JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, August 29, 2024

General Knowledge Question and Answers 2024

  Jnyanabhandar       Thursday, August 29, 2024
General Knowledge Question and Answers 2024

🌳ಸಾಮಾನ್ಯ ಜ್ಞಾನ 

🐠ಕಿತ್ತಳೆಯ ನಾಡು___
ಉತ್ತರ:- ಕೊಡಗು 
🐠ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ___
ಉತ್ತರ:- ರಾಮನಗರ 
🐠ಇಳಕಲ್ ಸೀರೆಗಳಿಗೆ ಪ್ರಸಿದ್ಧಿಯಾಗಿರುವ, ಇಳಕಲ್ ಪಟ್ಟಣವು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇದೆ?
ಉತ್ತರ:- ಬಾಗಲಕೋಟೆ
🐠ಏಷ್ಯಾದ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್‌ ಇಲ್ಲಿದೆ
ಉತ್ತರ:- ಗಂಗಾವತಿ
🐠ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಾಫಿ ಬೆಳೆ -
ಉತ್ತರ:- ರೋಬಾಸ್ಟಾ 
🐠ದೇಶದಲ್ಲಿಯೇ ಅತ್ಯಂತ ಹೆಚ್ಚು ತೊಗರಿ ಬೇಳೆ ಬೆಳೆಯುವ ಕರ್ನಾಟಕದ ಜಿಲ್ಲೆ__
ಉತ್ತರ:- ಕಲ್ಬುರ್ಗಿ
🐠ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ
ಉತ್ತರ:- ಕರ್ನಾಟಕ 
🐠ಕರ್ನಾಟಕದ ಯಾವ ಸ್ಥಳವನ್ನು ಭಾರತ ದೇಶದ “ಕಾಫಿ ಬೆಳೆಯ ಜನ್ಮಸ್ಥಳ” ಎನ್ನುವರು?
ಉತ್ತರ:- ಚಿಕ್ಕಮಗಳೂರು
🐠ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಎಲ್ಲಿದೆ?
ಉತ್ತರ:- ಬೆಂಗಳೂರು

🏝ಭಾರತದ "ಉಕ್ಕಿನ ಮನುಷ್ಯ" ಎಂದು ಯಾರು ಕರೆಯುತ್ತಾರೆ?
ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್
🏝ಭಾರತದಲ್ಲಿ ಯಾವ ಹಬ್ಬವನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ?
ಉತ್ತರ: ಹೋಳಿ ಹಬ್ಬ
🏝ಯಾವ ರಾಜ್ಯವನ್ನು ಭಾರತದ "ಹಣ್ಣಿನ ಬಟ್ಟಲು" ಎಂದೂ ಕರೆಯುತ್ತಾರೆ?
ಉತ್ತರ: ಹಿಮಾಚಲ ಪ್ರದೇಶ
🏝ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ: ಗುಜರಾತ್
🏝ಸೋಂಕಿನ ವಿರುದ್ಧ ಹೋರಾಡುವ ರಕ್ತದ ಘಟಕವನ್ನು ಹೆಸರಿಸಿ?
ಉತ್ತರ: WBC (ಬಿಳಿ ರಕ್ತ ಕಣಗಳು)
🏝ಚೌರಿ ಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ?
ಉತ್ತರ: ಉತ್ತರ ಪ್ರದೇಶ
🏝ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ: ನೈರೋಬಿ, ಕೀನ್ಯಾ
🏝ಹೆಮಿಸ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
ಉತ್ತರ: ಜಮ್ಮು ಮತ್ತು ಕಾಶ್ಮೀರ
🏝ಭಗತ್ ಸಿಂಗ್‌ರನ್ನು ಯಾವಾಗ ಗಲ್ಲಿಗೇರಿಸಲಾಯಿತು?
ಉತ್ತರ: 23 ಮಾರ್ಚ್ 1931

🍁ಈ ಕೆಳಗಿನ ಯಾರು ಅರ್ಥಶಾಸ್ತ್ರಕ್ಕೆ ಯೋಗಕ್ಷೇಮದ ವ್ಯಾಖ್ಯಾನವನ್ನು ನೀಡಿದ್ದಾರೆ?
ಉತ್ತರ:- ಆಲ್ಫ್ರೆಡ್ ಮಾರ್ಷಲ್ 
🍁ಕೆಳಗಿನವುಗಳಲ್ಲಿ ಯಾವುದನ್ನು ಪೇಪರ್ ಗೋಲ್ಡ್ ಎಂದು ಕರೆಯಲಾಗುತ್ತದೆ?
ಉತ್ತರ:- ವಿಶೇಷ ಡ್ರಾಯಿಂಗ್ ಹಕ್ಕು 
🍁ಯಾವ ಸಮಾವೇಶವು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸ್ಥಾಪನೆಗೆ ಕಾರಣವಾಯಿತು?
ಉತ್ತರ:-- ಬ್ರಿಟನ್ ವುಡ್ಸ್ ಸಮ್ಮೇಳನ
🍁"The Poverty and Unbritish  Rule in India" ಇದನ್ನು ಯಾರು ಬರೆದಿದ್ದಾರೆ?
ಉತ್ತರ:- ದಾದಬಾಯಿ ನವರೋಜಿ
🍁ನ್ಯಾಷನಲ್ ಸ್ಯಾಂಪಲ್ ಸರ್ವೆಯನ್ನು ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:-1950
🍁ಮಾನವ ಅಭಿವೃದ್ಧಿ ಸೂಚಿಯನ್ನು ಮೊದಲ ಬಾರಿಗೆ ಯಾವಾಗ ಬಳಸಲಾಯಿತು?
ಉತ್ತರ:--1990
🍁ಕೆಳಗಿನವುಗಳಲ್ಲಿ ರಾಷ್ಟ್ರೀಯ ಆದಾಯವನ್ನು ಅಳೆಯುವ ವಿಧಾನ ಯಾವುದು?
ಉತ್ತರ:- ಖರ್ಚು ವಿಧಾನ, ಆದಾಯ ವಿಧಾನ,ಉತ್ಪನ್ನ ವಿಧಾನ
🍁ಸರ್ಕಾರದ ಒಡೆತನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುವ ಉದ್ಯಮಗಳನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯನ್ನು ____ ಎನ್ನುವರು
ಉತ್ತರ:-ಖಾಸಗೀಕರಣ
🍁ಕೆಳಗಿನ ಯಾವ ಸಂಸ್ಥೆ ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಲೆಕ್ಕ ಹಾಕುತ್ತವೆ?
ಉತ್ತರ:- ರಾಷ್ಟ್ರೀಯ ಅಂಕಿಅಂಶ ಕಚೇರಿ

🏕ಮೊಟ್ಟ ಮೊದಲು ತದ್ರೂಪ ಸೃಷ್ಟಿಯ ಮೂಲಕ ಜನ್ಮ ತಳೆದ ಕುರಿಯ ಹೆಸರು 
ಉತ್ತರ:- ಡಾಲಿ
🏕ಕಲ್ಮಶ ನೀರನ್ನು ಬಳಸುವುದರಿಂದ ಬರುವ ರೋಗ 
ಉತ್ತರ:-ಅಮೀಬಿಯಾಸ್
🏕ಹಾಲಿನ ಸಾಂದ್ರತೆಯನ್ನು ಪರೀಕ್ಷಿಸಲು ಉಪಯೋಗಿಸುವ ಉಪಕರಣ 
ಉತ್ತರ:- ಲ್ಯಾಕ್ಟೋಮೀಟರ್
🏕ವಾತಾವರಣದಲ್ಲಿ ಸಾಕಷ್ಟು ಸಾರಜನಕವಿದ್ದರೂ ಸಸ್ಯಗಳು ಬಳಸಿಕೊಳ್ಳಲಾರವು ಏಕೆಂದರೆ 
ಉತ್ತರ:-- ಸಾರಜನಕ ಅಣುರೂಪದಲ್ಲಿರುವುದರಿಂದ
🏕ರೈಜೋಬಿಯಮ್ ಎಂಬುದು ಸಾಮಾನ್ಯವಾಗಿ ಜೀವಿಸುವುದು
ಉತ್ತರ:- ಬ್ಯಾಕ್ಟೀರಿಯಾ
🏕 ಡಿನೈಟ್ರೀಕರಣಗೊಳಿಸುವ ಬ್ಯಾಕ್ಟೀರಿಯಾ 
ಉತ್ತರ:- ಸೂಡೋಮೊನಾಸ್
🏕ಹಣದುಬ್ಬರದ ಸಮಯದಲ್ಲಿ___
- ಹಣದುಬ್ಬರದ ಸಮಯದಲ್ಲಿ ಹಣದ ಉತ್ತರ:- ಮೌಲ್ಯವು ಕಡಿಮೆಯಾಗುತ್ತದೆ 
🏕 _ರವರನ್ನು ಜನಸಂಖ್ಯಾ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ?
ಉತ್ತರ:-- ಜಾನ್ ಗ್ರ್ಯಾಂಟ್
🏕HCM ಎಂಬ ಸಂಕ್ಷಿಪ್ತ ರೂಪದ ಅರ್ಥವೇನು?
ಉತ್ತರ:--  Human Capital Management

🏝ಇದು ಸಮಶೀತೋಷ್ಣ ವಲಯದಲ್ಲಿ ಕಂಡು ಬರುವ ಮಣ್ಣಾಗಿದ್ದು, ಹುಲ್ಲು ಸಂಪೂರ್ಣವಾಗಿ ಕೊಳೆಯದೆ ನಿರ್ಮಿತವಾಗಿರುವ ಕಪ್ಪುಮಣ್ಣಾಗಿದೆ
ಉತ್ತರ:- ಚೋರ್ನೊಝಮ್
🏝ಅತಿ ಹೆಚ್ಚು ಕೆಂಪು ಮಣ್ಣು ಹೊಂದಿರುವ ರಾಜ್ಯ 
ಉತ್ತರ:- ತಮಿಳುನಾಡು
🏝ಅತಿ ಹೆಚ್ಚು ಕೆಂಪು ಮಣ್ಣು ಹೊಂದಿರುವ ಕರ್ನಾಟಕದ ಜಿಲ್ಲೆ
ಉತ್ತರ:-  ತುಮಕೂರು
🏝ಭಾರತೀಯ ಮರುಭೂಮಿ ಸಂಶೋಧನಾ ಕೇಂದ್ರ ಇರುವುದು 
ಉತ್ತರ:- ರಾಜಸ್ಥಾನದ ಜೋಧ್ಪುರ
🏝ಮಣ್ಣಿನ PH ಮೌಲ್ಯ 7 ಕ್ಕಿಂತ ಕಡಿಮೆ ಇದ್ದರೆ ಅಂತಹ ಮಣ್ಣನ್ನು ---- ಎನ್ನುವರು.
ಉತ್ತರ:- ಆಮ್ಲೀಯ ಮಣ್ಣು
🏝ಮಣ್ಣಿನ PH ಮೌಲ್ಯ 7ಕ್ಕಿಂತ ಹೆಚ್ಚಾಗಿದ್ದರೆ ಆ ಮಣ್ಣನ್ನು ---- ಎನ್ನುವರು.
ಉತ್ತರ:-  ಕ್ಷಾರೀಯ ಮಣ್ಣು
🏝ಕೆಂಪು ಮಣ್ಣು ಕೆಂಪಾಗಿರಲು ಕಾರಣ
ಉತ್ತರ: -  ಕಬ್ಬಿಣದ ಆಕ್ಸೈಡ್‌ 
🏝---- ಮಣ್ಣಿನಲ್ಲಿ ವಾಸಿಸುವ ಜನರಿಗೆ ಸರಳ ಗಾಯಿಟರ್ ಅಥವಾ ಗಳಗಂಡ ರೋಗ ಬರುತ್ತದೆ.
ಉತ್ತರ:- ಲ್ಯಾಟರೈಟ್ ಮಣ್ಣು
🏝---- ಮಣ್ಣು ಮರಗೆಣಸು ಮತ್ತು ಗೋಡಂಬಿ ಬೆಳೆಗಳಿಗೆ ಅತಿ ಉಪಯುಕ್ತವಾಗಿರುವುದು
ಉತ್ತರ:- ಜಂಬಿಟ್ಟಿಗೆ ಮಣ್ಣು

🐠ಅಂತರಾಷ್ಟ್ರೀಯ ಹಣಕಾಸು ನಿಗಮ (International Finance Corporation-IFC) ಇದು ------ರಲ್ಲಿ ಸ್ಥಾಪನೆಯಾಯಿತು.
ಉತ್ತರ:- 1956 ಜುಲೈ 20
🐠ವಿಶ್ವ ವ್ಯಾಪಾರ ಸಂಘಟನೆ (World Trade Organisation - WTO) ಉರುಗ್ವೆ ಸುತ್ತಿನ ಮಾತುಕತೆಯ ತೀರ್ಮಾನದಂತೆ ---- ರಂದು ಅಸ್ತಿತ್ವಕ್ಕೆ ಬಂದಿದೆ.
ಉತ್ತರ:- 1995 ಜನವರಿ 1
🐠---- ಇದನ್ನು “ಅಂತರಾಷ್ಟ್ರೀಯ ವ್ಯಾಪಾರದ ಕಾವಲು ನಾಯಿ” ಎಂದು ಕರೆಯಲಾಗುತ್ತದೆ.
ಉತ್ತರ:- WTO
🐠ಏಷ್ಯಾ ಅಭಿವೃದ್ಧಿ ಬ್ಯಾಂಕ್ (Asian Development Bank - ADB) ADBಯು ------ರಲ್ಲಿ ಸ್ಥಾಪನೆಯಾಯಿತು. 
ಉತ್ತರ:- 1966 ಡಿಸೆಂಬರ್ 19
🐠ADBಯ ಕೇಂದ್ರ ಕಛೇರಿ ಇರುವುದು 
ಉತ್ತರ:- ಫಿಲಿಫೈನ್ಸ್‌ನ ಮನಿಲಾ
🐠ನೈಜ ಉತ್ಪನ್ನವೆಂದರೆ 
ಉತ್ತರ:- ಸರಾಸರಿ ವೆಚ್ಚ
🐠ಹಣದ ಕುಗ್ಗುವಿಕೆ ಅವಧಿಯಲ್ಲಿ ಹಣದ ಕೊಳ್ಳುವ ಚೈತನ್ಯ 
ಉತ್ತರ:- ಹೆಚ್ಚಾಗುತ್ತದೆ
🐠ನಿರುದ್ಯೋಗ ನಿವಾರಣೆಗೆ ಕೂಲಿ ಕಡಿತ ನೀತಿಯನ್ನು ಸಮರ್ಥಿಸಿದವರು ಯಾರೆಂದರೆ 
ಉತ್ತರ:- ಎ. ಸಿ ಪಿಗೋ
🐠ಬ್ಯಾಂಕ್ ದರ ಎಂದರೆ 
ಉತ್ತರ:- ಶೆಡ್ಯೂಲ್ಡ್ ಬ್ಯಾಂಕುಗಳು ವಿಧಿಸುವ ಬಡ್ಡಿದರ

🏖ಮಗದ ಸಾಮ್ರಾಜ್ಯ ಎಂದರೆ 
ಉತ್ತರ:- ಇಂದಿನ ಬಿಹಾರದ ಒಂದು ಭಾಗ
🏖ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ ಪ್ರಾಣಿಗಳು 
ಉತ್ತರ:- ಕುದುರೆ ಆನೆ ಎತ್ತು ಮತ್ತು ಸಿಂಹ
🏖ಅಶೋಕನ ಮೂರನೇ ಬೌದ್ಧ ಸಮ್ಮೇಳನವನ್ನು ಏರ್ಪಡಿಸಿದ್ದು 
ಉತ್ತರ:- ಪಾಟಲಿಪುತ್ರದಲ್ಲಿ
🏖ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು 
ಉತ್ತರ:- 18
🏖'ಮೌರ್ಯರ ಆಡಳಿತ ಮೊಗಲರ ಆಡಳಿತಕ್ಕಿಂತ ಮೇಲಾಗಿತ್ತು' ಎಂದಿರುವ ಇತಿಹಾಸ ತಜ್ಞ
ಉತ್ತರ:- ವಿನ್ಸೆಂಟ್ ಸ್ಮಿತ್ 
🏖ಕುಶಾನರ ಮೊದಲ ದೊರೆ 
ಉತ್ತರ:- ಕುಜುಲ ಕಡಫಿಸಸ್
🏖ನಾಲ್ಕನೇ ಬೌದ್ಧ ಸಮ್ಮೇಳನ ಏರ್ಪಡಿಸಿದವನು 
ಉತ್ತರ:- ಕನಿಷ್ಕ
🏖ನಾಲ್ಕನೇ ಬೌದ್ಧ ಸಮ್ಮೇಳನ ನಡೆದ ಸ್ಥಳ 
ಉತ್ತರ:- ಕಾಶ್ಮೀರದ ಕುಂಡಲಿವನ
🏖ನಾಲ್ಕನೇ ಬೌದ್ಧ ಸಮ್ಮೇಳನದ ನೇತೃತ್ವ ವಹಿಸಿದ್ದವರು 
ಉತ್ತರ:- ವಸುಮಿತ್ರ
logoblog

Thanks for reading General Knowledge Question and Answers 2024

Previous
« Prev Post

No comments:

Post a Comment

If You Have any Doubts, let me Comment Here