IAS Officers Transfer Order Dated 06-07-2024
ಕರ್ನಾಟಕ ಸರ್ಕಾರ (Karnataka Government) ಲೋಕಸಭೆ ಚುನಾವಣೆ (Lok Sabha Election) ಮುಗಿಯುತ್ತಿದ್ದಂತೆಯೇ ಆಡಳಿತ ಯಂತ್ರದಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ತಕ್ಷಣವೇ ಜಾರಿಗೆ ಬರುವಂತೆ 8 ಐಎಎಸ್ ಅಧಿಕಾರಿಗಳನ್ನು (IAS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಒಂದು ವಾರದ ಅಂತರದಲ್ಲಿ ಮೂರು ಬಾರಿ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಯಾವ ಯಾವ ಅಧಿಕಾರಿ ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂಬ ವಿವರ ಇಲ್ಲಿದೆ.
ವರ್ಗಾವಣೆಗೊಂಡ 8 ಐಎಎಸ್ ಅಧಿಕಾರಿಗಳ ಪಟ್ಟಿ
ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯಕಾರಿ ನಿರ್ದೇಶಕ ಯಶವಂತ್ ವಿ.ಗುರುಕರ್ ಅವರನ್ನು ರಾಮನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಇಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಬಿಎಂಪಿ (ಆಡಳಿತ) ವಿಶೇಷ ಆಯುಕ್ತರಾಗಿದ್ದ ಡಾ. ಹರೀಶ್ ಕುಮಾರ್ ಕೆ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ) ಬಿಬಿಎಂಪಿ ಬೆಂಗಳೂರು ನೇಮಕ ಮಾಡಲಾಗಿದೆ. ಜೊತೆಗೆ ಸಿಇಒ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಲಿಮಿಟೆಡ್ ಆಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿ ಅರ್ಚನಾ ಎಂ ಎಸ್ ಬಿಎಂಟಿಸಿ (ಭದ್ರತೆ & ಸುರಕ್ಷತೆ) ನಿರ್ದೇಶಕರಾಗಿ ನೇಮಕ ಗೊಂಡಿದ್ದಾರೆ. ರಾಮನಗರ ಜಿಲ್ಲಾಧಿಕಾರಿಯಾಗಿದ್ದ ಅವಿನಾಶ್ ಮೆನನ್ ಬಿಬಿಎಂಪಿ ಆಡಳಿತ ಸ್ಪೆಷಲ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಯಶವಂತ್ ವಿ ಗುರುಕರ್ ಕಲಬುರುಗಿಯಲ್ಲಿ ಸೇವೆ ಸಲ್ಲಿಸಿದ್ದರು.
ಮಹಮ್ಮದ್ ಇಕ್ರಮುಲ್ಲ ಶರೀಫ್, ರಾಜ್ಯ ಹಣಕಾಸು ಇಲಾಖೆ ಸಹ ಕಾರ್ಯದರ್ಶಿಯಿಂದ ಹಣಕಾಸು ಇಲಾಖೆಯ ಬಜೆಟ್ ಹಾಗೂ ಸಂಪನ್ಮೂಲ ಸಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಮಡಿಕೇರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಗಕ ಅಧಿಕಾರಿಯಾಗಿದ್ದ ವರ್ಣಿತ್ ನೇಗಿ, ರಾಜ್ಯ ಹ್ಯಾಂಡ್ ಲೂಮ್ ಡೆವಲಪ್ಮೆಂಟ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಮೊನಾ ರಾವತ್, ಹ್ಯಾಂಡ್ ಲೂಮ್ ಡೆವಲಪ್ಮೆಂಟ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಚಾಮರಾಜನಗರ ಜಿಲ್ಲಾ ಪಂಚಾಯತ್ CEO ಆಗಿ ನೇಮಕ ಮಾಡಲಾಗಿದೆ.
ಆನಂದ್ ಪ್ರಕಾಶ್ ಮೀನಾ, ಚಾಮರಾಜನಗರ ಜಿಲ್ಲಾ ಪಂಚಾಯತ್ CEO ಇಂದ ಮಡಿಕೇರಿ ಜಿಲ್ಲಾ ಪಂಚಾಯತಿ CEO ಆಗಿ ನೇಮಕ ಮಾಡಲಾಗಿದೆ.
No comments:
Post a Comment
If You Have any Doubts, let me Comment Here