JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, June 22, 2024

government has given permission to start pre-primary classes in primary schools

  Jnyanabhandar       Saturday, June 22, 2024
The state government has given permission to start pre-primary classes in primary schools

ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿ ಆದೇಶ.

ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮತಿಸಿ ಆದೇಶಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಕುರಿತು..


1. ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ 2023-24 ಹಾಗೂ 2024 25ನೇ ಸಾಲಿನ ವಾರ್ಷಿಕ ಯೋಜನಾ ಮಂಡಳಿ ಅನುಮೋದನೆಯ 3:17-04-2023 3 15-04-2024.
2. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರ ಏಕ ಕಡತ ಸಂಖ್ಯೆ: SSK/Prpy/PAB/4/2024-JDQ.
ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಮೇಲೆ ಓದಲಾದ ಕ್ರಮಾಂಕ (1)ರ ನಡವಳಿಯನ್ವಯ ಅನುಮೋದನೆ ನೀಡಲಾಗಿರುತ್ತದೆ.
ಅದರಂತೆ, 2023-24 ನೇ ಸಾಲಿನಲ್ಲಿ ರಾಜ್ಯದ ಆಯ್ದ 262 ಮತ್ತು 2024-25ನೇ ಸಾಲಿನಲ್ಲಿ 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ನೀಡುವಂತೆ ಕೋರಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಮೇಲೆ ಓದಲಾದ ಕ್ರಮಾಂಕ (2)ರ ಏಕ ಕಡತದಲ್ಲಿ ಸರ್ಕಾರಕ್ಕೆ ಪುಸ್ತಾವನೆ ಸಲ್ಲಿಸಿರುತ್ತಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ದೊರಕಿದ್ದು, ಅನುಬಂಧಗಳಲ್ಲಿರುವಂತೆ 2024-25ನೇ ಸಾಲಿನಿಂದ ಕ್ರಮವಾಗಿ ರಾಜ್ಯದ 262 ಮತ್ತು 316 ಒಟ್ಟು 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ನೀಡಿ ಆದೇಶಿಸಿದೆ.

ಮುಂದುವರೆದು, ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುವ ಸಂಬಂಧದಲ್ಲಿ ಈ ಕೆಳಗಿನಂತೆ ವಿವರವಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು-
1. 2024-25ನೇ ಸಾಲಿನ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳತಕ್ಕದ್ದು,

2. 2024-25ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿಯವರು ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪುಚಾರವನ್ನು ಮಾಡತಕ್ಕದ್ದು.
3. 2024-25ನೇ ಸಾಲಿನ ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲುಮಾಡಿಕೊಳ್ಳುವುದು. ಈ ವಿಭಾಗ ಪ್ರಾರಂಭಿಸಲು 4 ವರ್ಷದಿಂದ 5 ವರ್ಷದ ವಯೋಮಾನದ ಕನಿಷ್ಠ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು ಹಾಗೂ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸತಕದ್ದು.
4. ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿಕೊಳ್ಳುವುದು ಹಾಗೂ ಕೊಠಡಿ ಸಜ್ಜುಗೊಳಿಸುವುದು ಅವಶ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸುವುದು. ಕೊಠಡಿ ಸಜ್ಜುಗೊಳಿಸಲು ಸ್ಥಳಿಯ ಚಿತ್ರಕಲಾ ಶಿಕ್ಷಕರನ್ನು / ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾದ ಚಿತ್ರಗಳ ರಚನೆ, ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳು ಬರೆಯಲು/ ಚಿತ್ರ ರಚಿಸಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ/ಕರಿಹಲಗೆ ರಚನೆ ಮುಂತಾದ ಕಾರ್ಯಗಳನ್ನು ಮಾಡುವುದು, ಖರೀದಿಸಬೇಕಾದ ಸಾಧನ ಸಾಮಗ್ರಿಗಳ ಪಟ್ಟಿಯನ್ನು ಹಾಗೂ ಕೆಲವು ಕೊಠಡಿಯ ವಿನ್ಯಾಸದ ಕೆಲವು ಮಾದರಿ ಉದಾಹರಣೆಗಳನ್ನು ಕೂಡಲೇ ಒದಗಿಸತಕ್ಕದ್ದು.
5. ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕಿ/ಶಿಕ್ಷಕ ಮತ್ತು ಒಬ್ಬರು ಆಯಾರವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳುಗಳ ಅವಧಿಗೆ ನೇಮಕ ಮಾಡಿಕೊಳ್ಳತಕ್ಕದ್ದು. ಪೂರ್ವ ಪ್ರಾಥಮಿಕ ತರಗತಿ_ಶಿಕ್ಷಕಿ/ಶಿಕ್ಷಕರಿಗೆ ಪುಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ ರೂ. 10,000.00 ಮತ್ತು ಆಯಾ ಇವರಿಗೆ ಮಾಸಿಕ ರೂ. 5000.00 ಸಂಭಾವನೆಯನ್ನು ನಿಗದಿಪಡಿಸತಕ್ಕದ್ದು.
6. ವೇತನ ಅನುದಾನವನ್ನು ಆಯಾ ಎಸ್.ಡಿ.ಎಂ.ಸಿ. ಖಾತೆಗೆ ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಿಂದ ಬಿಡುಗಡೆ ಮಾಡತಕ್ಕದ್ದು.
ಶಿಕ್ಷಕಿ/ಶಿಕ್ಷಕರನ್ನು ಮತ್ತು ಆಯಾರವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಈ ಕೆಳಗಿನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.


logoblog

Thanks for reading government has given permission to start pre-primary classes in primary schools

Previous
« Prev Post

No comments:

Post a Comment

If You Have any Doubts, let me Comment Here