Regarding the payment of interest on the amount transferred to GPF in excess of Rs.5.00 lakhs during the financial year 2023-24 in the cases of General Provident Fund subscribers of Karnataka State Government.
ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ (General Provident Fund) ಚಂದಾದಾರರ ಪ್ರಕರಣಗಳಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ಗಳಿಗೂ ಮೀರಿ ಜಿಪಿಎಫ್ ವಂತಿಗೆ ಕಟಾವಣೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು (GPF Interest) ಪಾವತಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ.ಧಾಯಪುಲೆ ಅವರು ಆದೇಶ ಹೊರಡಿಸಿದ್ದು, 2023-24 ನೇ ಸಾಲಿಗೆ ಅನ್ವಯಿಸುವಂತೆ ಕರ್ನಾಟಕ ರಾಜ್ಯದ ಜಿಪಿಎಫ್ ಚಂದಾದಾರರ ಖಾತೆಗಳಿಗೆ 5 ಲಕ್ಷ ರೂ. ಮೀರಿ ಜಮಾವಣೆ ಮಾಡಿರುವ ಮೊತ್ತಕ್ಕೆ ಆದಾಯ ತೆರಿಗೆ ಅನ್ವಯಿಕೆಗೊಳಪಟ್ಟು ಬಡ್ಡಿಯನ್ನು ಪಾವತಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ. ಅದರಂತೆ ಖಜಾನೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ತಿಳಿಸಿದ್ದಾರೆ.
GPFಕರ್ನಾಟಕ-ರಾಜ್ಯ-ಸರ್ಕಾರದ-ಸಾಮಾನ್ಯ-ಭವಿಷ್ಯ-ನಿಧಿ-ಚಂದಾದಾರರ-ಪ್ರಕರಣಗಳಲ್ಲ.
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ರಾಜ್ಯ ಸರ್ಕಾರವು ಈ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ನೌಕರರು ಮಾಸಿಕ ವಂತಿಗೆಯನ್ನು ಪಾವತಿಸುವ ಮೂಲಕ ಈ ನಿಧಿಯ ಚಂದಾದಾರಾಗಬಹುದು. ತಾವು ಹೊಂದಿರುವ ಹುದ್ದೆಯ ಗರಿಷ್ಠ ಮೂಲ ವೇತನಕ್ಕೆ ಒಳಪ್ಟಟ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿನ ವಂತಿಗೆಯನ್ನು ಆಯ್ಕೆಮಾಡಿಕೊಳ್ಳಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 01-04-2006 ಕ್ಕಿಂತ ಮೊದಲು ರಾಜ್ಯದ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರು ಈ ಭವಿಷ್ಯ ನಿಧಿಯ ವಂತಿಕೆದಾರರಾಗಿರುತ್ತಾರೆ. 2024ರ ಜನವರಿ 1ರಿಂದ ಮಾರ್ಚ್ 31ರವರೆಗೆ ಶೇ.7.1 ಬಡ್ಡಿ ದರ ನಿಗದಿಯಾಗಿತ್ತು.
ಸಾಮಾನ್ಯ ಭವಿಷ್ಯ ನಿಧಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳು ನೌಕರರು ಇಂತಿಷ್ಟು ಎಂದು ತಮ್ಮ ವೇತನದಲ್ಲಿ ಹಣವನ್ನು ಇದಕ್ಕೆ ತೆಗೆದಿರಿಸುತ್ತಾರೆ. ಹೀಗೆ ಸಂಗ್ರಹವಾದ ಮೊತ್ತವನ್ನು ಅಗತ್ಯವಿರುವಾಗ ನೌಕರರು ಮನೆ ಅಥವಾ ನಿವೇಶನ ಕೊಳ್ಳುವ ಸಂದರ್ಭದಲ್ಲಿ, ಮನೆ ಕಟ್ಟುವಾಗ, ಮದುವೆಯಾಗುವ, ಕಾರು ಕೊಳ್ಳುವಾಗ ಅಥವಾ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿರುತ್ತದೆ. ಪಡೆದುಕೊಳ್ಳಬಹುದು, ಇಲ್ಲವೇ, ನಿವೃತ್ತಿ ಸಂದರ್ಭದಲ್ಲಿ ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ. ಮಹಾಲೇಖಪಾಲಕರ ಕಚೇರಿಯು ಈ ನಿಧಿಯನ್ನು ನಿರ್ವಹಿಸುತ್ತದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಈ ನಿಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಈಗ ಜಿಪಿಎಫ್ ಅನ್ನು ಕಾರು, ಸ್ಕೂಟರ್‌ನಂಥ ಗ್ರಾಹಕೋತ್ಪನ್ನಗಳ ಖರೀದಿ ಸಲುವಾಗಿಯೂ ಬಳಸಬಹುದಾಗಿದೆ. ಈ ಹೊಸ ನಿಯಮದ ಪ್ರಕಾರ ಜಿಪಿಎಫ್‌ನಿಂದ ಹಣ ತೆಗೆಯುವ ಸಂದರ್ಭದಲ್ಲಿ ಅದನ್ನು ಮಂಜೂರು ಮಾಡುವ ಮತ್ತು ಕೈಗೆ ನೀಡುವ ಅವಧಿಯನ್ನು 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅನಾರೋಗ್ಯದಂಥ ತುರ್ತು ಸಂದರ್ಭಗಳಲ್ಲಿ 7 ದಿನದೊಳಗೆ ಹಣವನ್ನು ಪಡೆಯಬಹುದಾಗಿದೆ.
No comments:
Post a Comment
If You Have any Doubts, let me Comment Here