿ ಅರ್ಹ ಮಕ್ಕಳ ಪಟ್ಟಿಯನ್ನು ದಿನಾಂಕ 29.08.2024 ರಂದು ವಿದ್ಯಾವಾಹಿನಿಯಿಂದ ಡೌನ್ಹೋಡ್ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಹಿಯನ್ನು ಪಡೆದು 30.08.2024 ರಂದು ಎಲ್ಲರಿಗೂ ಕಾಣುವಂತಹ ರೀತಿಯಲ್ಲಿ ಶಾಲೆಯ ನೋಟೀಸ್ ಬೋರ್ಡ್/ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳ ಸಮುಚ್ಚಯದಲ್ಲಿ ಪ್ರಕಟಿಸುವುದು.
← ಮಕ್ಕಳಿಗೆ ಸಾಧ್ಯವಾದ ಎಲ್ಲಾ ಮಾರ್ಗೋಪಾಯಗಳಿಂದ ಆದರ್ಶ ವಿದ್ಯಾಲಯದ ಮುಖ್ಯೋಪಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವಿವಿಧ ಸ್ಥರದ ಅಧಿಕಾರಿಗಳು ಮತ್ತು ಸಿಬ್ಬಂಧಿ ಸಾಧ್ಯವಾಗುವ ಎಲ್ಲಾ ಕ್ರಮಗಳಿಂದ ಮಾಹಿತಿ ನೀಡುವ ಕಾರ್ಯದ ನೇತೃತ್ವವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಖುದ್ದಾಗಿ ಮೇಲ್ವಿಚಾರಣೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here