JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, August 17, 2024

Rashtrakavi M Govind Pai Information

  Jnyanabhandar       Saturday, August 17, 2024
Rashtrakavi M Govind Pai

"ನಾನು ಎರಡು ತಾಯಂದಿರ ಕೂಸು, ಕೊಂಕಣಿ ನನ್ನ ಹೆತ್ತ ತಾಯಿ ಕನ್ನಡ ಸಾಕು ತಾಯಿ' ಎಂದು ಹೇಳುತ್ತಿದ್ದ ಗೋವಿಂದ ಪೈರವರ ವಿದ್ಯಾಭ್ಯಾಸ ಮಂಗಳೂರಿನಲ್ಲಿ ನಡೆಯಿತು. ತಂದೆಯವರ ಅಕಾಲಿಕ ನಿಧನದಿಂದ ವಿದ್ಯಾಭ್ಯಾಸ ವನ್ನು ಮುಂದುವರಿಸಲಾಗದೆ ಅರ್ಧಕ್ಕೆ ನಿಲ್ಲಿಸಿದ ಅವರು ಮನೆಯಲ್ಲಿಯೇ ಅಭ್ಯಾಸ ಮುಂದುವರಿಸಿದರು. ಕನ್ನಡವೇ ಅಲ್ಲದೆ ಕೊಂಕಣಿ. ಇಂಗ್ಲೀಷ್, ಗ್ರೀಕ್, ಫ್ರೆಂಚ್, ಜರ್ಮನ್, ಸಂಸ್ಕೃತ ಪ್ರಾಕೃತ-ಮುಂತಾದ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದರು.

ಅವರ ಮೊದಲ ಕವನ ಸುವಾಸಿನಿ ಪತ್ರಿಕೆಯಲ್ಲಿ 1900ರಲ್ಲಿ ಪ್ರಕಟ ವಾಯಿತು. ಅವರ ಮೊತ್ತಮೊದಲ ಕವನ ಸಂಕಲನ ಗಿಳಿವಿಂಡು, ಇದರಲ್ಲಿ 46 ಪದ್ಯಗಳಿವೆ. ಎರಡನೆ ಕವನ ಸಂಕಲನ ನಂದಾದೀಪ ಅದರಲ್ಲಿ 37 ಪದ್ಯಗಳಿವೆ. ಯೇಸುವಿನ ಕೊನೆಯ ದಿನವನ್ನು ಚಿತ್ರಿಸುವ ನೀಳವನ ಗೋಲ್ಗೊಥಾ (1937) ಬುದ್ಧನ ಕುರಿತ ವೈಶಾಖಿ, ಏಕಲವ್ಯನ ಕಥಾವಸ್ತು ಹೊಂದಿರುವ ಹೆಬ್ಬೆರಳು ಇವರು ಬರೆದಿರುವ ಇತರ ಕೃತಿಗಳು. "ಕನ್ನಡದ ಮೊರೆ" ಇವರು ಬರೆದಿರುವ ಆತ್ಮಕಥನ.

ಇತಿಹಾಸ ಹಳಗನ್ನಡ ಕವಿಕಾವ್ಯ ಮತ್ತು ಹೊಸಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ನೃಪತುಂಗನ ಮತ ವಿಚಾರ, ಕರ್ನಾಟಕಕ್ಕೆ ಜೈನ ಧರ್ಮದ ಆಗಮನ, ಕರ್ನಾಟಕದ ಪ್ರಾಚೀನ ರಾಜಮನೆತನ ಮುಂತಾದ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಜೈನ, ಬೌದ್ಧ, ವೀರಶೈವ ಮತಗಳ ಐತಿಹಾಸಿಕ ಸ್ಥಳ ಮತ್ತು ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ.

ಪಂಪ, ರನ್ನ, ನಾಗಚಂದ್ರ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಮುದ್ದಣ, ಕವಿ ವಿಚಾರ ಕಾಲದೇಶಗಳ ಬಗ್ಗೆ ಸಂಶೋಧನೆ ನಡೆಸಿ ತಮ್ಮ ಸಿದ್ಧಾಂತವನ್ನು ಸಂಶೋಧನಾ ಲೇಖನಗಳಲ್ಲಿ ಮಂಡಿಸಿದ್ದಾರೆ.

ಮದರಾಸು ಸರ್ಕಾರ ಇವರಿಗೆ 'ರಾಷ್ಟ್ರಕವಿ' ಪ್ರಶಸ್ತಿ ನೀಡಿ ಇವರ ವಿದ್ವತ್ತನ್ನು ಗೌರವಿಸಿದೆ.

ಗಿಳಿವಿಂಡು ಕವನ ಸಂಕಲನದಲ್ಲಿ ಪ್ರಕಟವಾಗಿರುವ "ತಾಯೆಬಾರ. ಮೊಗವತೋರ, ಕನ್ನಡಿಗರ ಮಾತೆಯೆ", 'ಕುಲವಧು' ಕನ್ನಡ ಚಿತ್ರದಲ್ಲಿ ಚಿತ್ರಗೀತೆಯಾಗಿ ಬಹು ಜನಪ್ರಿಯವಾಯಿತು. ಈ ಕವಿತೆ ಹಲವು ವರ್ಷಗಳ ಕಾಲ ಅನೇಕ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಹಾಡಲ್ಪಡುತ್ತಿತ್ತು.

1951ರ ಡಿಸೆಂಬರ್‌ನಲ್ಲಿ ಮುಂಬಯಿಯಲ್ಲಿ ನಡೆದ 34ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನಲಂಕರಿಸಿದ್ದರು.



logoblog

Thanks for reading Rashtrakavi M Govind Pai Information

Previous
« Prev Post

No comments:

Post a Comment

If You Have any Doubts, let me Comment Here