Download the Call letter
for Document Verification forthe post of Pharmacy Officer underRPC region
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯು ಹೊರಡಿಸಿದ ಅಧಿಸೂಚನೆಯ ಸಂಖ್ಯೆ:ಎಸ್‌ಆರ್‌ಸಿ/ಆರ್‌ಪಿಸಿ/15/2022-23 ದಿನಾಂಕ:02.09.2022ರ ಅನುಗುಣವಾಗಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಫಾರ್ಮಸಿ ಅಧಿಕಾರಿ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು ಅಭ್ಯರ್ಥಿಗಳು ಆನ್-ಲೈನ್ ಅರ್ಜಿಯಲ್ಲಿ ನಮೂದಿಸಿದ ವಿವರಗಳ ಅನುಸಾರ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಎರಡು ಸೆಟ್ ಸ್ವಯಂ ದೃಢಿಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಪರಿಶೀಲನೆಗಾಗಿ "ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಸೆಮಿನಾರ್ ಹಾಲ್-2, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ, ಬೆಂಗಳೂರು-560023" ಇಲ್ಲಿ ಹಾಜರಾಗಲು ಸೂಚಿಸಲಾಗಿದೆ. ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರಯಾಣ/ದಿನ ಭತ್ಯೆ ಮತ್ತು ಇತರೇ ಭತ್ಯೆಗಳನ್ನು ನೀಡಲಾಗುವುದಿಲ್ಲ, ವೃಂದವಾರು ವೇಳಾಪಟ್ಟಿಯು ಈ ಕೆಳಕಂಡಂತಿರುತ್ತದೆ. ಇಲಾಖೆಯ ವೆಬ್ ಸೈಟ್‌ನಲ್ಲಿ ತಿಳುವಳಿಕೆ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ನಿಗಧಿಗೊಳಿಸಿದ ದಿನಾಂಕದಂದು ಬೆಳಗ್ಗೆ 10.00 ಗಂಟೆಗೆ ತಪ್ಪದೆ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಅಭ್ಯರ್ಥಿಯು ಹಾಜರಾಗಲು ಸೂಚಿಸಿದೆ.
ಅಭ್ಯರ್ಥಿಗಳು ಆನ್-ಲೈನ್ ಅರ್ಜಿಯಲ್ಲಿ ಕೈಮು ಮಾಡಿರುವ ಮಾಹಿತಿಯ ಅನುಗುಣವಾಗಿ ಪರಿಶೀಲನೆಗೆ ಹಾಜರುಪಡಿಸಬೇಕಾದ ಮೂಲದಾಖಲೆಗಳ ವಿವರಗಳು
1. ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಮುದ್ರಿತ ಪ್ರತಿ.
2. ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿರುವ ಪೋಸ್ಟಲ್ ಚಲನ್ ಪ್ರತಿ
3. ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಎರಡು ಬಣ್ಣದ ಭಾವಚಿತ್ರ (Colour Photo).
4. ಸರ್ಕಾರದಿಂದನೀಡಲಾಗಿರುವ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (Voter ID / Driving Lisence / Aadhar Card/Passport/Pancard/ Rationcard etc.) ಅಥವಾ ಎಸ್.ಎಸ್.ಎಲ್.ಸಿ. ತತ್ವಮಾನ ಪರೀಕ್ಷೆಯ
5.
ದಿನಾಂಕವನ್ನು ತೋರಿಸುವ
ಪ್ರಮಾಣಪತ್ರ/ಶಾಲಾವರ್ಗಾವಣೆ ಪ್ರಮಾಣಪತ್ರ/ಜನ್ಮದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉತಭಾಗ
(Extract of Cumulative Record). 6. ಅಧಿಸೂಚನೆಯಲ್ಲಿ ಸಂಬಂಧಪಟ್ಟ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು/ಪ್ರಮಾಣಪತ್ರಗಳು. ಮೂಲ
7. ಜಾತಿ ಪ್ರಮಾಣ ಪತ್ರಗಳು: ಸಂಬಂಧಪಟ್ಟ ತಹಸೀಲ್ದಾರರಿಂದ ನಿಗಧಿತ ನಮೂನೆಯಲ್ಲಿ ಪಡೆದಿರುವ ಜಾತಿ / ವರ್ಗದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು (ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿರುವ ಜಾತಿ / ವರ್ಗದ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದಿಲ್ಲ.
8. ಗ್ರಾಮೀಣ ಮೀಸಲಾತಿ:- 01.ರಿಂದ 10 ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಅಧಿಸೂಚನೆಯಲ್ಲಿನ ನಮೂನೆಯಲ್ಲಿಯೇ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿರತಕ್ಕದ್ದು. ಸಾಮಾನ್ಯ ವರ್ಗದಡಿ ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂಬ ಬಗ್ಗೆ (Creamy Layer) ಸಂಬಂಧಿಸಿದ ಪ್ರಮಾಣ ಪತ್ರವನ್ನು ಆನ್ ಲೈನ್ ಅರ್ಜಿಯಲ್ಲಿ ನಮೂದಿಸಿರುವ ದಿನಾಂಕದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
9. ಕನ್ನಡ ಮಾದ್ಯಮ ಮೀಸಲಾತಿ:- 01 ರಿಂದ 10 ನೇತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವವರು ಪ್ರಮಾಣ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಂದ ಅಧಿಸೂಚನೆಯಲ್ಲಿನ ನಮೂನೆಯಂತೆ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ದಿನಾಂಕದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
10. ವಿಕಲಚೇತನ ಅಭ್ಯರ್ಥಿ ಮೀಸಲಾತಿ:- ವಿಕಲ ಚೇತನ ಕೋಟಾದಡಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ವೈದ್ಯಕೀಯ ಮಂಡಳಿಯವರು ನೀಡಿರುವ ನಿಗಧಿತ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
11. ಯೋಜನಾ ನಿರಾಶ್ರಿತ ಮೀಸಲಾತಿ:- ಸರ್ಕಾರದ ಆದೇಶ ದಿನಾಂಕ 23.11.2000ರ ನಮೂನೆಯಲ್ಲಿ ಸಂಬಂಧಪಟ್ಟ ತಹಶೀಲ್ದಾರರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು. 12. ಮಾಜಿ ಸೈನಿಕರ ಮೀಸಲಾತಿ:- ಅರ್ಜಿಯಲ್ಲಿ ಮಾಜಿ ಸೈನಿಕರ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳು
ಸೇವೆಯಿಂದ ಬಿಡುಗಡೆಯಾದ ನಂತರ ನೀಡಿದ ಬಿಡುಗಡೆ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
13. ಅನುಚ್ಛೇಧ 371(ಜೆ) ರಂತೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ ಸ್ಥಳೀಯ ಅಭ್ಯರ್ಥಿಗಳ ಮೀಸಲಾತಿ
ಪ್ರಮಾಣ ಪತ್ರಗಳು:- ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು
ಸರ್ಕಾರದ ದಿನಾಂಕ:29.01.2014ರ ಅಧಿಸೂಚನೆಯ ಅನ್ವಯ ಸಕ್ಷಮ ಪ್ರಾಧಿಕಾರದಿಂದ ಪಡೆದ ಸೂಕ್ತ ಪ್ರಮಾಣ
ಪತ್ರವನ್ನು ಹಾಜರುಪಡಿಸತಕ್ಕದ್ದು.
14. ತೃತೀಯ ಲಿಂಗ ಅಭ್ಯರ್ಥಿಗಳು ಕೇಂದ್ರ ಅಧಿನಿಯಮ ತೃತೀಯ ಲಿಂಗ ವ್ಯಕ್ತಿಗಳ (ರಕ್ಷಣಾ ಹಕ್ಕುಗಳು) 2019ರಲ್ಲಿ ನಿಗಧಿಪಡಿಸಿರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಪಡೆದಿರುವ ಪ್ರಮಾಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here