Final list of 1:20 eligible candidates for direct recruitment for the post of Beat Foresters (49 Nos.) during 2023-24, in Bangalore Circle
2023-24ನೇ ಸಾಲಿನಲ್ಲಿ ಬೆಂಗಳೂರು ವೃತ್ತದ 49 ಗಸ್ತು ಅರಣ್ಯ ಪಾಲಕ ವೃಂದದ ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ 1:20 ಅಂತಿಮ ಅರ್ಹತಾ ಆಯ್ಕೆ ಪಟ್ಟಿ.
ಸರ್ಕಾರದ ಅಧಿಸೂಚನೆ ಸಂಖ್ಯೆ: FEE 203 FEG 2015 ದಿನಾಂಕ: 06.08.2019ರ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2019ರನ್ನಯ ಬೆಂಗಳೂರು ವೃತ್ತಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಲಾದ 49 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ 'ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳಿಗೆ ನೇರ ನೇಮಕಾತಿ ಕುರಿತು ಆನ್‌ಲೈನ್ ಮೂಲಕ ಈಗಾಗಲೇ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಸದರಿ ಅರ್ಜಿಗಳನ್ನು ಪರಿಶೀಲಿಸಿ, ದಿನಾಂಕ: 31-7-2024ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ದಿನಾಂಕ 07-08-2024 ಸಂಜೆ 5.30 ಗಂಟೆವರೆಗೆ ಈ ಕಛೇರಿ ಇ- ಮೇಲ್ bengalurubeatforester@gmail.com ಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈ ಕುರಿತು ಸ್ವೀಕೃತವಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ತೆಗೆದುಕೊಂಡ
ಕ್ರಮವನ್ನು ಈ ಪ್ರಕಟಣೆಯ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ.
ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಪಡೆದ ಒಟ್ಟು ಅಂಕಗಳ ಮೆರಿಟ್ ಹಾಗೂ ಪ್ರವರ್ಗವಾರು ಮೀಸಲಾತಿ ಆಧಾರದ ಮೇಲೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅನುಬಂಧ-1 ರಲ್ಲಿ 1:20 (ಹುದ್ದೆ ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಯನ್ನು ಇಲಾಖೆಯ ಅಂತರ್ಜಾಲ https://aranya.gov.in/ದಲ್ಲಿ ಪ್ರಕಟಿಸಲಾಗಿದೆ.
ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ನಿಗಧಿಪಡಿಸಲಾಗಿರುವ ದೈಹಿಕ ತಾಳ್ವಿಕೆ, (Physical Endurance Test) & ದೈಹಿಕ ಕಾರ್ಯಸಮರ್ಥತೆ (Physical Efficiency Test) ಹಾಗೂ ದೇಹದಾರ್ಡ್ಯತೆ (Physical Standard Test) ಪರೀಕೆಗಳನ್ನು ಮತ್ತು ಲಿಖಿತ ಪರೀಕ್ಷೆಗಳನ್ನು (Written Examination) ಅಕ್ಟೋಬರ್-2024 ರ ಕೊನೆಯ ವಾರ ಅಥವಾ ನವಂಬರ್-2024 ರ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ನಿಗಧಿತ ದಿನಾಂಕಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಸದರಿ ದೈಹಿಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಕಂಡ ಸೂಚನೆಗಳನ್ನು ಗಮನಿಸಲು ಸೂಚಿಸಿದೆ.
1) ಅಭ್ಯರ್ಥಿಗಳು ಅರ್ಜಿಯಲ್ಲಿ ಅಪ್‌ಲೋಡ್ ದಾಖಲಾತಿಗಳನ್ನು ತಪ್ಪದೇ ತರುವುದು. ಮಾಡಿರುವ ಮೂಲ
2) ಸದರಿ ದೈಹಿಕ ತಾಳ್ವಿಕೆ, ದೈಹಿಕ ಕಾರ್ಯಸಮರ್ಥತೆ ಹಾಗೂ ದೇಹದಾರ್ಡ್ಯತೆ ಪರೀಕೆ ಮತ್ತು ಲಿಖಿತ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ದಿನಭತ್ಯೆ ನೀಡುವುದಿಲ್ಲ ಹಾಗೂ ವೈಯಕ್ತಿಕವಾಗಿ ಸಂದೇಶವನ್ನು ಕಳುಹಿಸಲಾಗುವುದಿಲ್ಲ. ಹಾಗಾಗಿ ಇಲಾಖೆಯ ಜಾಲತಾಣವನ್ನು ಆಗಾಗ್ಗೆ ವೀಕ್ಷಿಸುತ್ತಿರಲು ತಿಳಿಸಿದೆ.
No comments:
Post a Comment
If You Have any Doubts, let me Comment Here