Circular regarding flag hoisting on all school and college buildings on national festivals
ರಾಷ್ಟ್ರೀಯ ಹಬ್ಬಗಳ ಮಹತ್ವ, ಭಾವೈಕ್ಯತೆ ಹಾಗೂ ಪರಸ್ಪರ ಸಹಬಾಳ್ವೆ ಬಗ್ಗೆ, ಶಾಲಾ ಕಾಲೇಜುಗಳ ಮಕ್ಕಳಲ್ಲ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ರಾಷ್ಟ್ರಲಾಂಛನವಾದ ತ್ರಿವರ್ಣ ರಾಷ್ಟ್ರಧ್ವಜವನ್ನು ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳ ಕಟ್ಟಡಗಳ ಮೇಲೆ ಗೌರವಯುತವಾಗಿ ನಿಗದಿತ ಸಮಯದೊಳಗೆ ಆರೋಹಣ ಮಾಡಿ ನಂತರ ಅದನ್ನು ಜೋಪಾನವಾಗಿ ಇಳಿಸಿ ಸಂರಕ್ಷಿಸುವ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಗೊತ್ತಿರುವ ವಿಷಯ.
ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಾದ 15ನೇ ಆಗಸ್ಟ್ ಮತ್ತು ಜನವರಿ 26 ರಂದು ಅನುಕ್ರಮವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿರುವುದು ಸರಿಯಷ್ಟೆ. ಈ ಸಂಬಂಧ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸುವ ಬಗ್ಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.
1) ಯಾವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಆಡಳಿತ ಸಮಿತಿ (ಎಸ್.ಡಿ.ಎಂ.ಸಿ.) ಅಸ್ತಿತ್ವದಲ್ಲಿರುತ್ತದೆಯೋ ಅಂತಹ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ/ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕಮವನ್ನು ಸಮಿತಿಯ ಅಧ್ಯಕ್ಷರು ನಿಗದಿತ ಸಮಯದೊಳಗೆ ನೆರವೇರಿಸತಕ್ಕದ್ದು.
2) ಯಾವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಆಡಳಿತ ಸಮಿತಿ (ಎಸ್.ಡಿ.ಎಂ.ಸಿ.) ಅಸ್ತಿತ್ವದಲ್ಲಿರುವುದಿಲ್ಲವೋ ಅಥವಾ ಅಸ್ತಿತ್ವದಲ್ಲಿದ್ದಾಗ್ಯೂ ಸಹ ಅನಿವಾರವಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಅನುಪಸ್ಥಿತರಾದ ಸಂದರ್ಭದಲ್ಲಿ ಆಯಾಯಾ ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಕಾರ್ಯಕ್ರಮವನ್ನು ನಿಗದಿತ ಸಮಯದೊಳಗೆ ನೆರವೇರಿಸತಕ್ಕದ್ದು.
3) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ. ಸ್ವಾತಂತ್ರ್ಯ ದಿನಾಚರಣೆಯ/ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಬಂಧಿಸಿದ ಪ್ರಾಂಶುಪಾಲರು ನಿಗದಿತ ಸಮಯದೊಳಗೆ ನೆರವೇರಿಸತಕ್ಕದ್ದು.
4) ಈ ಬಗ್ಗೆ ಆಯುಕ್ತಾಲಯ / ನಿರ್ದೇಶನಾಲಯದ ಅಧೀನ ಕಛೇರಿಗಳಿಗೆ ಸೂಕ್ತ ಸೂಚನೆಯನ್ನು ನೀಡತಕ್ಕದ್ದು.
ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here