Galaganatha Kannada Writer
Venkatesh Tiruko Kulkarni, popularly known as Venkatesh Galaganatha was a famous Kannada novelist. He was born on January 5th, 1869 at Havanur in Haveri district of Karnataka.
ವೆಂಕಟೇಶ ತಿಲಕೋ ಕುಲಕರ್ಣಿಯವರು ಗಳಗನಾಥ ఎంబ ಹೆಸರಿನಿಂದಲೇ ಕನ್ನಡ ಓದುಗ ಸಮೂಹಕ್ಕೆ ಪರಿಚಿತರಾಗಿದ್ದಾರೆ. ಗಳಗನಾಥ ಎನ್ನುವುದು ಹಾವೇರಿ ಸಮೀಪದ ಊರಿನ ಹೆಸರು. ಅಲ್ಲಿಯ ದೈವಗಳಗೇಶ್ವರ ದೈವದಿಂದ ಆ ದೇವರು ನೆಲೆಸಿದ ಊರಿಗೆ ಗಳಗನಾಥ ಎಂಬ ಹೆಸರು ಬಂದಿರುವುದು. ಈ ಗಳಗೇಶ್ವರ-ಗಳಗನಾಥವನ್ನೇ ತಮ್ಮ ಸಾಹಿತ್ಯ ನಾಮವನ್ನಾಗಿ ಮಾಡಿಕೊಂಡು ಕುಲಕರ್ಣಿಯವರು ತಾವೂ ಪ್ರಸಿದ್ದರಾದುದೇ ಅಲ್ಲದೆ ಗಳಗನಾಥನನ್ನೂ ಸಾಹಿತ್ಯಪ್ರಿಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿಸಿದರು.
ಧಾರ್ಮಿಕ ಶ್ರದ್ಧೆಯಿಂದ ತುಂಬಿದ್ದ ಮನೆತನ. ತುಂಗಭದ್ರಾ-ವರದಾ ಹಿನ್ನೆಲೆಯ ಗಳಗನಾಥದ ಸುಂದರ ಪ್ರಕೃತಿಯ ಪರಿಸರ ನದಿಗಳ ಕುಲಕರ್ಣಿಯವರ ಮೇಲೆ ಪ್ರಭಾವವನ್ನು ಬೀರಿತ್ತು.
ಅಂದಿನ ಕಾಲಕ್ಕೆ, ಹೆಚ್ಚಿನ ಶಿಕ್ಷಣವೆಂದೇ ಪರಿಗಣಿತವಾಗಿದ್ದ ಟ್ರೇನಿಂಗ್ ಕಾಲೇಜ್ ಶಿಕ್ಷಣವನ್ನೂ ಪಡೆದರು. ಅಲ್ಲಿ ಅವರಿಗೆ ಕನ್ನಡ ಭಾಷೆ ಸಾಹಿತ್ಯಗಳನ್ನು ಕಲಿಸಿದವರು ದೊಂಡೋ ನರಸಿಂಹ ಮುಳಬಾಗಲರು. ಮತ್ತೊಬ್ಬರು ಇತಿಹಾಸದ ಅಧ್ಯಾಪಕ ರಾ.ಹ. ದೇಶಪಾಂಡೆಯವರು. ಇವರಿಬ್ಬರ ಪ್ರಭಾವದಿಂದ ಕುಲಕರ್ಣಿ ಯವರು ಲೇಖನ ಕಲೆಯನ್ನು ಕೈಗೊಳ್ಳಲು ಪ್ರೇರಕವಾಯಿತು. ತರಬೇತಿಯ ನಂತರ ಅವರು ಶಿಕ್ಷಕ ವೃತ್ತಿಯನ್ನು ಕೈಗೊಂಡು ಉಪ್ಪಿನ ಬೆಟಗೇರಿ ಬಂಕಾಪುರ, ಮುಂಡರಗಿ, ಗುತ್ತಲ ಧಾರವಾಡ ಮುಂತಾದ ಕಡೆಗಳಲ್ಲಿ ಉದ್ಯೋಗ ಮಾಡಿದರು.
ಸುರಳಿತ ಬರವಣಿಗೆಗೆ ಅವರು ಹೆಸರಾಗಿದ್ದರು.
ಅವರು ರಚಿಸಿದ್ದ ಸಾಹಿತ್ಯ ಕೃತಿಗಳು ಸರಿ ಸುಮಾರು ಐವತ್ತು. ಅವುಗಳಲ್ಲಿ ಕೆಲವನ್ನು ಹೆಸರಿಸಬಹುದಾದರೆ, 'ರಾಣಿಮೃಣಾಲಿನಿ', 'ಪ್ರಬುದ್ಧ ಪದ್ಮನಯನೆ', 'ದುರ್ಗದ ಬಿಚ್ಚುಗತ್ತಿ', 'ಕುಮುದಿನಿ', ಸತ್ಯಸಾರ', 'ಮಾಧವ ಕರುಣಾ ವಿಲಾಸ'ವು ಅವರು ಬರೆದಿರುವ ಏಳು ನೂರಕ್ಕೂ ಹೆಚ್ಚು ಪುಟಗಳ ಐತಿಹಾಸಿಕ ಕಾದಂಬರಿ.
ಧಾರವಾಡದ ವಿದ್ಯಾವರ್ಧಕ ಸಂಘ ಗಳಗನಾಥರ ಮೇಲೆ ಅಪಾರ ಪ್ರಭಾವ ಬೀರಿತ್ತು. ಆ ಸಂಘದಿಂದ ಅದರ ವಾರ್ಷಿಕ ಸ್ಪರ್ಧೆಯಲ್ಲಿ 'ಪದ್ಮನಯನೆ' ಕಾದಂಬರಿಗೆ ಪುರಸ್ಕಾರ ದೊರಕಿತ್ತು. 'ಮಾಧವ ಕರುಣಾವಿಲಾಸ'ಕ್ಕೆ ಸಾಹಿತ್ಯ ಪರಿಷತ್ತಿನ ಗೌರವ ಲಭಿಸಿದೆ.
ಕನ್ನಡದ ಮೊಟ್ಟಮೊದಲ ಮಾಸ ಪತ್ರಿಕೆಯೆಂದೇ ಪರಿಗಣಿತವಾಗಿರುವ ಸದ್ಯೋಧ ಚಂದ್ರಿಕೆಯನ್ನು 1907ರಲ್ಲಿ ಸಂಸ್ಥಾಪಿಸಿದ ಗಳಗನಾಥರು ಅಂದಿನ ಸರ್ಕಾರದ ಕಟ್ಟುಪಾಡಿನಂತೆ ಸಂಪಾದಕರಾಗಲಿಲ್ಲ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಪತ್ರಿಕೆಯ ಸಾರ್ಥಕ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಗಳಗನಾಥರು ಕೇವಲ ಲೇಖಕರಾಗಿಯೇ ಅಲ್ಲದೆ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪುಸ್ತಕಗಳನ್ನು ಗಂಟು ಕಟ್ಟಿಕೊಂಡು ಮನೆ ಮನೆಗಳಿಗೆ ಹೋಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದನು.
No comments:
Post a Comment
If You Have any Doubts, let me Comment Here