LIST OF APPROVED SCHOOLS UPGRADED GOVERNMENT JUNIOR PRIMARY SCHOOLS TO GOVERNMENT SENIOR PRIMARY SCHOOLS IN THE STATE FOR 2024-25
ಈ ಮೇಲಿನ ವಿಷಯದನ್ವಯವಾಗಿ ವಿಷಯಾನ್ವಯವಾಗಿ ಉಲ್ಲೇಖ-1ರನ್ವಯ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ 2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸಿ (6-7/8ನೇ ತರಗತಿ) ಪ್ರಾರಂಭಿಸಲು ಮತ್ತು ಹಾಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿರುತ್ತದೆ.ಉಲ್ಲೇಖ-2ರನ್ವಯ ಸದರಿ ಸ್ವೀಕೃತ ಪ್ರಸ್ತಾವನೆಗಳನ್ನು ತಾಲ್ಲೂಕು/ಜಿಲ್ಲಾ/ವಿಭಾಗ ಹಂತದ ಪರಿಶೀಲನಾ ಸಮಿತಿಗಳು ನಿಗಧಿಪಡಿಸಿದ ಮಾನದಂಡಗಳಂತೆ ಪರಿಶೀಲಿಸಿ ಅಗತ್ಯ ಶಿಫಾರಸ್ಸಿನ ಮೂಲಕ ಪ್ರಸ್ತಾವನೆಗಳನ್ನು ಈ ಕಛೇರಿಗೆ ಸಲ್ಲಿಸಲಾಗಿರುತ್ತದೆ.
ಉಲ್ಲೇಖ-3ರನ್ವಯ ಸದರಿ ತಾಲ್ಲೂಕು/ಜಿಲ್ಲಾ/ವಿಭಾಗ ಹಂತದ ಸಮಿತಿಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಈ ಕಚೇರಿಯಿಂದ ಪುನರ್ ಪರಿಶೀಲಿಸಿ ಪ್ರಥಮ ಆಧ್ಯತೆ ಮೇಲೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ, ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಬೋಧನೆಗೆ ಶಿಕ್ಷಕರ ಲಭ್ಯತೆ ಇರುವ ಹಾಗೂ ಇಲಾಖೆ/ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಅರ್ಹವಿರುವ ಶಾಲೆಗಳನ್ನು ಪರಿಶೀಲಿಸಿ, ಪರಿಗಣಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಏಕ ಕಡತದ ಮೂಲಕ ಈ ಕೆಳಕಂಡಂತೆ ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.
2024-25ನೇ ಸಾಲಿಗೆ ರಾಜ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾಗಿ (6-7/8) ಉನ್ನತೀಕರಿಸಿ ಅನುಮೋದಿಸಿದ ಶಾಲೆಗಳ ಪಟ್ಟಿ ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಬಳಸಬಹುದು.
No comments:
Post a Comment
If You Have any Doubts, let me Comment Here