Order to upgrade primary schools of the state
2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ (6-7/8ನೇ ತರಗತಿ) ಶಾಲೆಗಳನ್ನಾಗಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ 7ನೇ ತರಗತಿಯನ್ನು 8ನೇ ತರಗತಿಯಾಗಿ ಉನ್ನತೀಕರಿಸಿ ಪ್ರಾರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸಿ (6-7/8ನೇ ತರಗತಿ) ಪ್ರಾರಂಭಿಸಲು ಮತ್ತು ಹಾಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ತಾಲ್ಲೂಕು/ಜಿಲ್ಲಾ/ವಿಭಾಗ ಹಂತದ ಪರಿಶೀಲನಾ ಸಮಿತಿಗಳು ಪರಿಶೀಲಿಸಿ ಶಿಫಾರಸ್ಸಿನೊಂದಿಗೆ ಈ ಕಛೇರಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು, ಈ ಪೈಕಿ ಮೊದಲನೇ ಹಂತದಲ್ಲಿ 55 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ 41 ಸರ್ಕಾರಿ ಹಿರಿಯ ಪ್ರಾಥಮಿಕ (1 ರಿಂದ 7ನೇ ತರಗತಿ ) ಶಾಲೆಗಳನ್ನು 8ನೇ ತರಗತಿಗೆ ಉನ್ನತೀಕರಿಸಿ ಆದೇಶಿಸಲಾಗಿರುತ್ತದೆ.
ಪ್ರಸ್ತುತ ಉಲ್ಲೇಖ-4ರನ್ವಯ ಮತ್ತೊಮ್ಮೆ ಎರಡನೇ ಹಂತದಲ್ಲಿ ಜನಪ್ರತಿನಿಧಿಗಗಳು, ಶಾಸಕರು, ಸಚಿವರು ಹಾಗೂ ಸಂಬಂಧಿಸಿದ ಉಪನಿರ್ದೇಶಕರು ಮತ್ತು ಅಪರ ಆಯುಕ್ತರು ಕಲಬುರುಗಿ ಮತ್ತು ಧಾರವಾಡ ರವರು ಶಿಫಾರಸ್ಸಿನೊಂದಿಗೆ ಈ ಕೆಳಕಂಡಂತೆ 2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸಿ (6-7/8ನೇ ತರಗತಿ) ಪ್ರಾರಂಭಿಸಲು ಮತ್ತು ಹಾಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗಳನ್ನು ಪ್ರಾರಂಭಿಸಲು ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿರುತ್ತದೆ.
ಸದರಿ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ, ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ, ಬೋಧನೆಗೆ ಶಿಕ್ಷಕರ ಲಭ್ಯತೆ ಇರುವ ಹಾಗೂ ಇಲಾಖೆ/ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಅರ್ಹವಿರುವ ಶಾಲೆಗಳನ್ನು ಪರಿಶೀಲಿಸಿ,ಪರಿಗಣಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಏಕ ಕಡತದ ಮೂಲಕ ಈ ಕೆಳಕಂಡಂತೆ ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.
No comments:
Post a Comment
If You Have any Doubts, let me Comment Here