Nandini Milk Price Hike
ಕೆಎಂಎಫ್ ನಿಂದ ರಾಜ್ಯಾಧ್ಯಂತ ನಂದಿನಿ ಹಾಲಿನ ( Nandini Milk ) ದರ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿನ್ನಲೆಯಲ್ಲಿ ನಂದಿನಿ ವಿವಿಧ ಹಾಲಿನ ದರಗಳು ನಾಳೆಯಿಂದ ಹೆಚ್ಚಳವಾಗಲಿದ್ದಾವೆ.
ಈ ಕುರಿತಂತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ( KMF) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಹಕಾರ ಹಾಲು ಮಹಾಮಂಡಳವಾಗಿ ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ರಾಷ್ಟ್ರದಲ್ಲಿಯೇ ಎರಡನೆಯ ದೊಡ್ಡ ಮಹಾಮಂಡಳವಾಗಿದ್ದು, ದಕ್ಷಿಣ ಭಾರತದ ಕಾರ್ಯನಿರ್ವಹಿಸುತ್ತಿರುತ್ತದೆ. ಕಹಾಮವು ಕಳೆದ 05 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, "ಗೋವಿನಿಂದ ಗ್ರಾಹಕರವರೆಗೆ" ಎಂಬ ಶೀರ್ಷಿಕೆಯನ್ನು ಹೊತ್ತು "ನಂದಿನಿ" ಬ್ಯಾಂಡ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ ಎಂದಿದೆ.
ಪ್ರಸ್ತುತ ಸುಗ್ಗಿ ಕಾಲವಾಗಿರುವುದರಿಂದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್‌ಗಳ ಹತ್ತಿರ ತಲುಪಿರುತ್ತದೆ, ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500) ಮತ್ತು ಒಂದು ಲೀಟರ್ (2000ML) ಪ್ಯಾಕೇಟ್‌ಗಳಿಗೆ ಮಾತ್ರ 50 ಮಿಲಿ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೇಟ್‌ಗಳ ದರವನ್ನು ರೂ.2/-ರಂತೆ ಹೆಚ್ಚಳ ಮಾಡಲಾಗುತ್ತಿದೆ. ಅದರ ಅನ್ವಯ ನಂದಿನಿ ಹಾಲಿನ ವಿವಿಧ ಮಾದರಿಗಳ ಪ್ರಮಾಣ ಹಾಗೂ ಮಾರಾಟ ದರ ಈ ಕೆಳಕಂಡಂತೆ ಇರುತ್ತದೆ ಅಂತ ತಿಳಿಸಿದೆ.
ಯಾವ ನಂದಿನಿ ಹಾಲಿಗೆ ಏಷ್ಟು ಬೆಲೆ ಹೆಚ್ಚಳ? ಇಲ್ಲಿದೆ ಡೀಟೆಲ್ಸ್
ಟೋನ್ಡ್ ಹಾಲಿನ ಬೆಲೆ 500 ಎಂಎಲ್ ಗೆ ರೂ.22 ಇದ್ದದ್ದು 24 ರೂ ಆಗಲಿದೆ. 1 ಲೀಟರ್ ಬೆಲೆ ರೂ.42ರಿಂದ 44ಕ್ಕೆ ಏರಿಕೆಯಾಗಲಿದೆ.
ಹೋಮೋಜಿನೈಸ್ಡ್ ಟೋನ್ಡ್ ಹಾಲು ಅರ್ಧ ಲೀಟರ್ ರೂ.22ರಿಂದ 24ಕ್ಕೆ ಏರಿಕೆಯಾದ್ರೇ, ಒಂದು ಲೀಟರ್ ಹಾಲಿನ ದರ ರೂ.43ರಿಂದ 45 ಆಗಲಿದೆ.
ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್ ರೂ.24ರಿಂದ 26 ರೂ ಆದ್ರೇ, 1 ಲೀಟರ್ ಹಾಲಿನ ಬೆಲೆ ರೂ.46ರಿಂದ 48 ಆಗಲಿದೆ.
ಸ್ಪೆಷಲ್ ಅರ್ಧ ಲೀಟರ್ ಹಾಲು ರೂ.25ರಿಂದ 27, 1 ಲೀಟಲ್ ರೂ.48 ರಿಂದ 50 ರೂ ಆಗಲಿದೆ.
ಶುಭಂ ಹಾಲು ಅರ್ಧ ಲೀಟರ್ ಗೆ ರೂ.25 ಇದ್ದದ್ದು 27 ಆಗಲಿದೆ. 1 ಲೀಟರ್ ಬೆಲೆ 48 ರಿಂದ 50 ರೂಗೆ ಏರಿಕೆಯಾಗಲಿದೆ.
ಸಮೃದ್ಧಿ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28, 1 ಲೀಟರ್ ಗೆ ರೂ.51 ರಿಂದ 53ಕ್ಕೆ ಹೆಚ್ಚಳ ಆಗಲಿದೆ.
ಹೋಮೋಜಿನೈಸ್ಡ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ ರೂ.25ರಿಂದ 27 ಆದ್ರೇ, 1 ಲೀಟರ್ ಬೆಲೆ ರೂ.49 ರಿಂದ 51ಕ್ಕೆ ಏರಿಯಾಗಲಿದೆ.
ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ ರೂ.28ರಿಂದ 30ಕ್ಕೆ, 1 ಲೀಟರ್ ಬೆಲೆ ರೂ.55 ರಿಂದ ರೂ.57ಕ್ಕೆ ಹೆಚ್ಚಳವಾಗಲಿದೆ.
ಶುಭಂ ಗೋಲ್ಡ್ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28ಕ್ಕೆ ಏರಿಕೆಯಾದ್ರೇ, 1 ಲೀಟರ್ ಹಾಲಿನ ಬೆಲೆ ರೂ.49ರಿಂದ 51 ಆಗಲಿದೆ.
ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 21 ರೂನಿಂದ 23ಕ್ಕೆ, 1 ಲೀಟರ್ ಬೆಲೆ ರೂ.41ರಿಂದ 43ಕ್ಕೆ ಏರಿಕೆಯಾಗಲಿದೆ.
ಹೊಸ ದರವು ದಿನಾಂಕ:26.06.2024 ರಿಂದ ಅನ್ವಯವಾಗುತ್ತದೆ, ಈ ಆದೇಶವು ಮುಂದಿನ ಆದೇಶದ ವರೆಗೂ ಚಾಲ್ತಿಯಲ್ಲಿರುತ್ತದೆ.
ಒಕ್ಕೂಟಗಳಲ್ಲಿ ಹಳೆಯ ಪರಿಮಾಣ/ದರ ಮುದ್ರಿತವಾಗಿರುವ ಹಾಲಿನ ಪ್ಯಾಕೇಟುಗಳ ದಾಸ್ತಾನಿದ್ದು, ದಾಸ್ತಾನು ಮುಗಿಯುವವರೆಗೂ ಹಳೆಯ ಮುದ್ರಿತ ಪರಿಮಾಣ ಪ್ಯಾಕೇಟುಗಳಲ್ಲಿ ಹಾಲು ಸರಬರಾಜಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಿದೆ.
No comments:
Post a Comment
If You Have any Doubts, let me Comment Here