JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, July 18, 2024

NSP NMMS Scholarship 2024

  Jnyanabhandar       Thursday, July 18, 2024
NMMS NSP Scholarship 2024

2024-25 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನಲ್ಲಿ NMMS ವಿದ್ಯಾರ್ಥಿ ವೇತನಕ್ಕಾಗಿ National Scholarship Portal ನಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ವೇಳಾಪಟ್ಟಿ ನಿಗಧಿ ಪಡಿಸಿರುವುದಾಗಿ ಮೇಲಿನ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ.

ಪ್ರಮುಖ ದಿನಾಂಕಗಳು

ಪೋರ್ಟಲ್ ಆರಂಭ - 30-6-2024
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು/ನವೀಕರಿಸಲು ಅಂತಿಮ ದಿನಾಂಕ- 31-8-2024

ಶಾಲಾ/ ಕಾಲೇಜು ಹಂತದಲ್ಲಿ INO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ- 15-9-2024

ಜಿಲ್ಲಾ ಹಂತದಲ್ಲಿ DNO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ- 30-9-2024

ಪ್ರಸಕ್ತ ಸಾಲಿನಲ್ಲಿ National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು, ಅನುಸರಿಸಬೇಕಾದ ಪ್ರಮುಖ ಅಂಶಗಳು :

2024-25ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR( ಕಡ್ಡಾಯವಾಗಿರುತ್ತದೆ.

(OTR) is a unique 14-digit number issued based on the Aadhaar/Aadhaar Enrolment ID (EID)

One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.

NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೊಬೈಲ್ ಗೆ SMS ಮೂಲಕ ಕಳುಹಿಸಲಾಗುತ್ತಿದೆ. Reference / OTR

Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) ໖ National Scholarship Portal 2 Student Login ಲಭ್ಯವಿರುವ "Know your OTR" ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

2024-25 ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)

ಅ) ಆಧಾ‌ರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು

ಸಕ್ರಿಯ ಮೊಬೈಲ್ ಸಂಖ್ಯೆ.

ಆಧಾ‌ರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.

ವಿದ್ಯಾರ್ಥಿಯ ಆಧಾ‌ರ್ ಸಂಖ್ಯೆ.

ಆ) ಆಧಾ‌ರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು

ಸಕ್ರಿಯ ಮೊಬೈಲ್ ಸಂಖ್ಯೆ

ಪೋಷಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ

ವಿದ್ಯಾರ್ಥಿಯು ಆಧಾ‌ರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ.

ಪೋಷಕರ ಆಧಾರ್ ಸಂಖ್ಯೆ.

ವಿ ಸೂ : ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ ಕೂಡ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರ ವಿದ್ಯಾರ್ಥಿಯದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾ‌ರ್ ಸಂಖ್ಯೆಯನ್ನು update ಮಾಡತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.

logoblog

Thanks for reading NSP NMMS Scholarship 2024

Previous
« Prev Post

No comments:

Post a Comment

If You Have any Doubts, let me Comment Here