BSF Recruitment 2024
ಗಡಿ ಭದ್ರತಾ ಪಡೆಯಲ್ಲಿ (BSF) ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಒಂದೂವರೆಗೆ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗಡಿ ಭದ್ರತಾ ಪಡೆಯಲ್ಲಿ ಹೆಡ್ ಕಾನ್ಸ್ಟೇಬಲ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಸೇರಿದಂತೆ ಬರೋಬ್ಬರಿ 1526 ಖಾಲಿ ಇವೆ.
ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಗೆ ಜುಲೈ 8 ಕೊನೆಯ ದಿನವಾಗಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಕೆಗೆ ಮೊದಲು ವೇತನ, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ನೇಮಕಾತಿ ಎಲ್ಲಿ?: ಬಿಎಸ್‌ಎಫ್
ಹುದ್ದೆ ಹೆಸರು: ಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಮತ್ತು ವಾರಂಟ್ ಆಫೀಸರ್ : 243
ಹೆಡ್ ಕಾನ್ಸ್ಟೇಬಲ್ ಮತ್ತು ಹವಿಲ್ದಾರ್ (ಕ್ಲರ್ಕ್)-: 1283
ಒಟ್ಟು ಹುದ್ದೆ: 1526
ಅರ್ಜಿ ಸಲ್ಲಿಕೆ ಕೊನೆಯ ದಿನ: ಜುಲೈ 8, 2024
ಮಾಸಿಕ ವೇತನ
ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಬಹುದು. ಸದ್ಯ ವೇತನ ನಿಗದಿಪಡಿಸಿಲ್ಲ. ಅಭ್ಯರ್ಥಿ ಅನುಭವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಮಾಹಿತಿ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ, ದೈಹಿಕ ಮಾನದಂಡಗಳ ಪರೀಕ್ಷೆ ನಡೆಸಲಾಗುವುದು. ಟೈಪಿಂಗ್/ಸ್ಟೆನೋ ಒಳಗೊಂಡ ಕೌಶಲ್ಯ ಪರೀಕ್ಷೆ ನಡೆಸಿ ಇಲ್ಲಿ ಆಯ್ಕೆ ಆಗುವವರಿಗೆ ಅಂತಿಮದಲ್ಲಿ ದಾಖಲಾತಿ ಪರಿಶೀಲಿಸಲಾಗುವುದು. ಈ ವೇಳೆ ವೈದ್ಯಕೀಯ ಪರೀಕ್ಷೆ ಸಹ ಇರಲಿದೆ ಎಂದು ಬಿಎಸ್‌ಎಫ್ ಅಧಿಸೂಚನೆ ತಿಳಿಸಿದೆ.
ಯಾವುದೇ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆ ದಿನದವರೆಗೂ ಕಾಯದೇ ಈಗಲೇ ಅರ್ಜಿ ಹಾಕಿದರೆ ಉತ್ತಮ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ಮೊದಲು ನೀವು ಇಲ್ಲಿ ನೀಡಲಾಗಿರುವ ಅಧಿಕೃತ ವೆಬ್ಸೈಟ್ https://rectt.bsf.gov.in ಗೆ ಭೇಟಿ ನೀಡಬೇಕು. ಈ ಲಿಂಕ್ ಮೂಲಕ ನೀವು ಈ ಕೂಡಲೇ ಸೂಕ್ತ ದಾಖಲೆಗಳ ಸಮೇತರಾಗಿ ಅರ್ಜಿ ಹಾಕಬೇಕು.
No comments:
Post a Comment
If You Have any Doubts, let me Comment Here