DOCUMENT VERIFICATION FOR CANDIDATES WHO GOT SELECTED IN SOCIAL SCIENCE ADDITIONAL LIST THROUGH KPSC
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಗ್ರೂಪ್ 'ಸಿ' ವೃಂದದ ಹೆಚ್ಚುವರಿ ಆಯೆಪಟ್ಟಿಯಲ್ಲಿಆಯ್ಕೆಯಾದ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ ಹಮ್ಮಿಕೊಂಡಿದ್ದು, ಅರ್ಹ ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಆಯೋಗವು ಪ್ರಕಟಿಸಿ ಆಯೋಗದ ಪತ್ರದಲ್ಲಿ ನೇಮಕಾತಿ ಆದೇಶವನ್ನು ನೀಡುವ ಮುನ್ನ ನೇಮಕಾತಿ ಪ್ರಾಧಿಕಾರವು ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ನೇಮಕಾತಿ ಮಾಡಿಕೊಳ್ಳಬೇಕೆಂದು ತಿಳಿಸಿರುತ್ತಾರೆ.
ಆದ್ದರಿಂದ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ಅಂಕಪಟ್ಟಿ ಮತ್ತು ಸಂಬಂಧಪಟ್ಟ ಇತರೆ ದಾಖಲೆಗಳ ಪರೀಶೀಲನೆ ಕಾರ್ಯವನ್ನು ಸಂಘದ ಕೇಂದ್ರ ಕಛೇರಿಯ ತಾಂತ್ರಿಕ ಶಾಖೆಯ ಸಭಾಂಗಣದಲ್ಲಿ ಈ ಕೆಳಕಂಡಂತೆ ಆಯೋಜಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಮೂಲ ಅಂಕಪಟ್ಟಿಗಳು ಹಾಗೂ ಇತರೆ ಸಂಬಂಧಪಟ್ಟ ದಾಖಲೆ (ಕನ್ನಡ ಮಾದ್ಯಮ, ಗ್ರಾಮೀಣ, ಹೈದ್ರಾಬಾದ್ ಕರ್ನಾಟಕ. ಯೋಜನಾ ನಿರಾಶ್ರಿತ, ಜಾತಿ & ಆದಾಯ ಪ್ರಮಾಣ ಪತ್ರ ವಿಕಲಚೇತನ ಪ್ರಮಾಣ ಪತ್ರ, ಮಾಜಿ ಸೈನಿಕ ಪ್ರಮಾಣ ಪತ್ರ) ಗಳನ್ನು ಕಡ್ಡಾಯವಾಗಿ ಮೂಲ ಹಾಗೂ ದೃಢೀಕೃತ ಎರಡು ನಕಲು ಪ್ರತಿಗಳೊಂದಿಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು, ಯಾವುದೇ ಕಾರಣಕ್ಕೂ ದಾಖಲೆಗಳ ಸಲ್ಲಿಕೆಗೆ ಸಮಯಾವಕಾಶ ನೀಡುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here