*ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿ ಎಂದರೇನು?*
ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್ 8ರಲ್ಲಿ ವೈಯಕ್ತಿಕ ಮಾಹಿತಿ ಎಂದರೇನು
ಎಂಬ ಬಗ್ಗೆ ವ್ಯಾಖ್ಯಾನವನ್ನು ನೀಡಲಾಗಿದೆ.
ಸೆಕ್ಷನ್ 8(1) (ಇ): ತನ್ನ ನಂಬಿಕೆಯ ವಿಶ್ವಾಸದ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ
ದೊರಕುವ ಮಾಹಿತಿ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ
ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು,
ಸೆಕ್ಷನ್ 8(1) (ಜಿ) : ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಯಾರೇ
ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತದೆಯೋ ಅಂಥ
ಮಾಹಿತಿ ಅಥವಾ ಕಾನೂನು ಜಾರಿಯ ಅಥವಾ ಭದ್ರತೆಯ ಉದ್ದೇಶಗಳಿಗಾಗಿ ರಹಸ್ಯವಾಗಿ
ನೀಡಿದ ಮಾಹಿತಿಯ ಅಥವಾ ಸಹಾಯದ ಮೂಲವನ್ನು ಗುರುತಿಸಬಹುದಾದಂಥ
ಮಾಹಿತಿ,
ಸೆಕ್ಷನ್ 8(1)(ಜೆ) ಯಾವ ಮಾಹಿತಿಯನ್ನು ಬಹಿರಂಗಪಡಿಸುವುದು ಬಹು
ಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ
ಹೊರತು ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ
ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ
ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ
ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿ.
ಸರ್ವೋಚ್ಚ ನ್ಯಾಯಾಲಯ ಎಸ್.ಎಲ್.ಪಿ.(ಸಿವಿಲ್) ನಂ. 27734/2012
(ಸಿ.ಸಿ.14781/2012) ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವ
ಬಗ್ಗೆ ನೀಡಿದ ಆದೇಶದ ಮುಖ್ಯಾಂಶಗಳು ಈ ರೀತಿ ಇದೆ:
“ಮೂರನೇ ಪ್ರತಿವಾದಿಗೆ ನೀಡಿದ ಶೋಕಾಸ್ (ಕಾರಣ ಕೇಳುವ) ನೋಟೀಸ್,
ಶಿಸ್ತುಕ್ರಮಕ್ಕೆ ಸಂಬಂಧಿಸಿದ ಮಾಹಿತಿಗಳು ಮತ್ತು ಅರ್ಜಿದಾರರು ಕೇಳಿದ ಇನ್ನಿತರ
ಮಾಹಿತಿಗಳನ್ನು ಸೆಕ್ಷನ್ 8(1)(ಜೆ) ಅನ್ವಯ ವೈಯಕ್ತಿಕ ಮಾಹಿತಿಗಳೆಂದು ಕೇಂದ್ರ ಮಾಹಿತಿ
ಆಯೋಗ ಹಾಗು ಕೆಳನ್ಯಾಯಾಲಯಗಳು ನೀಡಿದ ಆದೇಶಗಳನ್ನು ನಾವು ಒಪ್ಪುತ್ತೇವೆ.
ಒಬ್ಬ ಸರ್ಕಾರಿ ನೌಕರನ ಕಾರ್ಯವೈಖರಿಗೆ ಸಂಬಂಧಿಸಿದ ಮಾಹಿತಿಗಳು ನೌಕರನ
ಹಾಗು ಆತನನ್ನು ನೇಮಿಸಿದ ಸಂಸ್ಥೆಗೆ ಹಾಗೂ ಸೇವಾನಿಯಮಗಳಿಗೆ ಸಂಬಂಧಿಸಿದ್ದ
ವಿಷಯಗಳಾಗಿದ್ದು ವೈಯಕ್ತಿಕ ಮಾಹಿತಿ ಎನಿಸಿಕೊಳ್ಳುತ್ತದೆ. ಅವುಗಳನ್ನು
ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿರುವುದಿಲ್ಲ. ಆದರೂ
ಈ ಪ್ರಕರಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೊದಲನೆ ಮೇಲ್ಮನವಿ
ಅಧಿಕಾರಿ ಕೇಳಿರುವ ಮಾಹಿತಿಗಳು ಬಹುಜನರ ಸಾರ್ವಜನಿಕ ಹಿತಾಸಕ್ತಿಗೆ
ಸಂಬಂಧಪಟ್ಟಿವೆಯೆಂಬುದು ಮನವರಿಕೆಯಾದರೆ ಸೂಕ್ತ ಆದೇಶವನ್ನು ಹೊರಡಿಸಬಹುದು
ಆದರೆ ಅರ್ಜಿದಾರರು ಈ ಮಾಹಿತಿಗಳನ್ನು ಪಡೆಯುವುದು ತಮ್ಮ ಹಕ್ಕೆಂದು ಸಾಧಿಸುವಂತಿಲ್ಲ.”
(ಪ್ಯಾರಾ. 13).
“ಒಬ್ಬ ವ್ಯಕ್ತಿಯು ತನ್ನ ಆದಾಯಕರ ವಿವರಗಳ ಪಟ್ಟಿಯಲ್ಲಿ (ಇನ್‌ಕಮ್ ಟ್ಯಾಕ್ಸ್
ರಿಟರ್ನ್) ಸಲ್ಲಿಸಿರುವ ವಿವರಗಳು ಮಾಹಿತಿ ಹಕ್ಕು ಕಾನೂನಿನ ಸೆಕ್ಷನ್ 8(1)(ಜೆ)
ಅನ್ವಯ ವೈಯಕ್ತಿಕ ಮಾಹಿತಿಗಳೆನಿಸಿದ್ದು ಅಂಥಹವುಗಳನ್ನು ಬಹಿರಂಗಗೊಳಿಸುವುದರಿಂದ
ವಿನಾಯಿತಿ ನೀಡಲಾಗಿದೆ. ಆದರೆ ಅಂಥಹ ಮಾಹಿತಿಗಳನ್ನು ಬಹುಜನರ ಸಾರ್ವಜನಿಕ
ಹಿತಾಸಕ್ತಿಯಿಂದ ಬಹಿರಂಗಗೊಳಿಸುವುದು ಸೂಕ್ತ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ
ಅಥವಾ ಮೊದಲನೆ ಮೇಲ್ಮನವಿ ಅಧಿಕಾರಿ ಅಭಿಪ್ರಾಯಪಟ್ಟರೆ ಅದನ್ನು
ಬಹಿರಂಗಗೊಳಿಸಬಹುದು.” (ಪ್ಯಾರಾ 14).
“ಸದರಿ ಪ್ರಕರಣದಲ್ಲಿ ಅರ್ಜಿದಾರರು ಮಾಹಿತಿ ಕೇಳಿರುವ ಹಿಂದೆ ಇರುವ ಯಾವುದೇ
ಸಾರ್ವಜನಿಕ ಹಿತಾಸಕ್ತಿಯನ್ನು ನಿರೂಪಿಸಿಲ್ಲದಿರುವುದರಿಂದ ಅಂಥಹ ಮಾಹಿತಿಯನ್ನು
ಬಹಿರಂಗಗೊಳಿಸುವುದು ಸೆಕ್ಷನ್ 8(1)(ಜೆ) ಅನ್ವಯ ವಿನಾಕಾರಣ ವ್ಯಕ್ತಿಯ ಖಾಸಗಿ
ಬದುಕಿನ ಹರಣವೆನಿಸುವುದು.” (ಪ್ಯಾರಾ 15).
- “ಅರ್ಜಿದಾರರು ಮಾಹಿತಿ ಕೇಳಿರುವ ಬಗ್ಗೆ ಇರುವ ಸಾರ್ವಜನಿಕ ಹಿತಾಸಕ್ತಿಯನ್ನು
ಸಾಬೀತುಪಡಿಸಲು ವಿಫಲರಾಗಿರುತ್ತಾರೆ. ಈ ಸನ್ನಿವೇಶದಲ್ಲಿ ಅರ್ಜಿಯನ್ನು ಪುರಸ್ಕರಿಸಲು
ಇಚ್ಚಿಸುವುದಿಲ್ಲ. ಆದುದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ. (ಪ್ಯಾರಾ 16).
ಸರ್ವೋಚ್ಚನ್ಯಾಯಾಲಯದ ಈ ಆದೇಶ ಕೆಳಕಂಡ ಮಾಹಿತಿಗಳನ್ನು ಮಾಹಿತಿ
ಹಕ್ಕಿನಲ್ಲಿ ಬಹಿರಂಗಪಡಿಸಬಹುದೆಂದು ಸೂಚಿಸುತ್ತದೆ.
1. ಉದ್ಯೋಗ ನೇಮಕಾತಿ ಪತ್ರ,
2. ಮೇಲಧಿಕಾರಿಯಾಗಿ ಬಡ್ತಿ ನೀಡಿ ಹೊರಡಿಸಿದ ಆದೇಶ.
3. ನೌಕರನ ವರ್ಗಾವಣೆ ಆದೇಶ.
ಉಚ್ಚನ್ಯಾಯಾಲಯದ ಈ ಆದೇಶ ಕೆಳಕಂಡ ಮಾಹಿತಿಗಳನ್ನು ಮಾಹಿತಿ ಹಕ್ಕಿನಲ್ಲಿ
ಅರ್ಜಿದಾರರು ಮಾಹಿತಿ ಪಡೆಯುವಲ್ಲಿನ ಸಾರ್ವಜನಿಕ ಹಿತಾಸಕ್ತಿಯನ್ನು ಸಾಬೀತುಪಡಿಸಿದರೆ
ಮಾತ್ರ ಬಹಿರಂಗಪಡಿಸಬಹುದೆಂದು ಸೂಚಿಸುತ್ತದೆ:
1. ಸರ್ಕಾರಿ ನೌಕರ ಪಡೆಯುತ್ತಿರುವ ವೇತನ ಹಾಗು ವೇತನದಿಂದ ಕಟಾಯಿಸುತ್ತಿರುವ
ಹಣದ ವಿವರ,
2. ನೌಕರನಿಗೆ ನೀಡಿರುವ ಮೆಮೋಗಳು, ಕಾರಣ ಕೇಳಿ ನೀಡಿದ ನೋಟೀಸುಗಳು.
3, ನೌಕರನು ಸಲ್ಲಿಸಿರುವ ಆಸ್ತಿ ಮತ್ತು ಋಣಭಾರದ ವಿವರ.
4. ನೌಕರನು ಹಣ ಹೂಡಿಕೆ ಮಾಡಿರುವ ದಾಖಲೆಗಳ ವಿವರ.
5. ನೌಕರನು ಪಡೆದಿರುವ ದಾನ, ಬಹುಮಾನ, ಕೊಡುಗೆಗಳ ವಿವರ.
6, ನೌಕರನು ಹೊಂದಿರುವ ಸ್ಥಿರ ಮತ್ತು ಚರ ಆಸ್ತಿಗಳ ವಿವರ.
7. ನೌಕರನ ವಿರುದ್ಧ ನಡೆಸಿದ ತನಿಖಾ ವರದಿಗಳ ಪ್ರತಿ.
@******************************@
No comments:
Post a Comment
If You Have any Doubts, let me Comment Here