II Additional Select List for the post of SDA-2017 in various departments is Published
ಆಯೋಗ ಅಧಿಸೂಚಿಸಲಾದ ರಾಜ್ಯದ ವಿವಿಧ ಇಲಾಖೆ ಮತ್ತು ನ್ಯಾಯಾಂಗ ಘಟಕಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.
ಆಯೋಗದ ಅಧಿಸೂಚನೆ ದಿನಾಂಕ:01/09/2017 ಮತ್ತು ದಿನಾಂಕ:24-11-2017 ರಲ್ಲಿ ಅಧಿಸೂಚಿಸಲಾದ ರಾಜ್ಯದ ವಿವಿಧ ಇಲಾಖೆ ಮತ್ತು ನ್ಯಾಯಾಂಗ ಘಟಕಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರ ಒಟ್ಟು 851 (766+85 ಹೈ.ಕ) ಹುದ್ದೆಗಳಿಗೆ ದಿನಾಂಕ:02/06/2020 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕಾಲಕಾಲಕ್ಕೆ ತಿದ್ದುಪಡಿಯಾದ, ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು- 1978 ರನ್ವಯ ಉಳಿಕೆ ಮೂಲ ವೃಂದದ ಹಾಗೂ ಹೈದರಾಬಾದ್-ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿಗೆ ಶೇ.10ರಷ್ಟು ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಿ, ಉಳಿಕೆ ಮೂಲ ವೃಂದದ - 19 ನೇಮಕಾತಿ ಪ್ರಾಧಿಕಾರಗಳಿಗೆ 83 ಹುದ್ದೆಗಳು ಹಾಗೂ ಹೈ.ಕ ವೃಂದದ - 06 ನೇಮಕಾತಿ ಪ್ರಾಧಿಕಾರಗಳಿಗೆ 15 ಹುದ್ದೆಗಳ ಒಟ್ಟು 98 ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಉಲ್ಲೇಖ(3)ರಂತೆ ದಿನಾಂಕ:25-05-2022ರಂದು ಪ್ರಕಟಿಸಲಾಗಿರುತ್ತದೆ.
ಮುಂದುವರೆದು, ಎರಡನೇ ಹಂತವಾಗಿ ನಿಯಮಾನುಸಾರ ಶೇ.10ರ ವರ್ಗೀಕರಣಕ್ಕೆ ಸೀಮಿತಗೊಳಿಸಿ. ಇಲಾಖೆಗಳಿಂದ ಸ್ವೀಕೃತವಾದ ಬೇಡಿಕೆ ಪತ್ರಗಳ ಕಾಲಾನುಕ್ರಮಣಿಕೆಯನುಸಾರ ಉಳಿಕೆ ಮೂಲ ವೃಂದದ 02 ಇಲಾಖೆಗಳಿಗೆ 04 ಹುದ್ದೆಗಳು ಹಾಗೂ ಹೈದರಾಬಾದ್-ಕರ್ನಾಟಕ ವೃಂದದ 01 ಇಲಾಖೆಗೆ 01 ಹುದ್ದೆ ಸೇರಿ ಒಟ್ಟು 05 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿರುತ್ತದೆ.
No comments:
Post a Comment
If You Have any Doubts, let me Comment Here