Regarding maintenance of primary school teacher service books of School Education Department
ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳ ನಿರ್ವಹಣೆ ಕುರಿತಂತೆ ಇಲಾಖೆ ಖಡಕ್ ಆದೇಶ ಮಾಡಿದೆ. ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಬಿ.ಬಿ ಕಾವೇರಿ ಅವರು ಆದೇಶ ಹೊರಡಿಸಿದ್ದು, ಶಾಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಸೇವಾ ಪುಸ್ತಕಗಳಲ್ಲಿ ಆಯಾ ವರ್ಷ ನೀಡಿದ ಸೇವಾ ಪ್ರಾಥಮಿಕ ಕರ್ತವ್ಯ ಸೌಲಭ್ಯಗಳ ವಿವರವನ್ನು ಸೂಕ್ತವಾಗಿ ದಾಖಲಿಸಿ ದೃಡೀಕರಿಸುವುದು ವೇತನ ಬಟವಾಡೆ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
ಈ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 398, 407 ಹಾಗೂ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021 ರಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ ಎಂದಿದ್ದಾರೆ.
ಆದರೆ, ಕೆಲವೊಂದು ಬಟವಾಡೆ ಅಧಿಕಾರಿಗಳು ವೇತನ ಬಡ್ತಿ, ರಜೆ ಇನ್ನಿತರ ಸೇವಾ ಸೌಲಭ್ಯಗಳ ಬಗ್ಗೆ ಸೇವಾ ಪುಸ್ತಕಗಳಲ್ಲಿ ನಮೂದಿಸಿ ದೃಡೀಕರಿಸದೇ, ಆರ್ಥಿಕ ಸೌಲಭ್ಯವನ್ನು ವೇತನದಲ್ಲಿ ಸಂದಾಯ ಮಾಡುತ್ತಿದ್ದಾರೆ. ನಂತರ ಅಂತಹ ವಿವರಗಳನ್ನು ಸೇವಾ ಪುಸ್ತಕದಲ್ಲಿ ಇಂಧೀಕರಿಸಿ, ದೃಡೀಕರಿಸುವ ಪೂರ್ವದಲ್ಲಿ ಬಟವಾಡೆ ಅಧಿಕಾರಿಗಳು ವರ್ಗಾವಣೆಗೊಂಡಲ್ಲಿ ಮುಂದೆ ಹಾಜರಾಗುವ ಬಟವಾಡ ಅಧಿಕಾರಿಗಳು ಅವುಗಳನ್ನು ದೃಡೀಕರಿಸಲು ನಿರಾಕರಿಸಬಹುದು. ಇದರಿಂದ ಶಿಕ್ಷಕರುಗಳಿಗೆ ಮುಂದಿನ ಸೇವಾ ಸೌಲಭ್ಯಗಳನ್ನು ನೀಡಲು ತೊಂದರೆಯಾಗುತ್ತಿರುವ ಬಗ್ಗೆ ಉಲ್ಲೇಖಿತ ಪತ್ರದಲ್ಲಿ ವಿವರಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಪಯುಕ್ತ, ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷಕರು ವಾರ್ಷಿಕ ವೇತನ ಬಡ್ತಿ, ಸ್ನಾನವನ್ನ ಬಡ್ತಿ, ವಿಶೇಷ ಬಡ್ತಿ, ರಜೆ ಸೌಲಭ್ಯ ಸೇರಿದಂತೆ ಇನ್ನಿತರ ಯಾವುದೇ ಸೇವಾ ಸೌಲಭ್ಯಗಳನ್ನು ಮಂಜೂರಾತಿ ಆದೇಶಗಳ ವಿವರಗಳೊಂದಿಗೆ ಸೇವಾ ಪುಸ್ತಕಗಳಲ್ಲಿ ಸೂಕ್ತವಾಗಿ ದಾಖಲಿಸಿ ದೃಡೀಕರಿಸಿದ ನಂತರದಲ್ಲಿ ನಿಯಮಾನುಸಾರ ಸೌಲಭ್ಯಗಳನ್ನು ನೀಡಲು ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಹಿಂದಿನ ಎಲ್ಲಾ ಸೇವಾ ಪುಸ್ತಕಗಳಲ್ಲಿ ಅಪೂರ್ಣವಾಗಿರುವ ಮಾಹಿತಿಯನ್ನು ಪ್ರಸ್ತುತ ವೇತನ ಬಟವಾಡ ಅಧಿಕಾರಿ/ಸಕ್ಷಮ ಪ್ರಾಧಿಕಾರಿಯವರು ಪೂರಕ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದೃಡೀಕರಿಸಲು ಅಗತ್ಯ ಕ್ರಮವಹಿಸಲು ತಿಳಿಸಿದ್ದಾರೆ.
No comments:
Post a Comment
If You Have any Doubts, let me Comment Here