*ಜೂನ್ 03-ವಿಶ್ವ ಬೈಸಿಕಲ್ ದಿನ (World Bicycle Day):*
*#ಮಾನವನ ಸಾರ್ವಕಾಲಿಕ ಮಿತ್ರ ಸೈಕಲ್:ಜನಸಾಮಾನ್ಯನ ಪಾಲಿಗೆ ಸೈಕಲ್ ಇಂದಿಗೂ ಸಂಚಾರ ಸಾಧನವಾಗಿದ್ದರೆ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್ ಪೆಡಲ್‌ಗಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಬಂದಿವೆ.*
*ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆಗಳಿಂದ ದೂರ ವುಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಲು ಸಾಧ್ಯ.*
_#ಇತಿಹಾಸ:_
*ಕ್ರಿಶ 1817ರ ಜೂನ್ 12ರಂದು ಜರ್ಮನಿಯ ಬ್ಯಾರನ್ ಕಾರ್ಲ್ ವನ್ ಡ್ರೈಸ್ ಅವರು ಬೈಸಿಕಲ್ ಅನ್ನು ವಿಶ್ವದ ಜನತೆಗೆ ಪರಿಚಯಿಸಿದರು ಎಂಬ ಉಲ್ಲೇಖವಿದೆ.ಆ ಬಳಿಕ ನಿರಂತರ ವಾಗಿ ಜಗತ್ತಿನಾದ್ಯಂತ ಸಂಚಾರ ಸಾಧನವಾಗಿ ಈ ಸೈಕಲ್ ವ್ಯಾಪಕವಾಗಿ ಬಳಸಲ್ಪಟ್ಟಿತ್ತು.ಕಾಲಕ್ಕೆ ತಕ್ಕಂತೆ ಸೈಕಲ್‌ಗಳೂ ಸುಧಾರಣೆ ಕಂಡವು. ಇದರ ಜತೆಯಲ್ಲಿ ಸೈಕ್ಲಿಂಗ್ ಒಂದು ಕ್ರೀಡೆಯಾಗಿ, ದೈಹಿಕ ವ್ಯಾಯಾಮಕ್ಕೆ ಬಳಸಲ್ಪಡುವ ಸಾಧನವಾಗಿ ಪರಿಗಣಿಸಲ್ಪಟ್ಟಿದೆ.*
#World Bicycle Day
No comments:
Post a Comment
If You Have any Doubts, let me Comment Here