Regarding the revised registration order and grant of first recognition to relocated and transferred schools
ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಲವೊಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಅನುಮತಿ ಪಡೆದು ಶಾಲೆಗಳನ್ನು ಮೂಲ ಸ್ಥಳಗಳಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರ ಹಾಗೂ ಬೇರೆ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿಕೊಂಡಿರುತ್ತಾರೆ. ಸದರಿ ಸ್ಥಳಾಂತರ ಹಾಗೂ ಹಸ್ತಾಂತರಗೊಂಡ ಶಾಲೆಗಳಿಗೆ ಸರ್ಕಾರದ ಅನುಮತಿ ಆದೇಶದ ಪತ್ರದಂತೆ ಷರತ್ತುಗಳನ್ವಯ ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು(ಆಡಳಿತ) ಇವರು ನಿಯಮಾನುಸಾರ ಆಡಳಿತಾತ್ಮಕ ಕ್ರಮಕೈಗೊಳ್ಳದೇ ಇರುವುದು ಗಮನಕ್ಕೆ ಬಂದಿರುತ್ತದೆ.
ಪ್ರಯುಕ್ತ ಶಾಲೆಗಳ ಸ್ಥಳಾಂತರ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸರ್ಕರದಿಂದ ಅನುಮೋದನೆ ಪಡೆದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಈ ಕೆಳಕಂಡಂತೆ ಕ್ರಮವಹಿಸಲು ಸೂಚಿಸಿದೆ.
ಸರ್ಕಾರದ ಸ್ಥಳಾಂತರ ಆದೇಶದ ಷರತ್ತು-1 ಮತ್ತು 2 ರಂತೆ ಹಾಗೂ ಸರ್ಕಾರದ ಹಸ್ತಾಂತರ ಆದೇಶದ ಷರತ್ತು- 1,2 ಮತ್ತು 3 ರಂತೆ ಸದರಿ ಶಾಲೆಗಳು ಹೊಸ ಶಾಲೆಯೆಂದು ಮಾನ್ಯತೆ ಪಡೆಯುವ ಷರತ್ತುಗೊಳಪಟ್ಟು ಮಾನ್ಯತೆ ನೀಡುವುದು. ಹಾಗೂ ಸದರಿ ಶಾಲೆಗೆ ಹಿಂದಿನ ಸ್ಥಳದಲ್ಲಿರುವ ಶಾಲೆಯನ್ನು ಮುಚ್ಚುವ ಮತ್ತು ಹೊಸ ಸ್ಥಳದಲ್ಲಿ ಶಾಲೆ ತೆರೆಯುವುದಕ್ಕೆ ಸಂಬಂಧಿಸಿದಂತೆ ಒಂದೇ ಆದೇಶವನ್ನು ಹೊರಡಿಸತಕ್ಕದ್ದು ಹಾಗೂ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹಿಂದಿನ ಆಡಳಿತ ಮಂಡಳಿಯು ಶಾಲೆಗಳನ್ನು ಬಿಟ್ಟುಕೊಡುವ ಹಾಗೂ ಹೊಸ ಆಡಳಿತ ಮಂಡಳಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಒಂದೇ ಆದೇಶದಲ್ಲಿ ಹೊರಡಿಸತಕ್ಕದ್ದು .
ಸ್ಥಳಾಂತರ/ಹಸ್ತಾಂತರ ಆದೇಶ ಹೊರಡಿಸಿದ ದಿನಾಂಕದಿಂದ ಸದರಿ ಶಾಲೆಗಳನ್ನು ಕರ್ನಾಟಕ ಶಿಕ್ಷಣ ಕಾಯ್ದೆ- 1983ರ ಅಡಿಯಲ್ಲಿ ರಚಿಸಲಾದ ನಿಯಮಗಳಂತೆ ಹೊಸ ಶಾಲೆಯೆಂದು ಪರಿಗಣಿಸಿ, ಹೊಸ ನೊಂದಣಿ ಸಂಖ್ಯೆಯೊಂದಿಗೆ ಸರ್ಕಾರದ ಅದೇಶ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಪರಿಷ್ಕೃತ ನೊಂದಣಿ ಆದೇಶ ನೀಡುವುದು.
ಸ್ಥಳಾಂತರ/ಹಸ್ತಾಂತರ ಆದೇಶ ಹೊರಡಿಸಿದ ದಿನಾಂಕದಿಂದ ಸದರಿ ಶಾಲೆಗಳಿಗೆ ಹೊಸ ಶಾಲೆಗೆ ಮಾನ್ಯತೆ ಕೋರುವಂತೆ ತಿಳಿಸಿ ಹೊಸದಾಗಿ ಪ್ರಸ್ತಾವನೆ ಪಡೆದು ಪ್ರಥಮ ಮಾನ್ಯತೆ ಮತ್ತು ನಂತರದ ವರ್ಷಗಳಲ್ಲಿ ಮಾನ್ಯತೆ ನವೀಕರಣ ನೀಡಲು ಕ್ರಮವಹಿಸುವುದು.
ನೊಂದಣಿ ಮತ್ತು ಈಗಾಗಲೇ ಸದರಿ ಶಾಲೆಗಳಿಗೆ ನೀಡಿರುವ ಮಾನ್ಯತೆ ನವೀಕರಣವನ್ನು ಮಾರ್ಪಡಿಸಿ ಸ್ಥಳಾಂತರಿಸಿದ ಸ್ಥಳ/ವಿಳಾಸ ಮತ್ತು ಹಸ್ತಾಂತರಿಸಿದ ಆಡಳಿತ ಮಂಡಳಿಯ ವಿಳಾಸ ನಮೂದಿಸಿ ಪ್ರಥಮ ಮಾನ್ಯತೆ ಪ್ರಮಾಣ ಪತ್ರ ಮತ್ತು ನಂತರದ ಅವಧಿಗೆ ಮಾನ್ಯತೆ ನವೀಕರಣ ಪತ್ರ ನೀಡಲು ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದೆ. ಸದರಿ ಪ್ರಕ್ರಿಯೆಯನ್ನು ವಿಳಂಬಕ್ಕೆ ಅವಕಾಶ ನೀಡದಂತೆ 15 ದಿನಗಳೊಳಗಾಗಿ ಪೂರ್ಣಗೊಳಿಸಿ ಈ ಕಚೇರಿಗೆ ವರದಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here