DCET 2024 FIRST ROUND FINAL RESULT
ಇಂಜಿನಿಯರಿಂಗ್ (Engineering) ಕೋರ್ಸ್‍ನ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ನೀಡಲು ನಡೆಸಿದ ಡಿಸಿಇಟಿ-24 ಪರೀಕ್ಷೆಯ (Karnataka DCET 2024) ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority) ತನ್ನ ವೆಬ್‍ಸೈಟ್‍ನಲ್ಲಿ ಜು.22ರಂದು ಪ್ರಕಟಿಸಿದೆ.
ಚಾಯ್ಸ್ ಆಯ್ಕೆ ಮಾಡಿಕೊಳ್ಳಲು ಜು.24ರ ಬೆಳಿಗ್ಗೆ 11ಗಂಟೆಯವರೆಗೆ ಅವಕಾಶ ನೀಡಿದ್ದು, ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ಜು.26ಕ್ಕೆ ಕೊನೆಯಾಗಲಿದೆ. ಚಾಯ್ಸ್-1 ಮತ್ತು 2ನ್ನು ಆಯ್ಕೆ ಮಾಡಿಕೊಂಡವರು ಜು.25ರ ಸಂಜೆ 4ಗಂಟೆಯ ಒಳಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೊದಲ ಸುತ್ತಿನಲ್ಲಿ ತಮಗೆ ಸಿಕ್ಕಿರುವ ಸೀಟು ಇಷ್ಟವಾದರೆ ಚಾಯ್ಸ್ -1ನ್ನು ಆಯ್ಕೆ ಮಾಡಿ, ಶುಲ್ಕ ಪಾವತಿಸಿ, ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ಸಿಕ್ಕಿರುವ ಸೀಟು ತೃಪ್ತಿ ಇದ್ದು, ಇನ್ನೂ ಉತ್ತಮ ಸೀಟು ಬೇಕಾಗಿದೆ ಎನ್ನುವವರು ಚಾಯ್ಸ್-2ನ್ನು ಆಯ್ಕೆ ಮಾಡಿಕೊಳ್ಳಬೇಕು. ಅವರು ಕೂಡ ಶುಲ್ಕ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
No comments:
Post a Comment
If You Have any Doubts, let me Comment Here