Government Answer Regarding promotion from Primary School Teacher to GPT Teacher
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಬಗ್ಗೆ ಇತ್ತೀಚಿಗೆ ವಿಧಾನ ಪರಿಷತ್ತಿನಲ್ಲಿ ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಶ್ರೀಯುತ ಸಿ ಟಿ ರವಿ ಸರ್ ಅವರು ಶಿಕ್ಷಣ ಸಚಿವರಿಗೆ ಕೇಳಿದ ಪ್ರಶ್ನೆಗೆ ಮಾನ್ಯ ಶಿಕ್ಷಣ ಸಚಿವರು ನೀಡಿರುವ ಉತ್ತರ.
"ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳ ಹಕ್ಕು ಕಾಯ್ದೆ-2009 ಹಾಗೂ ಎನ್.ಸಿ.ಟಿ.ಇ ಅಧಿಸೂಚನೆ ಅನ್ವಯ 2017 ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿದ್ದು, ಅದರ ಪ್ರಕಾರ ಮೊದಲಿದ್ದ 1-8 ರ ವೃಂದವನ್ನು 1-5 ಮತ್ತು 6-8 ಎಂಬ ಎರಡು ವೃಂದಗಳಲ್ಲಿ ವಿಭಾಗಿಸಿ ವಿವಿಧ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ. ಇದು ಉತ್ತಮ ಬೆಳವಣಿಗೆಯಾದರೂ ಈ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದ್ದರಿಂದ ರಾಜ್ಯದ ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಹುದೊಡ್ಡ ಅನ್ಯಾಯವಾಗಿರುವುದರ ಜೊತೆಗೆ ಕೆಲವು ಸಮಸ್ಯೆಗಳು ಉದ್ಭವವಾಗಿದೆ. ಮುಖ್ಯವಾಗಿ 2016 ಕ್ಕಿಂತ ಮುಂಚೆ 1 ರಿಂದ 7-8ನೇ ತರಗತಿಗೆ ಸಹ ಶಿಕ್ಷಕರೆಂದು ನೇಮಕಾತಿ ಹೊಂದಿದ ಶಿಕ್ಷಕರಿಗೆ P.S.T ಎಂದು ಪದನಾಮಿಕರಣ ಮಾಡಿ 1-5 ಕ್ಕೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೆ, ಸದರಿ ವೃಂದ ಮತ್ತು ನೇಮಕಾತಿ ನಿಯಮಗಳ ಜಾರಿಯಿಂದಾಗಿ ಶಿಕ್ಷಕರಿಗೆ ಸೇವಾಜೇಷ್ಠತೆ, ಕಾಲಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆಗಳಲ್ಲಿ ಅನ್ಯಾಯವಾಗುವುದರ ಜೊತೆಗೆ - ನಿಯಮಗಳ ಉಲ್ಲಂಘನೆಯಾಗುತ್ತಿದೆ. ಆದ್ದರಿಂದ ಸರ್ಕಾರ, ಕೂಡಲೆ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆದೇಶ ಹೊರಡಿಸಿ, ಉಲ್ಲಂಘನೆಯಾಗಿರುವ ನಿಯಮಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಸದರಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಹಿಂಬಡ್ತಿಗೊಳಗಾದ ಶಿಕ್ಷಕರನ್ನು G.P.T ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪದನಾಮಿಕರಣ ಮಾಡುವುದರಿಂದ ನಿಯಮ ಪಾಲನೆಯ ಜೊತೆಗೆ ಶಿಕ್ಷಕರ ವರ್ಗಾವಣೆ ಸಮಸ್ಯೆ ಮುಖ್ಯ ಶಿಕ್ಷಕರ ಬಡ್ತಿ ಸಮಸ್ಯೆ, ಪ್ರೌಢಶಾಲಾ ಶಿಕ್ಷಕರ ಬಡ್ತಿ ಸಮಸ್ಯೆ, P.S.T ಮತ್ತು G.P.T ಹುದ್ದೆಗಳ ಸಮನ್ವಯದ ಸಮಸ್ಯೆ. ಕಾಲಮಿತಿ ಬಡ್ತಿಗಳ ಸಮಸ್ಯೆ ಹಾಗೂ ಸೇವಾ ಜೇಷ್ಠತೆಯಂತಹ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
ಈ ವಿಷಯವನ್ನು ಈ ದಿನ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಕೋರುತ್ತೇನೆ"
ಮಾಹಿತಿಗಾಗಿ.
No comments:
Post a Comment
If You Have any Doubts, let me Comment Here