India Post GDS Result 2024
ಭಾರತೀಯ ಅಂಚೆ(India Post Office) ಇಂದು 12 ವಲಯಗಳಿಗೆ ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿ ಪಟ್ಟಿ ಪ್ರಕಟಿಸಿದೆ(Post recruitment 2024). ಇಂದು ಕರ್ನಾಟಕ ಸೇರಿದಂತೆ ಒಟ್ಟು 12 ವಲಯಗಳಿಗೆ ಮೊದಲ ಮೆರಿಟ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://indiapostgdsonline.gov.in ನಲ್ಲಿ ಇಂಡಿಯಾ ಪೋಸ್ಟ್ ಆಫೀಸ್ GDS ಮೆರಿಟ್ ಪಟ್ಟಿ 2024 ಅನ್ನು ಪರಿಶೀಲಿಸಬಹುದು.
ಕರ್ನಾಟಕ, ಆಂಧ್ರ ಪ್ರದೇಶ, ಪಂಜಾಬ್, ಅಸ್ಸಾಂ, ದೆಹಲಿ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಈ ಮೆರಿಟ್ ಪಟ್ಟಿ ಪ್ರಕಟವಾಗಿದ್ದು, ಇತರ ವಲಯಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
GDS ಮೆರಿಟ್ ಪಟ್ಟಿಯು ಅನುಮೋದಿತ ಶಿಕ್ಷಣ ಸಂಸ್ಥೆಗಳಿಂದ 10 ನೇ ತರಗತಿ ಅಥವಾ ಮೆಟ್ರಿಕ್‌ನಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿದೆ. ಈ ವರ್ಷ, ಈ ನೇಮಕಾತಿ ಪ್ರಕ್ರಿಯೆಯು ದೇಶದ 23 ವಲಯಗಳಲ್ಲಿ 44228 ಗ್ರಾಮೀಣ ಡಾಕ್ ಸೇವಕ ಹುದ್ದೆಗಳನ್ನು ತುಂಬುವ ಗುರಿಯನ್ನು ಹೊಂದಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ?
ಹಂತ 1. https://indiapostgdsonline.gov.in ನಲ್ಲಿ ಅಧಿಕೃತ ಇಂಡಿಯಾ ಪೋಸ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2. ಮುಖಪುಟದಲ್ಲಿ 'ಜಿಡಿಎಸ್ ಆನ್‌ಲೈನ್ ಎಂಗೇಜ್‌ಮೆಂಟ್ ಶೆಡ್ಯೂಲ್, ಜುಲೈ-2024 : ಪ್ರಕಟಿಸಲಾದ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ-I' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3. ಪಾಸ್ವರ್ಡ್ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ.
ಹಂತ 4. ಸಲ್ಲಿಸು ಬಟನ್ ಒತ್ತಿರಿ.
ಹಂತ 5. ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 6. ಹೆಚ್ಚಿನ ಬಳಕೆಗಾಗಿ ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.
No comments:
Post a Comment
If You Have any Doubts, let me Comment Here