JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, August 5, 2024

General knowledge Questions and Answers

  Jnyanabhandar       Monday, August 5, 2024
General knowledge Questions and Answers 

🏝ನೀತಿ ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವವರು ಯಾರು ?
ಉತ್ತರ:- ಪ್ರಧಾನ ಮಂತ್ರಿ 
🏝“ನೀತಿ ಆಯೋಗವು” ಜಾರಿಗೆ ಬಂದದ್ದು
ಉತ್ತರ:- 1ನೇ ಜನವರಿ 2015
🏝ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?
ಉತ್ತರ:- ರಾಜ್ಯಪಾಲರು
🏝SEBI ಅನ್ನು ಯಾವಾಗ
ಸ್ಥಾಪಿಸಲಾಯಿತು?
ಉತ್ತರ:- ಏಪ್ರಿಲ್, 1988
🏝ಯಾವ ಪರಿಚ್ಛೇದದ ಅಡಿಯಲ್ಲಿ ಪಂಚಾಯತ್‌ಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಲಾಗಿದೆ?
ಉತ್ತರ:- ಅನುಚ್ಛೇದ 243
🏝ಭಾರತ ಸಂವಿಧಾನದ 5 ನೇ ವಿಧಿಯಿಂದ 11ನೇ ವಿಧಿಯು ಕೆಳಕಂಡ ಯಾವುದರ ಕುರಿತು ವಿವರಣೆಯನ್ನು ಒಳಗೊಂಡಿದೆ?
ಉತ್ತರ:- ಪೌರತ್ವ
🏝ಭಾರತದಲ್ಲಿ ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ಸಂಸ್ಥೆ ಯಾವುದು..?
ಉತ್ತರ:- ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ 
🏝ಈ ಕೆಳಗಿನವುಗಳಲ್ಲಿ ಯಾರನ್ನು 'ಆರ್ಥಿಕ ರಾಷ್ಟ್ರೀಯತೆಯ ಪ್ರವರ್ತಕ' ಎಂದು ಪರಿಗಣಿಸಲ್ಪಟ್ಟಿದೆ?
ಉತ್ತರ:- ಆರ್. ಸಿ. ದತ್ 
🏝'ಪ್ರಸಾರ ಭಾರತಿ'ಯನ್ನು ಸ್ಥಾಪಿಸಿದ್ದು ಯಾವಾಗ?
ಉತ್ತರ 1997

🌋ಭಾರತದ ಸಂವಿಧಾನದ 371G ವಿಧಿಯಲ್ಲಿನ ವಿಶೇಷ ನಿಬಂಧನೆಗಳು ಈ ರಾಜ್ಯಕ್ಕೆ ಸಂಬಂಧಿಸಿವೆ?
ಉತ್ತರ:- ಮಿಜೋರಾಂ
🌋ಭಾರತದಲ್ಲಿ ಯೋಜನಾ ಆಯೋಗ ಕೆಳಗಿನ ಯಾವುದರ ಮೂಲಕ ಸ್ಥಾಪಿಸಲಾಯಿತು?
ಉತ್ತರ:- ಕೇಂದ್ರ ಸರಕಾರದ ಒಂದು ಠರಾವು
🌋ನೀತಿ ಆಯೋಗವು ಒಂದು 
ಉತ್ತರ:- ಒಂದು ಸಲಹಾ ಸಂಸ್ಥೆ
🌋ಚುನಾವಣೆಯಲ್ಲಿ 'ಕೋಡ್ ಆಫ್ ಕಂಡಕ್ಟ್' ಅನ್ನು ನಿಶ್ಚಯ ಮಾಡುವವರು
ಉತ್ತರ:- ಎಲೆಕ್ಷನ್ ಕಮಿಷನ್ 
🌋 ಭಾರತೀಯ ಸಂವಿಧಾನದ ಯಾವ ವಿಧಿಯು ಹಣದ ಮಸೂದೆಯನ್ನು ವ್ಯಾಖ್ಯಾನಿಸುತ್ತದೆ?
ಉತ್ತರ:- ವಿಧಿ 110
🌋ಭಾರತ ಒಕ್ಕೂಟದಲ್ಲಿ ಹೊಸ ರಾಜ್ಯವೊಂದನ್ನು ರಚಿಸಬೇಕಾದರೆ ಕೆಳಗಿನ ಯಾವ ಅನುಸೂಚಿಗೆ ಸಂವಿಧಾನ ತಿದ್ದುಪಡಿ
ಮಾಡಲೇಬೇಕು?
ಉತ್ತರ:- 1ನೇ ಅನುಸೂಚಿ
🌋ಐಯೋಡಿನ್ ಕೊರತೆಯಿಂದ ಬರುವ ರೋಗ
ಉತ್ತರ:- ಸರಳ ಗಾಯಿಟರ್
🌋ಸಿಹಿ ರುಚಿಯನ್ನು ಗ್ರಹಿಸಬಲ್ಲ ರಸಾಂಕುರಗಳು ಇರುವ ಭಾಗ __
ಉತ್ತರ:- ನಾಲಿಗೆಯ ಮುಂಭಾಗ
🌋ಯಾವ ಹಾರ್ಮೋನನ್ನು ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಕರೆಯುತ್ತಾರೆ?
ಉತ್ತರ:- ಅಡ್ರಿನಲಿನ್

🏝"ವ್ಯಕ್ತಿತ್ವ ಹಾರ್ಮೋನು" ಎಂದು ಯಾವುದನ್ನು ಕರೆಯುತ್ತಾರೆ
ಉತ್ತರ:- ಥೈರಾಕ್ಸಿನ್
🏝ಇನ್ಸುಲಿನ್ ಕೊರತೆಯಿಂದ ಉಂಟಾಗುವ ತೊಂದರೆ 
ಉತ್ತರ:-ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆ
🏝ಹೆಪಟೈಟಿಸ್ ಬಿ ಎಂಬುದು__
ಉತ್ತರ:- ವೈರಸ್ಸುಗಳಿಂದ ಬರುವ ರೋಗ
🏝ಆಮ್ಲ ಮಳೆಗೆ ಕಾರಣವಾಗುವ ಅನಿಲ__
ಉತ್ತರ:-ಗಂಧಕದ ಡೈ ಆಕ್ಸೈಡ್
🏝ನಾವು ಉಸಿರಾಡುವ ಗಾಳಿಯಲ್ಲಿ ಕಾರ್ಬನ್ ಮನಾಕ್ಸೈಡ್ ಪ್ರಮಾಣ ಹೆಚ್ಚಿದಾಗ___
ಉತ್ತರ:- ಆಕ್ಸಿಜನ್ ಸಾಗಾಣಿಕೆ ತೊಂದರೆ ಆಗುವುದು
🏝ಡಿಡಿಟಿ ಎಂಬುದು__
ಉತ್ತರ:- ಜೈವಿಕ ವಿಘಟನೆಗೊಳ್ಳದ ಮಾಲಿನ್ಯಕಾರಿ
🏝ಪಾದರಸದಿಂದ ಮಲೀನಗೊಂಡಿರುವ ನೀರಿನಲ್ಲಿ ಬದುಕಿರುವ ಮೀನುಗಳನ್ನು ತಿನ್ನುವುದರಿಂದ ಬರುವ ರೋಗ 
ಉತ್ತರ:- ಮೀನಮಾಟ
🏝ಡಿಎನ್ಎ ಬೆರಳಚ್ಚು ತಂತ್ರಜ್ಞಾನವು ಯಾವ ಕ್ಷೇತ್ರದಲ್ಲಿ ಅತ್ಯಂತ ಉಪಯುಕ್ತ ಎನಿಸಿದೆ? 
ಉತ್ತರ:- ಅಪರಾಧ ಪತ್ತೆ ವಿಜ್ಞಾನ 
🏝ಹೆಚ್ಚು ಆಮ್ಲವಿರುವ ಜೀವ ಸತ್ವ ಯಾವುದು? 
ಉತ್ತರ:- 'ಸಿ' ಜೀವಸತ್ವ

🏝ಔರಂಗಜೇಬನ ಮೊಗಲ್ ಸಾಮ್ರಾಜ್ಯಕ್ಕೆ ಸೇರಿಕೊಂಡ ಕೊನೆಯ ದಖ್ಖನಿನ ರಾಜ್ಯ ಯಾವುದು? 
ಉತ್ತರ:- ಗೋಲ್ಕಂಡ
🏝ದಖ್ಖನ್ ನೋಬಲ್ ರ ಒಳಸಂಚಿಗೆ ಮರುಳಾಗಿ ಮಹಮದ್ ಗವಾನನನ್ನು ಕೊಲ್ಲಿಸಿದ ಸುಲ್ತಾನನಾರು?
ಉತ್ತರ:- ಮೂರನೇ ಮಹಮದ್ ಷಾ
🏝'ಅಕ್ಬರ್ ನಾಮ'ದ ಕತೃ ಅಬುಲ್ ಫಜಲ್ ____ ನಿಂದ ಕೊಲ್ಲಲ್ಪಟ್ಟನು
ಉತ್ತರ:- ಬಿರ್ ಸಿಂಗ್ ದೇವ್ ಬುಂದೇಲ
🏝ದೆಹಲಿ ಸುಲ್ತಾನರ ಕಾಲದಲ್ಲಿ ಯಾವ ಮನೆತನ ಅತಿ ಕಡಿಮೆ ಕಾಲ ಆಳ್ವಿಕೆ ನಡೆಸಿತು? 
ಉತ್ತರ:- ಖಿಲ್ಜಿ ಮನೆತನ 
🏝ಯಾವ ದೆಹಲಿ ಸುಲ್ತಾನನು ಗುಲಾಮರನ್ನು ನೋಡಿಕೊಳ್ಳಲು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದನು?
ಉತ್ತರ:- ಬಲ್ಬನ್ 
🏝 ಭಾರತದಲ್ಲಿ ಗುಲಾಮಿ ಮನೆತನವನ್ನು ಕುತ್ಬುದ್ದೀನ್ ಐಬಕ್ ಸ್ಥಾಪಿಸಿದನು ಈತನ ರಾಜಧಾನಿ ಯಾವುದು? 
ಉತ್ತರ:- ಲಾಹೋರ್
🏝ಅಷ್ಟ ದಿಗ್ಗಜರಲ್ಲೊಬ್ಬನಾದ ಅಲ್ಲಸಾನಿ ಪೆದ್ದಣ್ಣನಿಗೆ ಇದ್ದ ಬಿರುದು ಯಾವುದು? 
ಉತ್ತರ:- ಆಂಧ್ರ ಕವಿ ಪಿತಾಮಹ
🏝ಕೃಷ್ಣದೇವರಾಯನ ರಾಜ ಗುರು ಯಾರು? 
ಉತ್ತರ:-ವ್ಯಾಸರಾಯರು
🏝 'ಅಟ್ಟವಣೆ' ಎಂಬುದು ಏನನ್ನು ಸೂಚಿಸುತ್ತದೆ?
ಉತ್ತರ:- ಭೂ ಕಂದಾಯ ಇಲಾಖೆ

🍀ಬಹಮನಿಯ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ವರ್ಗಾಯಿಸಿದ ಸುಲ್ತಾನ್ ಯಾರು?
ಉತ್ತರ:- ಅಹಮದ್ ಷಾ
🍀ಹುಮಾಯುನನು ಈ ಕೆಳಗಿನ ಆಕ್ರಮಣ ಕಾಲದಲ್ಲಿ ಮಾಡಿದ ತಪ್ಪಿನಿಂದ ಶೇರ್ ಶಾ ಸೂರಿಗೆ ತನ್ನ ಸಾಮ್ರಾಜ್ಯವನ್ನು ಒಪ್ಪಿಸಬೇಕಾಯಿತು? 
ಉತ್ತರ:- ಗುಜರಾತ್ ಮತ್ತು ಬಂಗಾಳ
🍀ಚೋಳರ ಗ್ರಾಮ ಪ್ರದೇಶದಲ್ಲಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಮಾಧ್ಯಮವಾಗಿ ಕೆಳಗಿನ ಯಾವುದನ್ನು ಉಪಯೋಗಿಸುತ್ತಿದ್ದರು? 
ಉತ್ತರ:- ಭತ್ತ
🍀ಔರಂಗಜೇಬನ ಮೊಗಲ್ ಸಾಮ್ರಾಜ್ಯಕ್ಕೆ ಸೇರಿಕೊಂಡ ಕೊನೆಯ ದಖ್ಖನಿನ ರಾಜ್ಯ ಯಾವುದು? 
ಉತ್ತರ:- ಗೋಲ್ಕಂಡ
🍀ದಖ್ಖನ್ ನೋಬಲ್ ರ ಒಳಸಂಚಿಗೆ ಮರುಳಾಗಿ ಮಹಮದ್ ಗವಾನನನ್ನು ಕೊಲ್ಲಿಸಿದ ಸುಲ್ತಾನನಾರು?
ಉತ್ತರ:- ಮೂರನೇ ಮಹಮದ್ ಷಾ
🍀 'ಅಕ್ಬರ್ ನಾಮ'ದ ಕತೃ ಅಬುಲ್ ಫಜಲ್ ___ ನಿಂದ ಕೊಲ್ಲಲ್ಪಟ್ಟನು
ಉತ್ತರ:- ಬಿರ್ ಸಿಂಗ್ ದೇವ್ ಬುಂದೇಲ
🍀ದೆಹಲಿ ಸುಲ್ತಾನರ ಕಾಲದಲ್ಲಿ ಯಾವ ಮನೆತನ ಅತಿ ಕಡಿಮೆ ಕಾಲ ಆಳ್ವಿಕೆ ನಡೆಸಿತು? 
ಉತ್ತರ- ಖಿಲ್ಜಿ ಮನೆತನ 
🍀ಯಾವ ದೆಹಲಿ ಸುಲ್ತಾನನು ಗುಲಾಮರನ್ನು ನೋಡಿಕೊಳ್ಳಲು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದನು?
- ಬಲ್ಬನ್ 
🍀 ಭಾರತದಲ್ಲಿ ಗುಲಾಮಿ ಮನೆತನವನ್ನು ಕುತ್ಬುದ್ದೀನ್ ಐಬಕ್ ಸ್ಥಾಪಿಸಿದನು ಈತನ ರಾಜಧಾನಿ ಯಾವುದು? 
ಉತ್ತರ:- ಲಾಹೋರ್
logoblog

Thanks for reading General knowledge Questions and Answers

Previous
« Prev Post

No comments:

Post a Comment

If You Have any Doubts, let me Comment Here