Government order regarding permission to start English medium classes along with existing Kannada/other medium in government primary schools for the year 2024-25
Bilingual Section in Government Schools For the Year 2024-25
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ 1ನೇ ತರಗತಿಯಿಂದಲೇ ಕನ್ನಡ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಶಿಕ್ಷಣ ನೀಡುವ ಸಲುವಾಗಿ 1,419 ಶಾಲೆಗಳನ್ನು ಆರಂಭಕ್ಕೆ ರಾಜ್ಯ ಸರ್ಕಾರ ಆದೇಶಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಲ್ಯಾಣ ಕರ್ನಾಟಕದ ವಿಭಾಗದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಪ್ರಗತಿಯನ್ನು ಸಾಧಿಸಲು ಪ್ರಾಥಮಿಕ ಹಂತದಲ್ಲಿಯೇ/ಆರಂಭಿಕ ಹಂತದಿಂದಲೇ ʼಭದ್ರ ಬುನಾದಿʼಯನ್ನು ಹಾಕುವ ನಿಟ್ಟಿನಲ್ಲಿ 2024-25ನೇ ಸಾಲಿನಿಂದ ಅರ್ಹ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳನ್ನು ರಾಜ್ಯದ 1419 ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ.
ರಾಜ್ಯ ಸರ್ಕಾರ 2024-25ನೇ ಸಾಲಿನಿಂದ ರಾಜ್ಯಾದ್ಯಂತ 75ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ (ದ್ವಿ ಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲು ಒಪ್ಪಿಗೆ ನೀಡಿ ಆದೇಶಿಸಿದೆ.
ಆಯ್ಕೆಯಾಗಿರುವ ಶಾಲೆಗಳ ಪೈಕಿ ಕಲಬುರಗಿ ಪ್ರಾದೇಶಿಕ ವಿಭಾಗದ 872, ಬೆಂಗಳೂರು ವಿಭಾಗದ 297, ಮೈಸೂರು ವಿಭಾಗದ 140 ಮತ್ತು ಧಾರವಾಡ ವಿಭಾಗದ 110 ಶಾಲೆಗಳು ಸೇರಿವೆ.
ದಿನಾಂಕ: 15.06.2024ರ ಸರ್ಕಾರ ಆದೇಶ ಸಂಖ್ಯೆ: ಇಪಿ 137 ಪಿಜಿಸಿ 2024ರ ಅನ್ವಯ 2024-25ನೇ ಶೈಕ್ಷಣಿಕ ಸಾಲಿನಿಂದ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಒಟ್ಟು 872 ಸರ್ಕಾರಿ ಶಾಲೆಗಳಲ್ಲಿ ʼದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ)ʼ ತರಗತಿಗಳನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲಾವಾರು ಮಾಹಿತಿ ಈ ಕೆಳಕಂಡಂತಿದೆ.
ದ್ವಿಭಾಷಾ ತರಗತಿಗಳ ಕುರಿತು ಆದೇಶ ವೀಕ್ಷಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here